ಬೆಂಗಳೂರು: ಆಪ್ತರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಮಾಜಿ ಸಚಿವ ಎಂ.ಬಿ ಪಾಟೀಲ್ ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಸೋಂಕಿತ ವ್ಯಕ್ತಿ ಜೊತೆ ಸಂಪರ್ಕ: ಮಾಜಿ ಸಚಿವ ಎಂ.ಬಿ ಪಾಟೀಲ್ ಹೋಂ ಕ್ವಾರಂಟೈನ್ - ಮಾಜಿ ಸಚಿವ ಎಂ.ಬಿ ಪಾಟೀಲ್ ನ್ಯೂಸ್
ಕೊರೊನಾ ಪಾಸಿಟಿವ್ ಕಂಡುಬಂದ ವ್ಯಕ್ತಿಯ ಜೊತೆ ಎಂ.ಬಿ. ಪಾಟೀಲ್ ಸಂಪರ್ಕದಲ್ಲಿದ್ದ ಹಿನ್ನಲೆ ಒಂದು ವಾರ ವಿಜಯಪುರದಲ್ಲಿರುವ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಜೊತೆ ಎಂ.ಬಿ. ಪಾಟೀಲ್ ನಿನ್ನೆಯವರೆಗೂ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆ ಒಂದು ವಾರ ವಿಜಯಪುರದಲ್ಲಿರುವ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಈ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿರುವ ಎಂ.ಬಿ ಪಾಟೀಲ್, ನನ್ನ ದೈನಂದಿನ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊರೊನಾ ದೃಢಪಟ್ಟಿರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ವೈದ್ಯರ ನಿರ್ದೇಶನದಂತೆ ಒಂದು ವಾರದ ಮಟ್ಟಿಗೆ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ. ಕ್ಷೇತ್ರದ ಜನರು ತುರ್ತು ಕೆಲಸಗಳಿಗಾಗಿ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದಿದ್ದಾರೆ.