ಬೆಂಗಳೂರು:ರಾಜಕೀಯ ಗೊಂದಲಗಳ ನಡುವೆಯೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕ್ರಿಕೆಟ್ ಬ್ಯಾಟ್ ಹಿಡಿದು ಸಿಕ್ಸರ್, ಬೌಂಡರಿ ಬಾರಿಸಿ ಸಂಭ್ರಮಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಪೆಸಿಟ್ ಕಾಲೇಜ್ ಸಹಭಾಗಿತ್ವದಲ್ಲಿ ನಡೆಸಿದ ಮೀಡಿಯಾ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದ ಮಾಜಿ ಸಚಿವ ಡಿಕೆಶಿ, ಬ್ಯಾಟ್ ಹಿಡಿದು ಸಿಕ್ಸರ್, ಬೌಂಡರಿ ಹೊಡೆದು ಖುಷಿ ಪಟ್ಟರು. ಅಲ್ಲದೆ ಒಂದು ಓವರ್ ಬೌಲಿಂಗ್ ಮಾಡಿ ಎಂಜಾಯ್ ಮಾಡಿದ್ರು.
ಕ್ರಿಕೆಟ್ ಆಡಿದ ಡಿ.ಕೆ ಶಿವಕುಮಾರ್ ಡಿ.ಕೆ ಶಿವಕುಮಾರ್ ಸುಮಾರು ಒಂದು ಗಂಟೆ ಕಾಲ ಮಾಧ್ಯಮ ಸ್ನೇಹಿತರ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕಾಲಕಳೆದರು. ಸುಮಾರು 40 ವರ್ಷಗಳ ನಂತರ ನಾನು ಕ್ರಿಕೆಟ್ ಆಡಿದ್ದೇನೆ. ಎಲ್ಲ ಮಾಧ್ಯಮ ಸ್ನೇಹಿತರು ಕೆಲಸದ ಒತ್ತಡದ ನಡುವೆಯೂ ಎರಡು ದಿನಗಳ ಕಾಲ ಟೂರ್ನಿಯನ್ನು ಆಯೋಜಿಸುವುದು ತುಂಬಾ ಖುಷಿಯ ಸಂಗತಿ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ಮತ್ತು ಮಾಧ್ಯಮದವರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಮಾಧ್ಯಮದವರು ನನ್ನನ್ನು ಹೊಗಳಿದ್ರೂ ತೆಗಳಿದ್ರೂ ನಾನು ಸದಾ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನೀವು ಏನೇ ಮಾಡಿದರೂ ಅದು ಒಳ್ಳೆಯದಕ್ಕೆ ಎಂಬುದು ನನಗೆ ಗೊತ್ತು. ಮಾಧ್ಯಮದವರು ರಾಜಕಾರಣಿಗಳ ರೀತಿ ಕಿತ್ತಾಡದೆ ಒಗ್ಗಟ್ಟಾಗಿರಿ ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದ್ರು.
ಅಲ್ಲದೆ ರಾಜ್ಯದ ಎಲ್ಲಾ ರಾಜಕಾರಣಿಗಳ ಪರವಾಗಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿರುವ ಪತ್ರಕರ್ತರನ್ನು ಒಂದು ಕಡೆ ಸೇರಿಸಿ ಇದೇ ರೀತಿ ಕ್ರಿಕೆಟ್ ಟೂರ್ನ್ಮೆಂಟ್ ನಡೆಸಿ ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷರಿಗೆ ಡಿಕೆಶಿ ಸಲಹೆ ನೀಡಿದ್ರು.
ಮೀಡಿಯಾ ಕಪ್ಗೆ ಚಾಲನೆ ನೀಡಿದ ಡಿ.ಕೆ ಶಿವಕುಮಾರ್ ಅವರಿಗೆ ಬೆಂಗಳೂರು ಪ್ರೆಸ್ಕ್ಲಬ್ ವತಿಯಿಂದ ಸನ್ಮಾನ ಮಾಡಿದ್ರು.ಈ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಹಾಗೂ ಪ್ರೆಸ್ ಕ್ಲಬ್ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ತಂಡಗಳು ಭಾಗವಹಿಸಿದ್ದವು.