ಕರ್ನಾಟಕ

karnataka

ETV Bharat / state

ರೈತರಿಗೆ ದಾಖಲೆ ನೀಡಬೇಡಿ ಎಂದಿಲ್ಲ, ಶಾಸಕರನ್ನು ಪ್ರಶ್ನಿಸಿದ್ದೇನೆ ಅಷ್ಟೇ: ಕೋಡಿಹಳ್ಳಿ ಚಂದ್ರಶೇಖರ್ - ಚಂದ್ರಶೇಖರ್ ನೇತೃತ್ವದ ಸಮಿತಿ ನೊಟೀಸ್ ಜಾರಿ

ಬಿಡಿಎ ಕೈಗೊಂಡಿರುವ ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ 2018ಕ್ಕೂ ಮೊದಲು ನಿರ್ಮಾಣವಾದ ಕಟ್ಟಡ-ಮನೆಗಳ ದಾಖಲೆ ಪರಿಶೀಲಿಸಲು ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.

kodihalli-chandrashekar-talk
ಕೋಡಿಹಳ್ಳಿ ಚಂದ್ರಶೇಖರ್

By

Published : Mar 13, 2021, 7:17 PM IST

ಬೆಂಗಳೂರು:ಸುಪ್ರೀಂ ಕೋರ್ಟ್ ತೀರ್ಪಿನ ನಿಂದನೆಯಾಗಿದೆ. ಜೊತೆಗೆ ಸಮಿತಿಯ ಕೆಲಸಕ್ಕೆ ಭಂಗ ಉಂಟಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಸಮಿತಿ ನೋಟಿಸ್ ಜಾರಿ ಮಾಡಿದೆ.

ಕೋಡಿಹಳ್ಳಿ ಚಂದ್ರಶೇಖರ್

ಓದಿ: ರಮೇಶ್​ ಜಾರಕಿಹೊಳಿ ರಾಸಲೀಲೆ ಪ್ರಕರಣ.. ಆರೋಪಿಯ ಜತೆಗೆ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಎಸ್​ಐಟಿ ವಶಕ್ಕೆ

ಬಿಡಿಎ ಕೈಗೊಂಡಿರುವ ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ 2018ಕ್ಕೂ ಮೊದಲು ನಿರ್ಮಾಣವಾದ ಕಟ್ಟಡ-ಮನೆಗಳ ದಾಖಲೆ ಪರಿಶೀಲಿಸಲು ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.

ಯಾವುದೇ ದಾಖಲೆ ನೀಡಬೇಡಿ ಎಂಬ ಮೊಬೈಲ್ ಸಂದೇಶವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹದಿನೇಳು ಹಳ್ಳಿಗಳ ನಿವಾಸಿಗಳಿಗೆ ಕಳಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ನಿಂದನೆಯಾಗಿದೆ. ಜೊತೆಗೆ ಸಮಿತಿಯ ಕೆಲಸಕ್ಕೆ ಭಂಗ ಉಂಟಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಮಿತಿ ನೋಟಿಸ್​​​ ಜಾರಿ ಮಾಡಿದೆ.

ಆದರೆ ಈ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ 5-03-21ರವರೆಗೆ ಯಾವುದೇ ದಾಖಲೆ ನೀಡಬೇಡಿ ಎಂಬ ಮೊಬೈಲ್ ಸಂದೇಶವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹದಿನೇಳು ಹಳ್ಳಿಗಳ ನಿವಾಸಿಗಳಿಗೆ ಕಳಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ನಿಂದನೆಯಾಗಿದೆ. ಜೊತೆಗೆ ಸಮಿತಿಯ ಕೆಲಸಕ್ಕೆ ಭಂಗ ಉಂಟಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಮಿತಿ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಮಾರ್ಚ್ 15ರ ಒಳಗೆ ಸ್ಪಷ್ಟೀಕರಣ ಕೊಡುವಂತೆ ಕೇಳಿದೆ.

ಇದಕ್ಕೆ ಪೂರಕವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್, ನಾನು ಎಲ್ಲಿಯೂ ಕಮಿಟಿ ಅಥವಾ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖ ಮಾಡಿಲ್ಲ. ಕೇವಲ ರೈತರನ್ನು ಉದ್ದೇಶಿಸಿ ಮಾತಾಡಿ, ಬಿಡಿಎ ಬಗ್ಗೆ ಮಾತನಾಡಿದ್ದೇನೆ. ಬಿಡಿಎ ಶಿವರಾಮ ಕಾರಂತ ಬಡಾವಣೆ ಉದ್ದೇಶಿತ ಜಾಗದಲ್ಲಿ ಎಷ್ಟು ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದೆ, 24 ಅಪಾರ್ಟ್​ಮೆಂಟ್​​ಗಳಿಗೆ ಸಾವಿರಾರು ಮನೆ ಕಟ್ಟಲು ಅನುಮತಿ ಕೊಟ್ಟಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅದಲ್ಲದೆ ವಿಡಿಯೋ ತುಣುಕಿನಲ್ಲಿ ಕೇವಲ ಕ್ಷೇತ್ರದ ಶಾಸಕರಾದ ವಿಶ್ವನಾಥ್ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಆದರೆ ನಮ್ಮನ್ನೇ ಪ್ರಶ್ನೆ ಮಾಡಿದ್ದೀರಿ ಅಂದುಕೊಂಡು, ತಪ್ಪಾಗಿ ಗ್ರಹಿಸಿ ನೋಟಿಸ್ ನೀಡಿದ್ದಾರೆ. ಸುಪ್ರೀಂ ಕೋರ್ಟ್ ತಪ್ಪು ಮಾಡಿದರೂ ನಾವು ಪ್ರಶ್ನೆ ಮಾಡ್ತೇವೆ. ನ್ಯಾಯಾಂಗ ತಪ್ಪು ಮಾಡಿದಾಗ ಪ್ರಜೆಗಳೇ ಕೇಳಬೇಕು. ತಪ್ಪನ್ನು ಕೇಳಿದಾಗ ನೋಟಿಸ್ ಕೊಡುವುದು ಸರ್ವಾಧಿಕಾರ ಆಗಲ್ವೇ ಎಂದು ಪ್ರತ್ಯುತ್ತರ ನೀಡಿದರು.

