ಕರ್ನಾಟಕ

karnataka

ETV Bharat / state

ಬಿಬಿಎಂಪಿ ವಿರುದ್ಧದ ರೈತರ ಹೋರಾಟಕ್ಕೆ ಕೈ ಜೋಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ - ಬಿಬಿಎಂಪಿ ವಿರುದ್ಧದ ರೈತರ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿರುವ ಬಿಬಿಎಂಪಿಯ ಎಂಎಸ್‌ಜಿಪಿ ತ್ಯಾಜ್ಯ ಘಟಕದ ವಿರುದ್ಧ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಿಎಂ ಹೆಚ್​​​ಡಿ ಕುಮಾರಸ್ವಾಮಿ ಕೈಜೋಡಿಸಿದ್ದಾರೆ.

Kumaraswamy has given support for farmers protest against BBMP
ಬಿಬಿಎಂಪಿ ವಿರುದ್ಧದ ರೈತರ ಹೋರಾಟಕ್ಕೆ ಕೈ ಜೋಡಿಸಿದ ಕುಮಾರಸ್ವಾಮಿ

By

Published : Dec 2, 2021, 4:39 PM IST

ದೊಡ್ಡಬಳ್ಳಾಪುರ:ಬಿಬಿಎಂಪಿ ಕಸದ ವಿರುದ್ಧ ಸ್ಥಳೀಯ ರೈತರು ನಡೆಸುತ್ತಿರುವ ಧರಣಿ 8ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಹೋರಾಟಕ್ಕೆ ಮಾಜಿ ಸಿಎಂ ಹೆಚ್​​​ಡಿ ಕುಮಾರಸ್ವಾಮಿ ಕೈಜೋಡಿಸಿದ್ದಾರೆ.

ಬಿಬಿಎಂಪಿ ವಿರುದ್ಧದ ರೈತರ ಹೋರಾಟಕ್ಕೆ ಕೈ ಜೋಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ತಾಲೂಕಿನ ಚಿಗರೇನಹಳ್ಳಿಯಲ್ಲಿರುವ ಬಿಬಿಎಂಪಿಯ ಎಂಎಸ್‌ಜಿಪಿ ತ್ಯಾಜ್ಯ ಘಟಕದ ವಿರುದ್ಧ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದೆ. ಎಂಎಸ್‌ಜಿಪಿ ಘಟಕ ಮುಚ್ಚುವಂತೆ ಪ್ರತಿಭಟನಾ ನಿರತರು ಪಟ್ಟು ಹಿಡಿದಿದ್ದಾರೆ. ಇಂದು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಎಂಎಸ್‌ಜಿಪಿ ಘಟಕ ಸೃಷ್ಟಿಸಿರುವ ವಿಷಕಾರಿ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಂತರ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಘಟಕದ ಆಯುಕ್ತ ಸರ್ಫರಾಜ್‌ಖಾನ್‌ಗೆ ದೂರವಾಣಿ ಕರೆ ಮಾಡಿದ ಕುಮಾರಸ್ವಾಮಿ, ಎಂಎಸ್‌ಜಿಪಿ ಘಟಕ ಸೃಷ್ಟಿಸಿರುವ ಅವಾಂತರಗಳ ಬಗ್ಗೆ ಏಕೆ ಕ್ರಮ ವಹಿಸಲಿಲ್ಲ. ಕೂಡಲೇ ಸಮಸ್ಯೆಗಳನ್ನು ಪರಿಹರಿಸುವಂತೆ ತಾಕೀತು ಮಾಡಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಥಳೀಯರ ಹೋರಾಟ ನ್ಯಾಯಯುತವಾಗಿದೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಯತ್ನವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮಾಡಬಾರದು. ಡಿಸೆಂಬರ್​.11ರೊಳಗೆ ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾತನಾಡುತ್ತೇನೆ. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಡಿ.11ರ ನಂತರ ನಾನೇ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Congress ಗೂಂಡಾ ಪಾರ್ಟಿ ಅಲ್ವಾ? ಎಂಎಲ್​ಸಿ ರವಿಕುಮಾರ್

For All Latest Updates

ABOUT THE AUTHOR

...view details