ಬೆಂಗಳೂರು:ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಒನ್ ಇಂಡಿಯಾ ಒನ್ ಸ್ಮಾರ್ಟ್ ಗ್ರಿಡ್ ಯೋಜನೆಯನ್ನು ಘೋಷಿಸಿ ಮೊದಲ ಹಂತದ ಅನುಷ್ಠಾನದಲ್ಲಿ ಕರ್ನಾಟಕವನ್ನು ಪರಿಗಣಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಒನ್ ಇಂಡಿಯಾ ಸ್ಮಾರ್ಟ್ ಗ್ರಿಡ್ ಯೋಜನೆ ಅನುಷ್ಠಾನಕ್ಕೆ ಎಸ್.ಎಂ.ಕೃಷ್ಣ ಮನವಿ - undefined
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಒನ್ ಇಂಡಿಯಾ ಒನ್ ಸ್ಮಾರ್ಟ್ ಗ್ರಿಡ್ ಯೋಜನೆಯನ್ನು ಘೋಷಿಸಿ ಮೊದಲ ಹಂತದ ಅನುಷ್ಠಾನದಲ್ಲಿ ಕರ್ನಾಟಕವನ್ನು ಪರಿಗಣಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಪತ್ರ ಬರೆದಿದ್ದಾರೆ.
ಜುಲೈ 5ರಂದು ಮಂಡಿಸಲಿರುವ ಕೇಂದ್ರ ಮುಂಗಡ ಪತ್ರದಲ್ಲಿ ಯೋಜನೆಯ ಪ್ರಸ್ತಾವನೆಯನ್ನು ಸೇರಿಸುವಂತೆ ಜೊತೆಗೆ ಯೋಜನೆಯ ಮೊದಲ ಹಂತದ ಅನುಷ್ಠಾನದಲ್ಲಿ ಕರ್ನಾಟಕವನ್ನು ಪರಿಗಣಿಸುವಂತೆ ಈ ಮೂಲಕ ಮನವಿ ಮಾಡಿದ್ದಾರೆ.
ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ 50:50ರ ಅನುಪಾತದಲ್ಲಿ ಹಣಕಾಸು ವೆಚ್ಚ ಹಂಚಿಕೆ ಬಗ್ಗೆಯೂ ಪರಿಶೀಲಿಸುವಂತೆ ಜೊತೆಗೆ ಆಧುನಿಕ ಭಾರತ ವಿದ್ಯುತ್ ವ್ಯವಸ್ಥೆ ಗುರಿ ತಲುಪಲು ಮತ್ತು ಭಾರತೀಯ ವಿದ್ಯುತ್ ಜಾಲದ ದಕ್ಷತೆಯನ್ನು ಮತ್ತಷ್ಟು ಸುಧಾರಣೆಗೊಳಿಸಲು ಸ್ಮಾರ್ಟ್ ಗ್ರಿಡ್ ಯೋಜನೆ ಅಭಿವೃದ್ಧಿ ಸಹಕಾರಿಯಾಗಲಿದೆ. ಹಾಗಾಗಿ ಒನ್ ಇಂಡಿಯಾ ಒನ್ ಸ್ಮಾರ್ಟ್ ಗ್ರಿಡ್ ಎನ್ನುವ ಐದು ವರ್ಷದ ಯೋಜನೆಯನ್ನು 2019-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದ್ದಾರೆ.