ಕರ್ನಾಟಕ

karnataka

ETV Bharat / state

ನಾನು ಸಿಎಂ ಆಗಿದ್ದಿದ್ದರೆ ನಿರ್ಮಲಾ ಮನೆ ಮುಂದೆ ಪ್ರತಿಭಟನೆ ಮಾಡ್ತಿದ್ದೆ: ಸಿದ್ದರಾಮಯ್ಯ - ಸದಾನಂದ ಗೌಡ

ಯಡಿಯೂರಪ್ಪ ಹಾಗೂ ಅವರ ಮಂತ್ರಿ ಮಂಡಲಕ್ಕೆ ಮರ್ಯಾದೆ ಇಲ್ಲ. ಅವರ ಚರ್ಮ ದಪ್ಪ ಆಗಿದೆ. ರಾಜ್ಯದಿಂದ 25 ಸಂಸದರು ಇದ್ದಾರೆ. ಆರು ಜನ ಸಚಿವರಾದ್ರೂ ಪ್ರಯೋಜನವಿಲ್ಲ. ನಮಗೆ ಬರುವ ಹಣವ ತರಲು ಆಗಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Jul 8, 2021, 4:46 PM IST

ಬೆಂಗಳೂರು:15ನೇ ಹಣಕಾಸು ಆಯೋಗ 5,495 ಕೋಟಿ ರೂ ವಿಶೇಷ ಅನುದಾನ ಕೊಡಬೇಕು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದಿದ್ದಾರೆ. ಇದರ ಬಗ್ಗೆ ಕೇಳೋಕೆ ಸಿಎಂ ಯಡಿಯೂರಪ್ಪಗೆ ದಮ್ ಇಲ್ಲ. ನಾನು ಮುಖ್ಯಮಂತ್ರಿಯಾಗಿದ್ದರೆ ಇಂದು ನಿರ್ಮಲಾ ಸೀತಾರಾಮನ್ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗು

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ರಾಜ್ಯದಿಂದ ಪ್ರತಿನಿಧಿಸುವ ನಾಲ್ವರು ಸಚಿವರಿದ್ದಾರೆ ಎಂದು ಇವರು ಹೇಳಿಕೊಳ್ಳುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಇದ್ದಾರೆ, ಪ್ರಹ್ಲಾದ ಜೋಶಿ ಮಂತ್ರಿ ಇದ್ದಾರೆ, ಈಗ ಹೊಸ ಮಂತ್ರಿಗಳು ಆಗಿದ್ದಾರೆ. ಇಷ್ಟೆಲ್ಲಾ ಇದ್ರೂ ನಮ್ಮ ಹಣ ತರೋಕೆ ಅಗಲಿಲ್ಲ. ಇವರೆಲ್ಲಾ ಊಟಕ್ಕೆ ಇಲ್ಲದ ಉಪ್ಪಿನಕಾಯಿ ಎಂದಿದ್ದಾರೆ.

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜನರು ಸತ್ತರು. ಆದ್ರೆ 3 ಜನ ಸತ್ತಿದ್ದು ಅಂತ ಸರ್ಕಾರ ಹೇಳಿತ್ತು. ನಾನು, ಡಿ.ಕೆ ಶಿವಕುಮಾರ್ ಹೋಗಿ ಪರಿಶೀಲನೆ ಮಾಡಿದೆವು, 36 ಜನರು ಸತ್ತಿದ್ದಾರೆ ಅಂತ ಬಳಿಕ ಅಧಿಕಾರಿಗಳು ಒಪ್ಪಿಕೊಂಡರು. ಇದಕ್ಕೆ ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ನೇರ ಹೊಣೆ. ಸರ್ಕಾರದಲ್ಲಿರುವ ಸಚಿವ ಸೋಮಣ್ಣ ಕೂಡ ಹೊಣೆ. ಕೊರೊನಾ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ನೇರ ಹೊಣೆ ಎಂದು ಆರೋಪಿಸಿದರು.

‘ಸದಾನಂದಗೌಡ ಯೂಸ್​​ಲೆಸ್​​ ಎಂದು ಬಿಟ್ಟಿದ್ದಾರೆ’

ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡೀಲ್ ಮಾಡಿದ್ದಾರೆ. ಪ್ರತಿ ಹುದ್ದೆಗೆ ಡೀಲ್ ಮಾಡಿ ಹಣ ಮಾಡುತ್ತಿದ್ದಾರೆ. ಹಣ ಕೊಟ್ಟು ಅಧಿಕಾರ ವಹಿಸಿಕೊಂಡವರು ಸುಮ್ಮನೆ ಇರ್ತಾರಾ? ಭ್ರಷ್ಟಾಚಾರ ಮಾಡ್ತಾರೆ. ಸಿಎಂ ಮತ್ತು ಮಗ ಭ್ರಷ್ಟಾಚಾರ ಮಾಡೋಕೆ ಅವಕಾಶ ಕೊಡ್ತಾ ಇದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಹಾಗೂ ಅವರ ಮಂತ್ರಿ ಮಂಡಲಕ್ಕೆ ಮರ್ಯಾದೆ ಇಲ್ಲ. ಅವರ ಚರ್ಮ ದಪ್ಪ ಆಗಿದೆ. ರಾಜ್ಯದಿಂದ 25 ಸಂಸದರು ಇದ್ದಾರೆ. ಆರು ಜನ ಮಂತ್ರಿಗಳಾದ್ರೂ ಎಂದು ಹೇಳ್ತಾರೆ. ಎಷ್ಟು ಜನ ಸಚಿವರಾದ್ರೇನು ಪ್ರಯೋಜನ. ಸದಾನಂದಗೌಡ ಯೂಸ್​​ಲೆಸ್​​ ಎಂದು ಬಿಟ್ಟಿದ್ದಾರೆ. ಆರು ಜನ ಸಚಿವರಾದ್ರೂ ಪ್ರಯೋಜನವಿಲ್ಲ. ನಮಗೆ ಬರುವ ಹಣವ ತರಲು ಆಗಿಲ್ಲ ಎಂದರು.

ಇದನ್ನೂ ಓದಿ:ಕೋವಿಡ್​ನಿಂದ ಮೃತಪಟ್ಟ ರೈತರ 1 ಲಕ್ಷ ರೂ. ಸಾಲ ಮನ್ನಾ: ಜಿ.ಟಿ.ದೇವೇಗೌಡ

ABOUT THE AUTHOR

...view details