ಬೆಂಗಳೂರು :ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಮಾಜಿ ಸಿಎಂ ಹೆಚ್ ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ: ಹೆಚ್ಡಿಕೆ ಟ್ವೀಟ್ - Former CM HDK
ಪ್ರವಾಹದಿಂದಾಗಿ ಹಲವಾರು ಹಳ್ಳಿಗಳು ಕೆಸರುಮಯವಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹಾಗಾಗಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಬೇಕೆಂದು ನಾಡಿನ ಸಮಸ್ತ ವೈದ್ಯರಲ್ಲಿ ಹೆಚ್ಡಿಕೆ ಕೋರಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ಕುರಿತು ಮಾಜಿ ಸಿಎಂ ಟ್ವೀಟ್
ಈ ಕುರಿತು ಟ್ವೀಟ್ನಲ್ಲಿ, ಪ್ರವಾಹದಿಂದಾಗಿ ಹಲವಾರು ಹಳ್ಳಿಗಳು ಕೆಸರುಮಯವಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಹಾಗಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡಬೇಕೆಂದು ನಾಡಿನ ಸಮಸ್ತ ವೈದ್ಯರಲ್ಲಿ ಕೋರಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳುವ ವೈದ್ಯರಿಗೆ ಹಾಗೂ ದಾದಿಯರಿಗೆ ಎಲ್ಲ ರೀತಿಯ ನೆರವು ನೀಡಬೇಕೆಂದು ರಾಜ್ಯ ಸರ್ಕಾರಕ್ಕೂ ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.