ಬೆಂಗಳೂರು :ಅತಿವೃಷ್ಠಿಯಿಂದಾಗಿ ಸಮಸ್ಯೆಗೆ ಒಳಗಾದವರಿಗೆ ಸ್ಪಂದಿಸಿ ಎಂದು ಮೇಲಿಂದ ಮೇಲೆ ಆಗ್ರಹಿಸುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ನೆರೆ ಪರಿಹಾರ ವಿತರಣೆ ವಿಳಂಬ: ಮತ್ತೆ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ - ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ನೆರೆ ಸಂತ್ರಸ್ಥರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ ಎಂದು ಪದೇ ಪದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಕೆಲ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮತ್ತೆ ಹರಿಹಾಯ್ದಿದ್ದಾರೆ.
ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಅವರು, ನಾವು ಹೇಳಿದರೆ ರಾಜಕೀಯ ಎನ್ನುತ್ತೀರಿ. ಮುಖ್ಯಮಂತ್ರಿಗಳೇ, ಈ ಮಾಧ್ಯಮ ವರದಿಗಳನ್ನಾದರೂ ಒಪ್ಪಿಕೊಳ್ತೀರಾ?, ಕಳೆದ ವರ್ಷ ಅತಿವೃಷ್ಠಿಯಿಂದ ನಲುಗಿ ಹೋದ 22 ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ನಿಮ್ಮ ಸರ್ಕಾರ ಸತ್ತು ಹೋಗಿದೆ. ಅವರ ಬಾಯಿಯಿಂದಲೇ ಕೇಳಿ, ಹೃದಯ ಇದ್ದರೆ ಅವರ ಕಷ್ಟಗಳಿಗೆ ಸ್ಪಂದಿಸಿ ಪುಣ್ಯ ಕಟ್ಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷದ ಅತಿವೃಷ್ಠಿಗೆ ಮುಖ್ಯಮಂತ್ರಿ ಕೇಳಿದ್ದು 35,160 ಕೋಟಿ ರೂ, ಪ್ರಧಾನಿ ಕೊಟ್ಟಿದ್ದು 1869 ಕೋಟಿ ರೂ. ಶೆಡ್‌ಗಳಲ್ಲಿ ನರಳುತ್ತಿರುವ ಸಂತ್ರಸ್ತರು, ಕುಸಿದ ಮನೆಗಳು, ಹಾಳಾದ ರಸ್ತೆಗಳು, ಮುರಿದ ಸೇತುವೆಗಳು.. ಎಲ್ಲವೂ ಬಿಜೆಪಿ ಸರ್ಕಾರದ ವರ್ಷದ ಸಂಭ್ರಮವನ್ನು ಅಣಕಿಸುವಂತಿದೆ. ಕಣ್ಬಿಟ್ಟು ನೋಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.