ಬೆಂಗಳೂರು: ಇಂದು ಸೇನಾ ದಿನದ ನಿಮಿತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೈನಿಕರಿಗೆ ಶುಭಕೋರಿದ್ದು, ಅವರ ತ್ಯಾಗ, ಬಲಿದಾನವನ್ನು ಸ್ಮರಿಸಿದ್ದಾರೆ.
ಇಂದು 'ಸೇನೆ ದಿನ'. ದೇಶದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಯಾವುದೇ ವಿಪತ್ತಿನ ಸಂದರ್ಭದಲ್ಲೂ ದೇಶ ಸೇವೆಗಾಗಿ ಸನ್ನದ್ಧರಾಗಿ ನಿಲ್ಲುವ ಸೈನಿಕರ ಶೌರ್ಯ, ಸಾಹಸ ಯಾವುದೇ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು. ಅವರ ಸೇವೆಗೆ ಸಲಾಂ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.