ಬೆಂಗಳೂರು:ನಿವೃತ್ತ ಲೋಕಾಯುಕ್ತ ಜಸ್ಟೀಸ್ ವೆಂಕಟಾಚಲ ಇಂದು ಬೆಳ್ಳಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ನಗರದ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಲ್ಕು ಜನ ಮಕ್ಕಳನ್ನು ಹೊಂದಿದ್ದ ವೆಂಕಟಾಚಲ ಮೂರು ಜನ ಗಂಡು ಮಕ್ಕಳು, ಒಬ್ಬಳು ಪುತ್ರಿಯನ್ನ ಅಗಲಿದ್ದಾರೆ.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ನಿಧನ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲ ನಿಧನ ಹೆಂಡತಿ ಅನುಶ್ರೀಯಾ, ಪುತ್ರರಾದ ಶೇಷಾಚಲ, ವೇದಾಚಲ, ಅರ್ಜುನಾಚಲ ಮತ್ತು ಮಗಳಾದ ಅರುಣಾಚಲರನ್ನು ವೆಂಕಟಾಚಲ ಅವರು ಅಗಲಿದ್ದಾರೆ. ಇಲ್ಲಿನ ಸದಾಶಿವ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಮಯ್ಯ ಆಸ್ಪತ್ರೆಯಿಂದ ವೆಂಕಟಾಚಲ ಮೃತದೇಹವನ್ನು ಅವರ ಮನೆಗೆ ತರಲಾಗಿದ್ದು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಇನ್ನು ಸಿಎಂ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯ ಸುತ್ತ ಖಾಕಿ ಕಣ್ಗಾವಲು ಇಟ್ಟಿದ್ದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ.
ಈ ನಡುವೆ ಹಲವು ರಾಜಕೀಯ ಗಣ್ಯರು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿಗಳ ಅಂತಿಮ ದರ್ಶನ ಪಡೆದರು. ’’ಬದುಕಿನುದ್ದಕ್ಕೂ ಸರಳ ಪ್ರಾಮಾಣಿಕತೆ ಪ್ರತಿಪಾದಕರಾಗಿದ್ರು ನ್ಯಾ. ವೆಂಕಟಾಚಲ .ಅವ್ರ ಅಗಲಿಕೆ ನ್ಯಾಯಾಂಗ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಬಹುದೊಡ್ಡ ಗಣಿಯನ್ನು ಕಳೆದುಕೊಂಡ ರೀತಿಯಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಕುಟುಂಬಕ್ಕೆ ಶಕ್ತಿ ನೀಡಲಿ. ಹಾಗೆ ರಾಜ್ಯ ಸರ್ಕಾರ ಸಕಲ ಗೌರವದೊಂದಿಗೆ ವೆಂಕಟಾಚಲ ಅವರ ಅಂತ್ಯ ಸಂಸ್ಕಾರವನ್ನ ಮಾಡಲಿದೆ ’’ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಇನ್ನು ಅಂತಿಮ ದರ್ಶನ ಪಡೆದ ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾತಾಡಿ, ’’ಕರ್ನಾಟಕದ ಉಚ್ಚ ನ್ಯಾಯಾಲಯ, ಸುಪ್ರೀಂಕೋರ್ಟ್, ನಂತರ ಕರ್ನಾಟಕ ಲೋಕಾಯುಕ್ತದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು. ಅವರು ನನಗೆ ಬಹಳ ಆತ್ಮೀಯರಾಗಿದ್ದರು. ಅವರ ಆಗಲಿಕೆಯಿಂದ ಸಮಾಜ ಒಂದು ಒಳ್ಳೆ ವ್ಯಕ್ತಿಯನ್ನ ಕಳೆದು ಕೊಂಡಿದೆ. ಅವರ ಹೆಸರು ಬಹಳ ಪ್ರಸಿದ್ದವಾಗಿರುವುದು ಲೋಕಾಯುಕ್ತದಿಂದಲೇ’’ ಎಂದು ಸ್ಮರಿಸಿದರು.