ಕರ್ನಾಟಕ

karnataka

ETV Bharat / state

ಬಹು ಅಂಗಾಂಗ ವೈಫಲ್ಯದಿಂದ ನಿವೃತ್ತ ಡಿಜಿಪಿ ಆರ್​ಪಿ ಶರ್ಮಾ ವಿಧಿವಶ - Former DGP RP Sharma died for Multiple organ failure

ಡಿಜಿಪಿಯಾಗಿ ನಿವೃತ್ತಿ ಹೊಂದಿದ್ದ ಆರ್​ಪಿ ಶರ್ಮಾ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಕೆಲ ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದರು, ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಆರ್​ಪಿ ಶರ್ಮಾ ವಿಧಿವಶ
ಆರ್​ಪಿ ಶರ್ಮಾ ವಿಧಿವಶ

By

Published : Feb 4, 2021, 4:43 AM IST

Updated : Feb 4, 2021, 9:31 AM IST

ಬೆಂಗಳೂರು: ಆನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಆರ್​ಪಿ ಶರ್ಮಾ ಬುಧವಾರ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.

ಡಿಜಿಪಿಯಾಗಿ ನಿವೃತ್ತಿ ಹೊಂದಿದ್ದ ಆರ್​ಪಿ ಶರ್ಮಾ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು, ಕೆಲ ದಿನಗಳಿಂದ ತೀವ್ರ ನಿಗಾ ಘಟಕದಲ್ಲಿದ್ದರು, ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಾಜವೀರ್ ಪ್ರತಾಪ್ ಶರ್ಮಾ ಉತ್ತರ ಪ್ರದೇಶ ಮೂಲದವರಾಗಿದ್ದು 87 ನೇ ಬ್ಯಾಚ್​ನಲ್ಲಿ ಕೇರಳ ಕೇಡರ್​ಗೆ ಆಯ್ಕೆಯಾಗಿದ್ದರು. 94ರಲ್ಲಿ ಕರ್ನಾಟಕ ಕೇಡರ್​ಗೆ ವರ್ಗಾವಣೆಯಾಗಿದ್ದರು. ಐಪಿಎಸ್ ಅಧಿಕಾರಿ ಆರ್‌.ಪಿ. ಶರ್ಮಾ ತಮ್ಮ ವೆಪನ್ ಸ್ವಚ್ಛಗೊಳಿಸುವಾಗ ಮಿಸ್ ಫೈಯರ್ ಆಗಿ ಗುಂಡು ತಗುಲಿ ಕಳೆದ ಸೆಪ್ಟೆಂಬರ್​ನಲ್ಲಿ ಕೊಲಂಬಿಯಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಅಂದು ಪ್ರಾಣಾಪಾಯದಿಂದ ಪಾರಾಗಿದ್ದರು.

ತಮ್ಮ ನಿವಾಸದಲ್ಲಿ ಗುಂಡು ತಗುಲಿ ರಕ್ತದ ಮಡುವಲ್ಲಿ ಬಿದ್ದಿದ್ದ ಶರ್ಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಶರ್ಮಾಗೆ ಗುಂಡೇಟು ತಗುಲಿದ ವೇಳೆ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿತ್ತು. ಗುಂಡಿನ ಶಬ್ಧ ಕೇಳೆ ಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು.

ಇನ್ನು ಪೊಲೀಸ್ ಹೌಸಿಂಗ್ ಬೋರ್ಡ್‌ ಮುಖ್ಯಸ್ಥರಾಗಿದ್ದ ಆರ್​.ಪಿ. ಶರ್ಮಾ ಅನಾರೋಗ್ಯದಿಂದಲೂ ಬಳಲುತ್ತಿದ್ದರು. ಜೊತೆಗೆ ಕೌಟುಂಬಿಕ ಸಮಸ್ಯೆಯಿಂದ ತಾವೇ ಫೈರಿಂಗ್​​ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ರಾ ಎಂಬ ಚರ್ಚೆಯೂ ನೆಡೆದಿತ್ತು.

ಇದನ್ನು ಓದಿ:ಮೂರು-ನಾಲ್ಕು ತಿಂಗಳಲ್ಲಿ ವೈದ್ಯರ ಕೊರತೆ ನೀಗಿಸಲಾಗುವುದು : ಸಚಿವ ಡಾ.ಕೆ‌.ಸುಧಾಕರ್

Last Updated : Feb 4, 2021, 9:31 AM IST

ABOUT THE AUTHOR

...view details