ಕರ್ನಾಟಕ

karnataka

ETV Bharat / state

ಡ್ರಗ್ಸ್ ಮಟ್ಟ ಹಾಕೋಕೆ ನಮ್ಮ ಅವಧಿಯಲ್ಲೂ ಪ್ರಯತ್ನ ಮಾಡಿದ್ದೆವು.. ಸಿದ್ದರಾಮಯ್ಯ

ಮಾಜಿ ಸಚಿವ ಜಮೀರ್ ಅಹ್ಮದ್ ಮೇಲಿನ ಆರೋಪ ಕುರಿತು ಮಾತನಾಡಿ, ಎವಿಡೆನ್ಸ್ ಇದ್ದರೆ ಯಾರಾದರೂ‌ ಆಗಲಿ ತನಿಖೆ ಮಾಡಲಿ. ನಟಿ ರಾಗಿಣಿ ನಮ್ಮ‌ಪಕ್ಷಕ್ಕೆ ಸಂಬಂಧವಿಲ್ಲ. ಅವರು ಕ್ಯಾಂಪೇನ್ ಎಲ್ಲಿ ಮಾಡಿದ್ದಾರೆ..

Former cm siddaramaih talks on drug link case
ಡ್ರಗ್ಸ್ ಮಟ್ಟ ಹಾಕೋಕೆ ನಮ್ಮ ಅವಧಿಯಲ್ಲೂ ಪ್ರಯತ್ನ ಮಾಡಿದ್ದೆವು: ಸಿದ್ದರಾಮಯ್ಯ

By

Published : Sep 7, 2020, 4:04 PM IST

ಬೆಂಗಳೂರು :ಡ್ರಗ್ಸ್ ಮಟ್ಟ ಹಾಕೋಕೆ ನಮ್ಮ ಅವಧಿಯಲ್ಲೂ ಪ್ರಯತ್ನ ಮಾಡಿದ್ದೆವು. ಈಗ ಹೆಚ್ಚಾಗಿ ಬಯಲಿಗೆ ಬರ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್​ಸಿಬಿ ಈಗ ಎಲ್ಲವನ್ನೂ ಪತ್ತೆ ಹಚ್ಚುತ್ತಿದೆ. ನಾರ್ಕೋಟಿಕ್ಸ್‌ ಆ್ಯಕ್ಟ್ ಇದೆ. ಅದರ ಪ್ರಕಾರ ಕ್ರಮತೆಗೆದುಕೊಳ್ಳಲಿ ಎಂದರು. ಸೆ.16ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಇವತ್ತು ಸಭೆಯ ಬಗ್ಗೆ ನಾನು‌ ಮಾತನಾಡಲ್ಲ.

ಅವತ್ತು ಸದನದಲ್ಲಿ ಯಾರು ಏನು ಮಾತನಾಡ್ಬೇಕು ಅದನ್ನು ಚರ್ಚೆ ಮಾಡ್ತೇವೆ. ಡ್ರಗ್ಸ್ ವಿಚಾರವನ್ನೂ ಅವತ್ತೇ ಚರ್ಚೆ ಮಾಡ್ತೇವೆ. ಮೆಡಿಕಲ್ ಕಿಟ್ ಖರೀದಿ‌ ಹಗರಣ ಇರಬಹುದು. ಸರ್ಕಾರ ತಂದಿರುವ ಕಾಯ್ದೆಗಳಿರಬಹುದು. ಕೊರೊನಾ ಭ್ರಷ್ಟಾಚಾರವಿರಬಹುದು. ಸದನದಲ್ಲಿ ಎಲ್ಲವನ್ನೂ ಪ್ರಸ್ತಾಪ ಮಾಡ್ತೇವೆ ಎಂದರು.

ಡ್ರಗ್ಸ್‌​ ಮಾಫಿಯಾ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಮಾಜಿ ಸಚಿವ ಜಮೀರ್ ಅಹ್ಮದ್ ಮೇಲಿನ ಆರೋಪ ಕುರಿತು ಮಾತನಾಡಿ, ಎವಿಡೆನ್ಸ್ ಇದ್ದರೆ ಯಾರಾದರೂ‌ ಆಗಲಿ ತನಿಖೆ ಮಾಡಲಿ. ನಟಿ ರಾಗಿಣಿ ನಮ್ಮ‌ಪಕ್ಷಕ್ಕೆ ಸಂಬಂಧವಿಲ್ಲ. ಅವರು ಕ್ಯಾಂಪೇನ್ ಎಲ್ಲಿ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ, ಅದು ಮುಂದುವರಿಯಲಿ. ಯಾರೇ ಇರಲಿ ಕ್ರಮ ತೆಗೆದುಕೊಳ್ಳಲಿ. ಇದಕ್ಕೆ ನಮ್ಮ‌ಅಭ್ಯಂತರವೇನಿಲ್ಲ ಎಂದರು.

ಬಿಜೆಪಿ ನಾಯಕರ ಮೇಲಿನ ಕೇಸ್ ವಾಪಸ್ ಕುರಿತಂತೆ ಮಾತನಾಡಿ, ಅದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಕೈಬಿಟ್ಟಿಲ್ಲ ಅಂತಾ ಹೇಳಿದ್ದಾರೆ. ಅದು ಅಧಿಕೃತವಾದ್ರೆ ಸದನದಲ್ಲಿ ಪ್ರಸ್ತಾಪ ಮಾಡ್ತೇವೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿ‌ ರದ್ದುಪಡಿಸಲಾಗಿದೆ. ಶಿಕ್ಷಕರಿಗೆ ಸಂಬಳ ಕೊಡ್ತಿಲ್ಲ. ಸಿಲಿಂಡರ್ ಸಬ್ಸಿಡಿ ರದ್ದು ಮಾಡಿದ್ದಾರೆ. ರಾಜ್ಯಕ್ಕೆ ಬರಬೇಕಾದ ಜಿಎಸ್​​​ಟಿ ಕಟ್ ಮಾಡಿದ್ದಾರೆ. ಇದರ ಬಗ್ಗೆ ಮೊದಲು ಮಾತನಾಡಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details