ಬೆಂಗಳೂರು:ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಆರ್ ಪುರದ ಬಸವನಪುರ ವಾರ್ಡ್ನ ಶೀಗೇಹಳ್ಳಿಯಲ್ಲಿ ಅನರ್ಹ ಶಾಸಕ ಬೈರತಿ ಬಸವರಾಜ ಸುಮಾರು ಹತ್ತು ಸಾವಿರ ಮಹಿಳೆಯರಿಗೆ ಅರಿಶಿನ, ಕುಂಕುಮ, ಬಳೆ, ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ ಹಬ್ಬದ ಶುಭಾಶಯ ಕೋರಿದರು.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಬಾಗಿನ ನೀಡಿದ ಅನರ್ಹ ಶಾಸಕ ಬೈರತಿ ಬಸವರಾಜ್ - ಗೌರಿ- ಗಣೇಶ ಹಬ್ಬದ ಶುಭಾಶಯ
ಅನರ್ಹ ಶಾಸಕ ಬೈರತಿ ಬಸವರಾಜ ಅವರು ಕೆಆರ್ ಪುರದ ಬಸವನಪುರ ವಾರ್ಡ್ನ ಶೀಗೇಹಳ್ಳಿಯಲ್ಲಿ ಸುಮಾರು ಹತ್ತು ಸಾವಿರ ಮಹಿಳೆಯರಿಗೆ ಅರಿಶಿನ, ಕುಂಕುಮ, ಬಳೆ, ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ ಗೌರಿ- ಗಣೇಶ ಹಬ್ಬದ ಶುಭಾಶಯ ಕೋರಿದರು.
ಕಳೆದ ಹತ್ತು ವರ್ಷಗಳಿಂದ ಕೆಆರ್ ಪುರ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದುಕೊಂಡು ಅವರಿಗೆ ಅವಶ್ಯಕ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ನಾನು ಯಾವುದೇ ಪಕ್ಷದಲ್ಲಿರಲಿ ಸೇವೆ ಮಾತ್ರ ನಿಲ್ಲಿಸಲ್ಲ. ವ್ಯಕ್ತಿ ನೋಡಿ, ಪಕ್ಷ ನೋಡಬೇಡಿ ಅಭಿವೃದ್ಧಿಗೋಸ್ಕರ ಅಧಿಕಾರ ತ್ಯಾಗ ಮಾಡಿದವನು ನಾನು, ಜನರ ಸೇವೆಯೇ ನನಗೆ ಮುಖ್ಯ ಎಂದರು.
ಮಹಿಳೆಯರಿಗೆ ಪ್ರತಿ ವರ್ಷ ಗೌರಿ ಹಬ್ಬಕ್ಕೆ ಅರಿಶಿನ, ಕುಂಕುಮ ಬಳೆ ಜೊತೆಗೆ ಸೀರೆ ಕೊಡುವುದನ್ನು ಮಾಡುತ್ತಿದ್ದೇನೆ. ಪ್ರತಿ ವರ್ಷವೂ ಇದು ಮುಂದುವರೆಯುತ್ತದೆ. ಕೆಆರ್ ಪುರ ಕ್ಷೇತ್ರದ ಎಲ್ಲಾ ವಾರ್ಡ್ಗಳಲ್ಲಿ ಬಾಗಿನ ಕೊಡುವ ಕಾರ್ಯ ನಡೆಯುತ್ತದೆ. ನಾಳೆನೂ ರಾಮಮೂರ್ತಿ ನಗರ ವಾರ್ಡಿನ ಎನ್ಆರ್ಐ ಕಾಲೋನಿಯಲ್ಲಿ ಬಾಗಿನ ನೀಡುತ್ತಿದ್ದೇವೆ ಎಂದು ಹೇಳಿದರು.