ಬೆಂಗಳೂರು : ತಜ್ಞರು ನೀಡಿರುವ ಲಾಕ್ಡೌನ್ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಜ್ಞರು ಲಾಕ್ಡೌನ್ ಮಾಡಲು ಸಲಹೆ ನೀಡಿದರೆ, ರಾಜ್ಯ ಸರ್ಕಾರ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು.
ರಾಜ್ಯ ಸರ್ಕಾರ ಈಗಾಗಲೇ ತಜ್ಞರ ಸಲಹೆ ಕಡೆಗಣಿಸಿ ಆಗಬಾರದ ಅನಾಹುತಕ್ಕೆ ನೇರ ಕಾರಣವಾಗಿದೆ. ಒಂದೊಮ್ಮೆ ಲಾಕ್ಡೌನ್ ಅನಿವಾರ್ಯವಾದರೆ ಕೇರಳ ಮಾದರಿ ಅನುಸರಿಸಲಿ. ಬಡವರ್ಗಕ್ಕೆ ಜೀವನ ಭದ್ರತೆ ಹಾಗೂ ಆಹಾರ ಭದ್ರತೆ ಕಲ್ಪಿಸಿ ಲಾಕ್ಡೌನ್ ಮಾಡಲಿ ಎಂದಿದ್ದಾರೆ.
ಸರಿಯಾದ ಕ್ರಮ :ಸುಪ್ರೀಂಕೋರ್ಟ್ ತೀರ್ಪು ಬೆಂಬಲಿಸಿರುವ ಅವರು, ಆಕ್ಸಿಜನ್ ಕೊಡಲು ತಗಾದೆ ಎತ್ತಿ ಸುಪ್ರೀಂ ಮೆಟ್ಟಿಲೇರಿದ್ದ ಕೇಂದ್ರಕ್ಕೆ ಬೆಂಡೆತ್ತಿರುವುದು ಸರಿಯಾದ ಕ್ರಮ.
ಜನರ ಪ್ರಾಣವಾಯುವಿಗೂ ಸಂಚಕಾರ ತರುವ ಈ ಕೇಂದ್ರ ಸರ್ಕಾರಕ್ಕೆ ಮನುಷ್ಯತ್ವ ಇಲ್ಲವೆ? ಇವರಿಗೆ ರಾಜ್ಯದ ಜನ ಮನುಷ್ಯರಂತೆ ಕಾಣಿಸುತ್ತಿಲ್ಲವೆ? ಬೆನ್ನುಮೂಳೆಯಿಲ್ಲದ ಬಿಜೆಪಿಯ 25 ಸಂಸದರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.