ಕರ್ನಾಟಕ

karnataka

ETV Bharat / state

ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹತೆ: ಹೆಚ್​.ಡಿ.ರೇವಣ್ಣ ಹೇಳಿದ್ದೇನು?

ನಾವು ನ್ಯಾಯಾಲಯಕ್ಕೆ ತಲೆ ಬಾಗುತ್ತೇವೆ. ಅನರ್ಹತೆ ಕುರಿತು ಪ್ರಜ್ವಲ್ ಅವರ ಅಡ್ವೊಕೇಟ್ ಮೇಲ್ಮನವಿ ಸಲ್ಲಿಸುವ ಬಗ್ಗೆ ಯೋಚಿಸುತ್ತಾರೆ ಎಂದು ಹೆಚ್.ಡಿ.ರೇವಣ್ಣ ಹೇಳಿದರು.

former-minister-h-d-revanna-reaction-on-mp-prajwal-revanna-disqualification
ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹತೆ: ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿದ್ದೇನು?

By ETV Bharat Karnataka Team

Published : Sep 1, 2023, 7:41 PM IST

ಬೆಂಗಳೂರು: "ನಾವು ಕಾನೂನಿಗೆ, ನ್ಯಾಯಾಲಯಕ್ಕೆ ತಲೆ ಬಾಗುತ್ತೇವೆ" ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹೋದರ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ ನಂತರ, ಸಂಸದ ಹಾಗು ಪುತ್ರ ಪ್ರಜ್ವಲ್ ರೇವಣ್ಣ ಅನರ್ಹತೆಯ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾನೂನಿಗೆ ಗೌರವ ಕೊಡಬೇಕು, ನಮಗೆ ಜಡ್ಜ್‌ಮೆಂಟ್ ಕಾಪಿ ಸಿಕ್ಕಿಲ್ಲ" ಎಂದರು.

ನ್ಯಾಯಾಲಯದ ನಿರ್ಧಾರಕ್ಕೆ ಶಾಸಕ ಎ.ಮಂಜು ಸ್ವಾಗತ ಕೋರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯಾರು ಯಾಕೆ ಮಾಡಿದ್ರು ಅಂತ ಗೊತ್ತಿಲ್ಲ. ಪ್ರಜ್ವಲ್ ಅವರ ಅಡ್ವೊಕೇಟ್ ಇದ್ದಾರೆ. ವಿಷಯ ತಿಳಿದುಕೊಂಡಿದ್ದಾರೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ಯೋಚಿಸುತ್ತಾರೆ" ಎಂದು ಹೇಳಿದರು.

ಮಂಡ್ಯದಲ್ಲಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್​​ ಆದೇಶ

ABOUT THE AUTHOR

...view details