ಕರ್ನಾಟಕ

karnataka

ETV Bharat / state

ಮಾಜಿ ಸಿಎಂ ಯಡಿಯೂರಪ್ಪ ಪ್ರತಿಭಟನೆ ಹೇಳಿಕೆ ಒಂದು ರಾಜಕೀಯ ಗಿಮಿಕ್ : ಸಿಎಂ ಸಿದ್ದರಾಮಯ್ಯ - ಮಾಜಿ ಸಿಎಂ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ ಪ್ರತಿಭಟನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By

Published : Jun 26, 2023, 6:52 PM IST

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಧರಣಿ ಸತ್ಯಾಗ್ರಹ ಒಂದು ರಾಜಕೀಯ ಗಿಮಿಕ್ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನೆಲಮಂಗಲದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್​ವೈ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಯಡಿಯೂರಪ್ಪರಿಗೆ ಪ್ರತಿಭಟನೆ ಮಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಯಡಿಯೂರಪ್ಪ ಸರ್ಕಾರದಲ್ಲಿದ್ದಾಗ ಅವರು ತಮ್ಮ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿದ್ದರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ನಮ್ಮ ಯೋಜನೆ ಅನುಷ್ಠಾನ ಖಚಿತ : ಸಚಿವ ಎಂ ಬಿ ಪಾಟೀಲ್

ನಾವು ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ. ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ನಾವು ಜಾರಿ ಮಾಡುತ್ತೇವೆ. ನಾವು ಗ್ಯಾರಂಟಿಗಳ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿದ್ದೇವೆ. ಯಡಿಯೂರಪ್ಪ ಅವರ ಪ್ರತಿಭಟನೆ ಕೇವಲ ರಾಜಕೀಯ ಗಿಮಿಕ್ ಅಷ್ಟೇ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇದಕ್ಕೂ ಮೊದಲು ನೆಲಮಂಗಲದಲ್ಲಿ ನೂತನ‌ ಶಾಸಕರಿಗಾಗಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರು ಎಲ್ಲಾ ಸಮಯದಲ್ಲೂ ವಿಧಾನಸಭೆಯಲ್ಲಿ ಇರಬೇಕು. ವಿಧಾನಸಭೆಗೆ ಬರುವುದರಿಂದ ಹಿರಿಯರು ಏನು ಮಾತನಾಡುತ್ತಾರೆ, ಸಂಸದೀಯ ಮಾತುಗಳು ಏನು ಎಂಬುದು ಅರ್ಥ ಆಗುತ್ತದೆ ಎಂದು ನೂತನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದರು.

ಇದನ್ನೂ ಓದಿ :ನಾನು ವೋಟು ಕೊಡದವರಿಗೂ ಸಿಎಂ, ಕಾಂಗ್ರೆಸೇತರ ಶಾಸಕರಿಗೂ ಸಿಎಂ: ಸಂವಿಧಾನ ಇಲ್ಲವಾಗಿದ್ದರೆ ನಾನು ಕುರಿ ಕಾಯುತ್ತಿರಬೇಕಿತ್ತು: ಸಿಎಂ ಸಿದ್ದರಾಮಯ್ಯ

ಜೂನ್​ 23 ರಂದು ಶುಕ್ರವಾರ ತುಮಕೂರಿನಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ಕಾಂಗ್ರೆಸ್​ನವರು ಸುಳ್ಳು ಭರವಸೆ ಕೊಟ್ಟು ದ್ರೋಹ ಮಾಡಿದ್ದಾರೆ. ಅವರು ನುಡಿದಂತೆ ಗ್ಯಾರಂಟಿಗಳನ್ನು ಕೊಡಲಿ.‌ ಉಚಿತ ಗ್ಯಾರಂಟಿ ಕೊಡೋವರೆಗೂ ಬಿಜೆಪಿಯಿಂದ ಹೋರಾಟ ನಡೆಯಲಿದೆ. ವಿಧಾನಸೌಧದಲ್ಲಿ ಹೋರಾಟ ಮಾಡುತ್ತೇವೆ. ಗ್ಯಾರಂಟಿಗಳನ್ನು ಕೊಡೋವರೆಗೂ ನಾವು ಸತ್ಯಾಗ್ರಹ ಮಾಡುತ್ತೇವೆ. ಅಧಿವೇಶನದ ಒಳಗೆ ನಮ್ಮ ಶಾಸಕರಿಂದ ಹೋರಾಟ. ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣ ಮುಗಿದ ಬಳಿಕ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಾನು ನಮ್ಮ ಮುಖಂಡರ ಜತೆ ಸತ್ಯಾಗ್ರಹ ಮಾಡುತ್ತೇನೆ ಎಂದಿದ್ದರು.

ಕಾಂಗ್ರೆಸ್​​ನವರು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ ಕೊಟ್ಟು 10 ಕೆಜಿ ಉಚಿತ ಅಕ್ಕಿ, ವಿದ್ಯುತ್, ಕೊಡುತ್ತೇವೆ ಅಂದ್ರು. ಆದರೇ ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ ಸಾವಿರಾರು ಕಾರ್ಯಕರ್ತರ ಜೊತೆ ಸತ್ಯಾಗ್ರಹ ಮಾಡಲಾಗುತ್ತದೆ. ಅಧಿವೇಶನ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಸತ್ಯಾಗ್ರಹ ಮಾಡುತ್ತೇವೆ. ಸುಳ್ಳು ಭರವಸೆಗಳ ವಿರುದ್ಧ ಆಂದೋಲನ ಮಾಡಬೇಕಾಗಿದೆ. ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಗಬೇಕು ಅಂತಾ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ಬಣ್ಣ ಬಯಲು ಮಾಡಬೇಕಾಗಿದೆ ಎಂದು ಬಿ ಎಸ್​ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ :ಬಿಜೆಪಿಯಲ್ಲಿ ಅಶಿಸ್ತಿಗೆ ವಲಸಿಗರೇ ಕಾರಣ; ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ : ಕೆ.ಎಸ್​.ಈಶ್ವರಪ್ಪ

ABOUT THE AUTHOR

...view details