ಕರ್ನಾಟಕ

karnataka

ETV Bharat / state

ಮಾಜಿ ಮೇಯರ್ ಸಂಪತ್ ರಾಜ್​​ಗೆ ಕಂಟಕ : ಮೊಬೈಲ್ ರಿಟ್ರೀವ್ ಮೇಲೆ ನಿಂತಿದೆ ಭವಿಷ್ಯ - Bangalore Former Mayor Sampath Mobile Retrieve News

ಸದ್ಯ ಸಿಸಿಬಿ ಪೊಲೀಸರು ಸಂಪತ್ ಅವರನ್ನು ಪಿಎ ಅರುಣ್ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಸಂಪತ್ ಮತ್ತು ಅರುಣ್ ಅವರ ಮೊಬೈಲ್​ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಾಜಿ ಮೇಯರ್ ಸಂಪತ್ ರಾಜ್​​ಗೆ ಕಂಟಕ
ಮಾಜಿ ಮೇಯರ್ ಸಂಪತ್ ರಾಜ್​​ಗೆ ಕಂಟಕ

By

Published : Aug 19, 2020, 10:07 AM IST

ಬೆಂಗಳೂರು : ಡಿ.ಜೆ ಹಳ್ಳಿ ಹಾಗೂ ಕೆ. ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿಯಿಂದ ಮಾಜಿ ಮೇಯರ್ ಸಂಪತ್ ರಾಜ್​​ ಪ್ರಾಥಮಿಕ ವಿಚಾರಣೆ ನಡೆದಿದೆ. ಸದ್ಯ ಸಿಸಿಬಿ ಪೊಲೀಸರು ಸಂಪತ್ ರಾಜ್​ ಅವರ ಪಿಎ ಅರುಣ್ ನನ್ನ ತೀವ್ರವಾಗಿ ವಿಚಾರಣೆ ನಡೆಸುತ್ತಿರುವ ವಿಚಾರ ಈ ಟಿವಿ ಭಾರತಗೆ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಅರುಣ್ ಮತ್ತು ಸಂಪತ್ ರಾಜ್​ ನಡುವೆ ಇದೆ ತುಂಬಾ ಆತ್ಮೀಯ ಸಂಬಂಧ

