ಬೆಂಗಳೂರು :ಪರಿಸರವನ್ನು ನಾವು ರಕ್ಷಿಸಿದರೆ, ನಮ್ಮನ್ನು ಪರಿಸರ ರಕ್ಷಿಸುತ್ತದೆ. ಈ ಸತ್ಯವನ್ನು ನಾನು ಕೃಷಿ ಮೂಲಕ ಕಂಡುಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಶ್ವ ಪರಿಸರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
ಸಸಿ ನೆಟ್ಟು ಪರಿಸರ ದಿನದ ಶುಭಾಶಯ ಕೋರಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೃಷ್ಟಿಯೊಂದನಂತ ಚಲನೆ,ಅಖಂಡ ಪ್ರಾಣವಾಹಿನಿ, ಕ್ಷಣವ ಕನವನರಿವ ಬುದ್ಧಿ ಕಾಲ ದೇಶ ನದಿಯೊಳದ್ದಿ ಹೊಕ್ಕು ಹರಿದು ತಿಳಿಯಲರಿದು ಅಗಮ್ಯವದಕೆ ವಾಹಿನಿ! ಹಳ್ಳಿಯಿಲ್ಲದ ದೇಶವದು ನಿತ್ಯರೋಗಿ ಕೊಳೆಯುವುದು ನಿರ್ಜೀವ ಶವದಂತೆಯಾಗಿ!
ಸೃಷ್ಟಿ ಸೌಂದರ್ಯದೊಲ್ಮೆಯೇ ಸೃಷ್ಟಿಕರ್ತಂಗೆ ಪೂಜೆಯಂ. ರಸಜೀವನಕೆ ಮಿಗಿಲ್ ತಪಮಿಹುದೆ?ರಸಸಿದ್ಧಿಗಿಂ ಮಿಗಿಲೆ ಸಿದ್ದಿ? ಪೊಣ್ಮಿದೆ ಸೃಷ್ಟಿರಸದಿಂದೆ, ಬಾಳುತಿದೆ ರಸದಲ್ಲಿ, ರಸದೆಡೆಗೆ ತಾಂ ಪೊರಿಯುತಿದೆ. ಪೊಂದುವುದು ರಸದೊಳೈಕ್ಯವೊತ್ತು ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು. ಆನಂದರೂಪಮಮೃತಂ ರಸಂ! ಎಂಬ ಕುವೆಂಪು ಕವನದ ಮೂಲಕ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸಸಿ ನೆಟ್ಟ ತಂದೆ-ಮಗ :ಇದೇ ಸಂದರ್ಭದಲ್ಲಿ ರಾಮನಗರ ಜಿಲ್ಲೆ ಬಿಡದಿ ಸಮೀಪದ ಕ್ಯಾತಗಾನಹಳ್ಳಿಯಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಗಿಡ ನೆಟ್ಟು ಕುಮಾರಸ್ವಾಮಿ ಪರಿಸರ ದಿನ ಆಚರಿಸಿದ್ದಾರೆ. ಗಿಡ ನೆಡಲು ಕುಮಾರಸ್ವಾಮಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ನೆರವಾಗಿದ್ದು ವಿಶೇಷವಾಗಿತ್ತು.
40 ಕೋಟಿ ರೂ. ವೆಚ್ಚದಲ್ಲಿ ಬ್ಲ್ಯಾಕ್ ಫಂಗಸ್ ಪರ್ಯಾಯ ಔಷಧಿ ಖರೀದಿ : ಡಿಸಿಎಂ ಅಶ್ವತ್ಥ ನಾರಾಯಣ್