ಬೆಂಗಳೂರು :ವಿಶ್ವ ತಾಯಂದಿರ ದಿನದ ಪ್ರಯುಕ್ತ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪಿಎಂ ದೇವೇಗೌಡರು ಶುಭಾಶಯ ಕೋರಿದ್ದಾರೆ.
ನನ್ನ 'ವ್ಯಕ್ತಿತ್ವ'ದ ಮೇಲೆ ನನ್ನಮ್ಮನ 'ಪ್ರಭಾವ' ಗಾಢ.. ತಾಯಂದಿರ ದಿನಕ್ಕೆ ಶುಭಾಶಯ ಕೋರಿದ ಹೆಚ್ಡಿಕೆ.. - ವಿಶ್ವ ತಾಯಂದಿರ ದಿನಕ್ಕೆ ಎಚ್ಡಿಕೆ ಶುಭಾಶಯ
ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಬಡವರಿಗೆ ಮರುಗುವ, ಕಷ್ಟಕ್ಕೆ ಕರಗುವ ಆಕೆಯ ಗುಣಗಳು ನನ್ನನ್ನು ರೂಪಿಸಿವೆ. ತಮ್ಮಮ್ಮನಿಗೆ ಹಾಗೂ ವಿಶ್ವದ ಮಾತೃ ಹೃದಯಗಳಿಗೆ ಶುಭಾಶಯ ಎಂದಿದ್ದಾರೆ..
![ನನ್ನ 'ವ್ಯಕ್ತಿತ್ವ'ದ ಮೇಲೆ ನನ್ನಮ್ಮನ 'ಪ್ರಭಾವ' ಗಾಢ.. ತಾಯಂದಿರ ದಿನಕ್ಕೆ ಶುಭಾಶಯ ಕೋರಿದ ಹೆಚ್ಡಿಕೆ.. former-cm-kumaraswamy-greeting-to-world-mothers-day](https://etvbharatimages.akamaized.net/etvbharat/prod-images/768-512-7137544-thumbnail-3x2-newssss.jpg)
ತಾಯಂದಿರ ದಿನಕ್ಕೆ ಶುಭಾಶಯ ಕೋರಿದ ಎಚ್ಡಿಕೆ
ಟ್ವೀಟ್ನಲ್ಲಿ ತಮ್ಮ ತಾಯಿಯಿಂದ ಆಶೀರ್ವಾದ ಪಡೆಯುತ್ತಿರುವ ಫೋಟೋ ಟ್ಯಾಗ್ ಮಾಡಿರುವ ಕುಮಾರಸ್ವಾಮಿ, ಇಂದು ವಿಶ್ವ ತಾಯಂದಿರ ದಿನ. ಪ್ರೀತಿ, ಮಮತೆ, ತ್ಯಾಗಕ್ಕೆ ಈ ದಿನ ಸಂಕೇತ. ಆದರೆ, ತಾಯ್ತನ ಅಜರಾಮರ. ನನ್ನ ವ್ಯಕ್ತಿತ್ವದ ಮೇಲೆ ನನ್ನಮ್ಮನ ಪ್ರಭಾವ ಗಾಢವಾಗಿದೆ ಎಂದು ತಿಳಿಸಿದ್ದಾರೆ.