ಪ್ರಾಥಮಿಕವಾಗಿ ತನಿಖೆ ನಡೆಸಿ ಮಾಜಿ ಮೇಯರ್ ಸಂಪತ್ತ್ ರಾಜ್ ಅವರನ್ನ ಬಿಟ್ಟಿದ್ದು, ಟೆಕ್ನಿಕಲ್ ಆಗಿ ಸ್ಟ್ರಾಂಗ್ ಸಾಕ್ಷಿ ಇಟ್ಟುಕೊಂಡು ಬಂಧನ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಪಿಎ ಅರುಣ್ ಹಾಗೂ ಸಂಪತ್ ರಾಜ್ ನಡುವಿನ ಸಂಬಂಧದ ಬಗ್ಗೆ ಪೊಲೀಸರು‌ ಮಫ್ತಿಯಲ್ಲಿ ಕಲೆ ಹಾಕಿದ್ದಾರೆ. ಇವರಿಬ್ಬರು ಇಂಗ್ಲೀಷ್ ನಲ್ಲಿ ಕಮ್ಯೂನಿಕೇಷನ್ ಮಾಡುತ್ತಿದ್ದು, ಇಂಗ್ಲಿಷ್​​ನಲ್ಲೇ ವ್ಯವಹಾರ ನಡೆಸುತ್ತಾರೆ. ಇಬ್ಬರ ವ್ಯವಹಾರ ಬೇರೆಯವರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಇವರು ಇಂಗ್ಲಿಷ್​ ಬಳಕೆ ಮಾಡುತ್ತಾರೆ ಎಂಬ ಅಂಶವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇನ್ನೂ ಸಂಪತ್ ರಾಜ್ ಬಿಬಿಎಂಪಿ ಮೇಯರ್ ಆದಾಗ ಬಹುತೇಕ ಯೋಜನೆಗಳ ಕಂಟ್ರಾಕ್ಟಗಳನ್ನ ‌ಈ ಅರುಣ್ ನೋಡಿಕೊಂಡಿದ್ದ. ಹಾಗೆ ಎಲ್ಲ ಸ್ಕೈ ವಾಕ್ ಕಾಮಗಾರಿಗಳನ್ನ ಅರುಣ್ ಮೂಲಕ ಸಂಪತ್ ರಾಜ್ ತನ್ನ ಎಲ್ಲ ಕೆಲಸಗಳನ್ನು ಇವರು ಮಾಡುತ್ತಿದ್ದರು. ಇಬ್ಬರ ನಡುವೆ ಸಾಕಷ್ಟು ವ್ಯವಹಾರ ಇರೋದು ಪತ್ತೆಯಾಗಿದೆ. ಸದ್ಯ ಸಂಪತ್ ರಾಜ್ ಮೊಬೈಲ್ ರಿಟ್ರೀವ್ ಮಾಡಿದರೆ ಮತ್ತಷ್ಟು ಅಂಶ ಬಯಲಾಗಲಿದೆ. ಸದ್ಯ ಸಂಪತ್ ರಾಜ್ ಮೊಬೈಲ್ ವಶಕ್ಕೆ ಪಡೆದಿದ್ದು, ಮಡಿವಾಳ ಎಫ್ ಎಸ್ ಎಲ್ ಕಚೇರಿಯಲ್ಲಿ ರಿಟ್ರೀವ್ ಮಾಡಲಾಗುತ್ತಿದೆ.

ಮೊಬೈಲ್ ರಿಟ್ರೀವ್ ಆದ ತಕ್ಷಣ ಕಾದಿದೆಯಾ ಮಾಜಿ ಮೇಯರ್​ಗೆ ಸಂಕಷ್ಟ

ಸದ್ಯ ಗಲಭೆಕೋರಲ್ಲಿ ಪ್ರಮುಖರಾದ ವಾಜಿದ್ ಸಮಿಯುದ್ದೀನ್ , ಪರೋಜ್ ಹಾಗೆ ಇತರರ ಜೊತೆ ಮಾಜಿ ಮೇಯರ್ ಪಿಎ ಅರುಣ್ ವಾಟ್ಸ್​​ಆ್ಯಪ್​​ ಕಾಲ್ ಮುಖಾಂತರ ನಿರಂತರ ಸಂಪರ್ಕದಲ್ಲಿದ್ದ. ಗಲಭೆಕೋರರ ಜೊತೆ ಪಿಎ ಅರುಣ್​​​​​ಗೆ ಏನ್ ಕೆಲಸ , ಅನ್ನೋ ಕುರಿತು ತನಿಖೆ ಮುಂದುವರೆದಿದೆ. ಮತ್ತೊಂದೆಡೆ ಮಾಜಿ ‌ಮೇಯರ್ ಸಂಪತ್ ರಾಜ್, ಅರುಣ್ ಮೊಬೈಲ್​​​​ನಲ್ಲಿ ಮಾತನಾಡಿರುವ ಗುಮಾನಿ ಈಗಾಗಲೇ ಸಿಸಿಬಿಗೆ ಸಿಕ್ಕಿದೆ. ಸದ್ಯ ಮೊಬೈಲ್ ರಿಟ್ರೀವ್ ಆದಾಗ ಸತ್ಯಾಂಶ ಹೊರಬರಲಿದೆ. ಅಲ್ಲಿಯವರೆಗೆ ಸಿಸಿಬಿ ಸಾಕ್ಷಗಳ ಹುಡುಕಾಟದಲ್ಲಿ ನಿರತವಾಗಿದೆ.

ABOUT THE AUTHOR

...view details