ಮಾರ್ಚ್ 24ರಂದು ಬೃಹತ್ ಪ್ರತಿಭಟನೆ:

12 ವರ್ಷದ ಬಳಿಕ ಮತ್ತೆ ಬಡಾವಣೆ ನಿರ್ಮಾಣಕ್ಕೆ ಹೊರಟಿರುವುದು, ಕಟ್ಟಿರುವ ಮನೆಗಳನ್ನು ಒಡೆದು ಹಾಕಲು ಮುಂದಾಗಿರುವುದು ಎಷ್ಟು ಸರಿ. ಹೀಗಾಗಿ ಯೋಜನೆ ಮಾಡಲು ಭೂಮಿ ಲಭ್ಯ ಇಲ್ಲ ಎಂದು ಈ ಯೋಜನೆಯನ್ನೇ ಸರ್ಕಾರ ಕೈ ಬಿಡಬೇಕಿದೆ. ಇದೇ ಮಾತನ್ನು ಶಾಸಕ ವಿಶ್ವನಾಥ್ ಕೂಡ ಹಿಂದೆ ಹೇಳಿದ್ದರು. ಹೀಗಾಗಿ ಬಿಡಿಎ ಅಧ್ಯಕ್ಷರಾದ ಮೇಲೆ ಯಾಕೆ ಮಾತು ಬದಲಾಯಿಸಿದರು.

ಇದನ್ನು ಪ್ರಶ್ನಿಸಿ ಮಾರ್ಚ್ 24ರಂದು ನೊಂದ ಜನರು ಬೃಹತ್ ಸಂಖ್ಯೆಯಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಬಿಡಿಎ ಮುತ್ತಿಗೆ ಹಾಕಲಾಗುತ್ತದೆ. ಜನರಿಗೆ ಕೊಟ್ಟ ವಾಗ್ದಾನವನ್ನು ಈಡೇರಿಸಲು ವಿಶ್ವನಾಥರಿಗೆ ಒತ್ತಾಯಿಸುತ್ತೇವೆ‌ ಎಂದರು.

ಇನ್ನು ಬಡಾವಣೆಗೆ ಅಧಿಸೂಚಿತ ಜಾಗದಲ್ಲಿರುವ ರೈತರು ಮಾತನಾಡಿ, ಬಡಾವಣೆ ಯೋಜನೆಯನ್ನು ಹೈಕೋರ್ಟ್ ರದ್ದುಪಡಿಸುವುದು 2014ರ ನಂತರ ಕಟ್ಟಿದ ಅನೇಕ ಕಟ್ಟಡಗಳಿವೆ. ರೆವೆನ್ಯೂ ಜಾಗಗಳಲ್ಲಿಯೇ ಇವೆ. ಕೃಷಿಭೂಮಿಯಲ್ಲೂ ಅಭಿವೃದ್ಧಿಪಡಿಸಿರುವುದಕ್ಕೆ ಬಿಡಿಎ ನ್ಯಾಯ ಒದಗಿಸಬೇಕು.

ಲಕ್ಷಾಂತರ ಗಿಡಮರಗಳು ಇವೆ. ಬಡಾವಣೆ ಹೆಸರಲ್ಲಿ ಕಡಿಯುವುದರಿಂದ ಬೆಂಗಳೂರಿನ ಗ್ರೀನ್ ಸಿಟಿ ಹೆಸರಿಗೆ ಅಡ್ಡಿಯಾಗುತ್ತದೆ. 7-8 ಸಾವಿರ ಮನೆಗಳಿವೆ ಎಂದು ಸಮಿತಿಯೇ ಹೇಳಿದೆ. ಎಲ್ಲವೂ ರೆವೆನ್ಯೂ ಜಾಗಗಳೇ. ಬಡವರು ಆಗಿರುವುದರಿಂದ ಅಲ್ಲಿ ಜಾಗ ಪಡೆದು ಮನೆ ಕಟ್ಟಿದ್ದಾರೆ. ಅರ್ಕಾವತಿ ಬಡಾವಣೆ ರೈತರು ಪರಿಹಾರ ಸಿಗದೆ ಇನ್ನೂ ಅಲೆಯುತ್ತಿದ್ದಾರೆ.

ಅಲ್ಲಿಗೆ ನಮ್ಮಂತ‌ ರೈತರ ಗತಿ ಏನು? ಸಣ್ಣ ರೈತರು ಮುಂದೆ ಹೇಗೆ ಜೀವನ ನಡೆಸಬೇಕು. 1894 ಕಾಯ್ದೆ ಪ್ರಕಾರ ಪರಿಹಾರ ಬೇಡ. 2013ರ ಪ್ರಕಾರವೇ ನಮಗೆ ಪರಿಹಾರ ಕೊಡಲಿ. ಸಣ್ಣ ರೈತರಿಗೆ ಮೊದಲಿಗೆ ಬೇರೆ ಕಡೆ ಜಾಗ ಕೊಡಿ ಎಂದು ಆಗ್ರಹಿಸಿದರು.

ABOUT THE AUTHOR

...view details