ಕರ್ನಾಟಕ

karnataka

ETV Bharat / state

ಇಂದ್ರಜಿತ್​ ಲಂಕೇಶ್​ ಭೇಟಿ ವಿಚಾರ.. ಅದು ಹಳೆ ಫೋಟೋ, ನನ್ನನ್ಯಾಕೆ ತಳಕು ಹಾಕೊಂಡಿದ್ದೀರಾ ಎಂದ ಹೆಚ್​ಡಿಕೆ - ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸುದ್ದಿ

ಇಂದ್ರಜಿತ್ ಲಂಕೇಶ್ ಜೊತೆ ಕುಮಾರಸ್ವಾಮಿ ಫೋಟೊ ವೈರಲ್ ವಿಚಾರಕ್ಕೆ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

Former CM HD Kumaraswamy reaction, Former CM HD Kumaraswamy reaction about Indrajit visit, Former CM HD Kumaraswamy reaction about Indrajit visit issue, Former CM HD Kumaraswamy news, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ, ಇಂದ್ರಜಿತ್ ಭೇಟಿ ವಿಷಯದ ಬಗ್ಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ, ಇಂದ್ರಜಿತ್ ಭೇಟಿ ವಿಷಯದ ಬಗ್ಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಸುದ್ದಿ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸುದ್ದಿ,
ಇಂದ್ರಜಿತ್ ಭೇಟಿ ವಿಷಯದ ಬಗ್ಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

By

Published : Jul 16, 2021, 1:20 PM IST

ಬೆಂಗಳೂರು:ನೂರಾರು ಜನರು ನನ್ನನ್ನು ಭೇಟಿ ಮಾಡ್ತಾರೆ. ಕೆಲವರು ನನ್ನ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಇತ್ತಿಚೇಗೆ ನನ್ನನ್ನು ಇಂದ್ರಜಿತ್​ ಭೇಟಿ ಮಾಡಿಲ್ಲ. ಯಾಕೆ ಈ ಫೋಟೋ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇಂದ್ರಜಿತ್​ ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇಂದ್ರಜಿತ್ ಲಂಕೇಶ್ ಜೊತೆ ಫೋಟೊ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಯಾವ ಕಾರಣಕ್ಕೆ ಈ ಫೋಟೋ ವೈರಲ್ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಿತ್ಯ ನೂರಾರು ಜನ ನನ್ನನ್ನು ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಇತ್ತೀಚಿಗೆ ನನ್ನನ್ನು ಇಂದ್ರಜಿತ್ ಭೇಟಿ ಮಾಡಿಲ್ಲ. ಯಾಕೆ ನನ್ನ ಹೆಸರು ತಳಕು ಹಾಕಿಕೊಂಡಿದ್ದಿರಾ?. ನಾನು ರಾಜಕಾರಣ ಮಾಡಿದ್ರೆ ನೇರವಾಗಿ ಮಾಡುತ್ತೇನೆ ಎಂದು ಖಡಕ್ ಆಗಿ ಹೇಳಿದರು.

ನಿನ್ನೆಯಿಂದ ನಡೆಯುತ್ತಿರುವ ಘಟನೆಯ ಬಗ್ಗೆ ಆ ಫೋಟೊ ಇಟ್ಟುಕೊಂಡು ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ. ಹಲವಾರು ಬಾರಿ ಈ ಹಿಂದೆ ಇಂದ್ರಜಿತ್ ಲಂಕೇಶ್ ಭೇಟಿ ಮಾಡಿದ್ದಾರೆ. ಇತ್ತೀಚೆಗೆ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಹಲವಾರು ಬಾರಿ ಭೇಟಿ ಮಾಡಿ ಸಂದರ್ಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇಂದ್ರಜಿತ್ ಲಂಕೇಶ್​ರಿಗೆ ಮನವಿ ಮಾಡುತ್ತೇನೆ. ಈ ಫೋಟೊ ಯಾರು ಯಾವ ಕಾರಣಕ್ಕೆ ಬಳಸಿಕೊಂಡು ಉಪಯೋಗ ಮಾಡಿಕೊಳ್ಳಲು ಹೊರಟಿದ್ದಾರೆ. ಸತ್ಯ ಅವರೇ (ಇಂದ್ರಜಿತ್ ) ತಿಳಿಸುವುದು ಒಳ್ಳೆಯದು ಎಂದರು.

