ಬೆಂಗಳೂರು: ದೋಸ್ತಿ ಸರ್ಕಾರ ಹೋಗಿ, ಹೊಸ ಸರ್ಕಾರ ರಚನೆ ಆಗುತ್ತಿದಂತೆ ಮಾಜಿ ಸಚಿವರು ತಮ್ಮ ವಿಧಾನಸೌಧದ ಕಚೇರಿಗಳನ್ನು ಖಾಲಿ ಮಾಡಿಸುತ್ತಿದ್ದಾರೆ.
ವಿಧಾನಸೌಧ ಕಚೇರಿಯಿಂದ ಪೀಠೋಪಕರಣ ಶಿಫ್ಟ್ ಮಾಡಿಸಿದ ಮಾಜಿ ಸಚಿವ ಜಿಟಿಡಿ - Vidhan Sabha office
ದೋಸ್ತಿ ಸರ್ಕಾರ ಹೋಗಿ, ಹೊಸ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ವಿಧಾನಸೌಧದ ತಮ್ಮ ಕಚೇರಿಯಲ್ಲಿನ ಪೀಠೋಪಕರಣ ಮತ್ತು ಗಣ್ಯರ ಭಾವಚಿತ್ರಗಳನ್ನು ತಮ್ಮ ನಿವಾಸಕ್ಕೆ ಕೊಂಡೊಯ್ದಿದ್ದಾರೆ.
ವಿಧಾನಸೌಧ ಕಚೇರಿಯಿಂದ ಪೀಠೋಪಕರಣ ಶಿಫ್ಟ್ ಮಾಡಿಸಿದ ಮಾಜಿ ಸಚಿವ ಜಿ.ಟಿ.ದೇವೇಗೌಡ
ಹೊಸ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ವಿಧಾನಸೌಧದ ತಮ್ಮ ಕಚೇರಿ ಖಾಲಿ ಮಾಡಿದ್ದಾರೆ. ಜಿ.ಟಿ.ದೇವೇಗೌಡರು ಸ್ವಂತ ಖರ್ಚಿನಲ್ಲಿ ಪೀಠೋಪಕರಣಗಳನ್ನು ಖರೀದಿಸಿ, ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಇರಿಸಿದ್ದರು. ಸೋಫಾ ಸೆಟ್, ಗಣ್ಯರ ಭಾವಚಿತ್ರಗಳನ್ನೂ ಸ್ವಂತ ಖರ್ಚಿನಲ್ಲಿ ಕಚೇರಿಯಲ್ಲಿ ಹಾಕಿಸಿದ್ದರು.
ಹೊಸ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಕಚೇರಿಯಲ್ಲಿನ ಪೀಠೋಪಕರಣ ಮತ್ತು ಗಣ್ಯರ ಭಾವಚಿತ್ರಗಳನ್ನು ತಮ್ಮ ನಿವಾಸಕ್ಕೆ ಕೊಂಡೊಯ್ದಿದ್ದಾರೆ.