ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ಮುಂದುವರೆಸಿದ್ದಾರೆ.
ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಡೆ ಮೂಗಿನ ಮೇಲೆ ತುಪ್ಪ ಸವರಿದಂತೆ: ದಿನೇಶ್ ಗುಂಡೂರಾವ್ - Dinesh Gundurao latest news
ಬಾಕಿ ಇದ್ದ 6 ತಿಂಗಳ ಸಾಲದ ಕಂತಿನ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಡೆ ಮೂಗಿನ ಮೇಲೆ ತುಪ್ಪ ಸವರುವ ಕ್ರಮ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
![ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಡೆ ಮೂಗಿನ ಮೇಲೆ ತುಪ್ಪ ಸವರಿದಂತೆ: ದಿನೇಶ್ ಗುಂಡೂರಾವ್ Dinesh Gundurao](https://etvbharatimages.akamaized.net/etvbharat/prod-images/768-512-9035377-98-9035377-1601721753428.jpg)
ಇಂದು ಸಹ ಟ್ವೀಟ್ ಮಾಡಿರುವ ಅವರು, ಬಾಕಿ ಇದ್ದ 6 ತಿಂಗಳ ಸಾಲದ ಕಂತಿನ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಕೇಂದ್ರದ ನಡೆ ಮೂಗಿನ ಮೇಲೆ ತುಪ್ಪ ಸವರುವ ಕ್ರಮ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕಣ್ಣೊರೆಸುವ ತಂತ್ರ. ಇಎಂಐನಲ್ಲಿ ಮೊದಲೇ ಬಡ್ಡಿ ಒಳಗೊಂಡಿರುತ್ತೆ. ಸದ್ಯ ಬಾಕಿ ಉಳಿಸಿಕೊಂಡ ಇಎಂಐಗೂ ಬಡ್ಡಿಯ ಜೊತೆ ಚಕ್ರಬಡ್ಡಿ ವಿಧಿಸುತ್ತಿವೆ. ಚಕ್ರಬಡ್ಡಿ ಮಾತ್ರ ಮನ್ನಾ ಮಾಡಿದರೆ ಪ್ರಯೋಜನವೇನು? ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಸಹ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ದಿನೇಶ್ ಗುಂಡೂರಾವ್, ನರೇಂದ್ರ ಮೋದಿಯವರೇ, ಅನಾರೋಗ್ಯಕ್ಕೀಡಾದವರಿಗೆ ಶುಭ ಹಾರೈಸುವುದು ಉತ್ತಮ ಸಂಪ್ರದಾಯ. ಟ್ರಂಪ್‌ಗಾಗಿ ಮಿಡಿದ ನಿಮ್ಮ ಹೃದಯ, ಉತ್ತರಪ್ರದೇಶದ ಬಾಲಕಿಯ ಗ್ಯಾಂಗ್‌ರೇಪ್ ವಿಚಾರದಲ್ಲಿ ಮಿಡಿಯಲೇ ಇಲ್ಲ ಯಾಕೆ? ಬಾಯಿ ಬಿಟ್ಟರೆ ನಿಮ್ಮ ಶಿಷ್ಯ ಯೋಗಿ ಆದಿತ್ಯನಾಥ್ ಸರ್ಕಾರದ ಬಂಡಾವಳ ಬಯಲಾಗುತ್ತೆ ಎನ್ನುವ ಭಯವೆ ಎಂದು ವ್ಯಂಗ್ಯವಾಡಿದ್ದರು.