ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಅಗತ್ಯ ಇದೆಯಾ, ಪಕ್ಷಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವುದು ಸೂಕ್ತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಸಂಬಂಧ ಬೇಸರ ವ್ಯಕ್ತಪಡಿಸಿದ ಅವರು, ಪಕ್ಷಾಂತರ ಕಾಯ್ದೆ ಅಗತ್ಯ ಇದೆಯಾ?. ಈ ಕಾನೂನು ರದ್ದುಗೊಳಿಸುವುದು ಸೂಕ್ತ. ಮೋದಿ, ಅಮಿತ್ ಶಾಗೆ ನಾನು ಮನವಿ ಮಾಡುತ್ತೇನೆ. 370 ಕಾಯ್ದೆ ರದ್ದುಗೊಳಿಸಿದಿರಿ. ಈಗ ಪಕ್ಷಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿ. ಇದೂ ಒಂದು ದಾಖಲೆ ಆಗುತ್ತದೆ ಎಂದ್ರು.
ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಗೋಷ್ಟಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಅಸ್ಥಿರತೆ, ಶಾಸಕರ ಕೆಲ ನಿರ್ಧಾರದಿಂದ ಅಂದಿನ ಸ್ಪೀಕರ್ ಆ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ತೀರ್ಪು ಸ್ಪೀಕರ್ ಅನರ್ಹ ನಿರ್ಧಾರವನ್ನು ಎತ್ತಿ ಹಿಡಿದಿದೆ. ಕೋರ್ಟ್ ಸಹಮತ ನೀಡಿದೆ. ಅವರು ಮೂರು ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸಬಾರದು ಅಂದಿದ್ದರು ಅದನ್ನು ಕೋರ್ಟ್ ಸಡಿಲಗೊಳಿಸಿದೆ.
ಸಿದ್ದರಾಮಯ್ಯ ವಿರುದ್ಧ ಗರಂ:ಸಿದ್ದರಾಮಯ್ಯರ ಒಳ ಒಪ್ಪಂದ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಹೆಚ್ಡಿಕೆ, ನೀವು ನಿಮ್ಮ ಸಾಧನೆ ಮೇಲೆ ಚುನಾವಣೆ ಎದುರಿಸಿ. ಈ ಮುಂಚೆ ಬಿಜೆಪಿ ಜೆಡಿಎಸ್ನ ಬಿ ಟೀಂ ಅಂದಿದ್ರಿ. ಆಗ ಕುತಂತ್ರ ರಾಜಕಾರಣ ಮಾಡಿದಿರಿ. ಜೆಡಿಎಸ್ ಮೇಲೆ ಅಪನಂಬಿಕೆ ಮೂಡಿಸುವ ಮೂಲಕ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡಲು ಸಿದ್ದರಾಮಯ್ಯ ಸಹಾಯ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಅವರಲ್ಲಿ ಒಳ ಒಪ್ಪಂದ ಮಾಡಲಿ?: ದೇವೇಗೌಡರು ಚುನಾವಣೆ ನಂತರ ಬಿಜೆಪಿ ಸರ್ಕಾರ ಸುಭದ್ರ ಇರಲಿದೆ ಅಂದಿದ್ದರು. ಅದಕ್ಕೆ ಕಾರಣ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹಾಗಾಗಿ ಸುಭದ್ರವಾಗಿರಲಿದೆ ಎಂದಿದ್ದರು. ನಾವು ಬಿಜೆಪಿ ಸರ್ಕಾರವನ್ನು ಉಳಿಸುತ್ತೇವೆ ಅಂದಿದ್ದೇವಾ?. ಬಿಜೆಪಿ ಹಾಗೂ ಕಾಂಗ್ರೆಸ್ ನ್ನು ಈ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ನಾವು ಮೂರು ಸ್ಥಾನ ಕಳಕೊಂಡಿದ್ದೇವೆ. ಈ ಉಪಚುನಾವಣೆಯಲ್ಲಿ ಅದರ ಜತೆಗೆ ಇನ್ನೂ ಮೂರು ಸ್ಥಾನ ಗೆಲ್ಲುವ ಸಾಮರ್ಥ್ಯ ನಮಗಿದೆ. ಜೆಡಿಎಸ್ ಗೆ ಶಕ್ತಿ ಇಲ್ಲ ಅಂತಾರೆ. ಆದರೆ ಜೆಡಿಎಸ್ ಶಾಸಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಮ್ಮನ್ನು ಕಡೆಗಣಿಸಿದಷ್ಟು ನಮ್ಮ ಶಕ್ತಿ ಹೆಚ್ಚಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇನ್ನು ಎರಡೂ ಪಕ್ಷಗಳಿಂದ ಸಮಾನಾಂತರವಾಗಿ ದೂರ ಉಳಿದು ಚುನಾವಣೆ ಎದುರಿಸುತ್ತೇವೆ. ಯಾವುದೇ ರೀತಿಯ ಹೊಂದಾಣಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಗೋಷ್ಟಿ ಸಿದ್ದರಾಮಯ್ಯ ಬಳುವಳಿ ಏನು ಗೊತ್ತಾ?
ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಪ್ರಾರಂಭಿಸಿದ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಸಿದ್ದರಾಮಯ್ಯ ಕೊಟ್ಟ ಬಳುವಳಿ ಏನು ಗೊತ್ತಾ. ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ 29,000 ಕೋಟಿ ರೂ. ಕೊಡಬೇಕಾಗಿತ್ತು. ಸಿದ್ದರಾಮಯ್ಯ ಇಟ್ಟಿದ್ದು, 3,500 ಕೋಟಿ ಮಾತ್ರ. ಅವರ ಬಳುವಳಿ ಮುಂದಿನ 10 ವರ್ಷ ಯಾವ ಸರ್ಕಾರನೂ ಮನೆ ಕಟ್ಟಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಕೊಟ್ಟ ಬಳುವಳಿ ಇನ್ನೂ 10 ವರ್ಷ ಆದರೂ ಮುಗಿಯಲ್ಲ. ಇದು ಸಿದ್ದರಾಮಯ್ಯ ರಾಜ್ಯಕ್ಕೆ ಕೊಟ್ಟ ಕೊಡುಗೆ. ಮತಕ್ಕಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಯಾವ ಒಳ, ಹೊರ ಒಪ್ಪಂದ ಮಾಡಿಲ್ಲ. ಬಿಜೆಪಿಯಷ್ಟೇ ಕಾಂಗ್ರೆಸ್ ನೂ ನಮಗೆ ರಾಜಕೀಯ ಶತ್ರುಗಳಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.