ಕರ್ನಾಟಕ

karnataka

ETV Bharat / state

ಬಿಡಿಎ ಅಕ್ರಮದ ಕುರಿತು ಸಿಎಂ ಗಮನಕ್ಕೆ ತಂದ ಮಾಜಿ ಸಚಿವ ಕೆ.ಜೆ. ಜಾರ್ಜ್ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಮಾಜಿ ಸಚಿವ ಕೆ.ಜೆ. ಜಾರ್ಜ್​ ಅವರು ಬಿಡಿಎಯ ಅಕ್ರಮದ ಕುರಿತು ಸಿಎಂ ಬಿ.ಎಸ್​​. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮಾಜಿ ಸಚಿವ ಕೆ.ಜೆ. ಜಾರ್ಜ್​ರಿಂದ ಸಿಎಂಗೆ ಪತ್ರ

By

Published : Sep 13, 2019, 7:14 PM IST

Updated : Sep 13, 2019, 10:13 PM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಕ್ರಮವಾಗಿ ಒಂಭತ್ತು ಕಾರ್ನರ್ ಸೈಟ್​​​ನ್ನು ಹಂಚಿಕೆ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಮಾಜಿ ಸಚಿವ ಕೆ.ಜೆ. ಜಾರ್ಜ್​ರಿಂದ ಸಿಎಂಗೆ ಪತ್ರ

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿ ಗ್ರಾಮದ ಸುತ್ತಮುತ್ತ ರಘುರೆಡ್ಡಿ ಬಿನ್ ರಾಮಯ್ಯ ರೆಡ್ಡಿ ಎಂಬುವವರಿಗೆ ಸೇರಿದ ಸರ್ವೆ ನಂಬರ್​​ 120, 121ರಲ್ಲಿ ಒ.ಎಂ.ಬಿ.ಆರ್ ಬಡಾವಣೆಯಲ್ಲಿ 6*40 ಅಡಿ ವಿಸ್ತೀರ್ಣದ ಒಂಭತ್ತು ಮೂಲೆ ನಿವೇಶನ ಹಂಚಿಕೆಯಾಗಿದೆ. ಕಾನೂನುಬಾಹಿರವಾಗಿ ಹಾಗೂ ಅಕ್ರಮವಾಗಿ ಅಧಿಕಾರಿಗಳು, ಅಭಿಯಂತರು ಶಾಮೀಲಾಗಿ ಈ ಅಕ್ರಮ ಎಸಗಿದ್ದಾರೆ. ಗರಿಷ್ಠ ಬೆಲೆಯ ನಿವೇಶನ ಕನಿಷ್ಠ ಬೆಲೆಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಿ ಎಂದು ಕೆ.ಜೆ.ಜಾರ್ಜ್ ಪತ್ರ ಬರೆದಿದ್ದಾರೆ. ಅಲ್ಲದೆ ಈ ನಿವೇಶನಗಳನ್ನು ಸಾರ್ವಜನಿಕ ಸೌಲಭ್ಯ ಉಪಯೋಗಕ್ಕೆ ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.

ಈ ಮೂಲಕ ಬಿಡಿಎಯ ಹಳೆಯ ಅಕ್ರಮವೊಂದು ಮತ್ತೆ ಬಯಲಿಗೆ ಬಂದಂತಾಗಿದೆ. ಈ ಕುರಿತು ಸಿಎಂ, ಬಿಡಿಎ ಆಯುಕ್ತರನ್ನು ಪ್ರಶ್ನಿಸಿದ್ದು, ಬಿಡಿಎ ತನಿಖೆಗೆ ಮುಂದಾಗಿದೆ.ಈ ಬಗ್ಗೆ ಮಾತನಾಡಿದ ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್, ನಿನ್ನೆಯಷ್ಟೆ ಈ ಪತ್ರ ನಮ್ಮ ಕೈ ತಲುಪಿದೆ. ಈ ಪ್ರಕರಣ ಏನಾಗಿದೆ ಅಂತ ಇನ್ನು ಪರಿಶೀಲಿಸಬೇಕಿದೆ. ಈ ಒಂಭತ್ತು ಸೈಟ್​​ಗಳ ವಿವರ ಪರಿಶೀಲಿಸಲಾಗುವುದು ಎಂದಿದ್ದಾರೆ.

Last Updated : Sep 13, 2019, 10:13 PM IST

ABOUT THE AUTHOR

...view details