ಗುಜರಾತ್​ ಮಾಡಲ್​ - ವ್ಯಂಗ್ಯವಾಡಿದ ಮಾಜಿ ಸಿಎಂ

ಗುಜರಾತ್ ಮಾಡೆಲ್ ನೋಡಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗುಜರಾತ್ ಪ್ರವಾಸ ಮಾಡುತ್ತಿರುವ ವಿಚಾರಕ್ಕೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್​​ಡಿಕೆ,
ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯದ ಮಾಡಲ್ ನೋಡುವುದಕ್ಕೆ ವೆಚ್ಚ ಮಾಡಬೇಡಿ. ಗುಜರಾತ್​ನಲ್ಲಿ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್ ಡೊಲೆರೋ ಸಿಟಿ ಬಗ್ಗೆ ಅಧ್ಯಯನಕ್ಕೆ ಹೋಗ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಚುನಾವಣೆಗೋಸ್ಕರ ಈ ಡೊಲೆರೋ ಸಿಟಿ 3ಡಿ ಪ್ರಾಜೆಕ್ಟ್ ಘೋಷಣೆ ಮಾಡಿದ್ರು. ಇದೊಂದು ದೇಶದಲ್ಲೇ ಕ್ರಾಂತಿ ಮಾಡೋ ಪ್ರಾಜೆಕ್ಟ್ ಅಂತ ಹೇಳಿದ್ರು.

ಡೊಲೆರೋ ಸಿಟಿ ಪ್ರಾಜೆಕ್ಟ್ ಗುಜರಾತ್ ಜನರು ಕೂಡಾ ಈಗ ಮರೆತು ಹೋಗಿದ್ದಾರೆ. 2008 ರಲ್ಲಿ ಪ್ರಾರಂಭ ಆದ ಈ ಡೊಲೆರೋ ಸಿಟಿ ಪ್ರಾಜೆಕ್ಟ್ 2021 ಆದರೂ ಮುಗಿದಿಲ್ಲ. ಇದನ್ನ ನೋಡೋಕೆ ಜಗದೀಶ್ ಶೆಟ್ಟರ್ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು

ಡೊಲೆರೋ ಸಿಟಿ ಮಾಡಲ್​​ ನಮಗೆ ಬೇಡ
ಡೊಲೆರೋ ಸಿಟಿ ಮಾಡಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರೋದು ಜನರ ಬದುಕು. ಜನರು ಬದಲು ಏನು ಮಾಡಬೇಕೋ ಅದನ್ನು ನೋಡಿ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೃಷ್ಟಿಗೆ ಏನು ಮಾಡಬೇಕು ಅಂತ ಇಲ್ಲಿ ಕೂತು ಚರ್ಚೆ ಮಾಡಬೇಕು. ಅದು ಬಿಟ್ಟು ಡೊಲೆರೋ ಸಿಟಿ ಕಟ್ಟುವ ಅವಶ್ಯಕತೆ ಇಲ್ಲ. ಡೊಲೆರೋ ಸಿಟಿ ಮುಕ್ತಾಯ ಆಗಲು ಇನ್ನು 100 ವರ್ಷ ಬೇಕು. ಹೀಗಾಗಿ ಜಗದೀಶ್ ಶೆಟ್ಟರ್ ಗುಜರಾತ್ ಮಾಡಲ್ ಬಿಟ್ಟು ರಾಜ್ಯದಲ್ಲೇ ಉತ್ತಮ ಮಾಡಲ್ ಮಾಡಿ ಎಂದು ಸಲಹೆ ನೀಡಿದರು.

ಈ ಡೊಲೆರೋ ಸಿಟಿ ಪ್ರಾಜೆಕ್ಟ್‌ ನೋಡಲು ಗುಜರಾತ್​ಗೆ ಹೋಗೋದು ಬೇಡ. ಯೂಟ್ಯೂಬ್​​ನಲ್ಲಿ ನೋಡಿದ್ರೆ ಸಾಕು. ಯಾವ ಸ್ಥಿತಿಯಲ್ಲಿ ಪ್ರಾಜೆಕ್ಟ್ ಇದೆ ಅಂತ ಗೊತ್ತಾಗುತ್ತದೆ.

ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ಏನು?
ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾಡಲ್ ಆಗಿರುವ ಉದಾಹರಣೆಗಳಿವೆ. ಡೊಲೆರೋ ಸಿಟಿ ನೋಡಲು ಹೋಗಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಗುಜರಾತ್​ಗೆ ಹೋಗದೇ ಯೂಟ್ಯೂಬ್​ನಲ್ಲಿ ಡೊಲೆರೋ ಸಿಟಿ ನೋಡಿ ಎಂದು ಸಲಹೆ ನೀಡಿದರು.

ಡೊಲೆರೋ ಸಿಟಿ ಮುಗಿದಿಲ್ಲ ಆಗಲೇ ಅಯೋಧ್ಯೆಯಲ್ಲಿ 10 ಸಿಟಿ ಘೋಷಣೆ ಮಾಡಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಇರುವುದರಿಂದ ಬಿಜೆಪಿ ಯುಪಿಯಲ್ಲಿ 3ಡಿ ತೋರಿಸುತ್ತಿದೆ.
3ಡಿ ಯಲ್ಲಿ ಏನು ಬೇಕಾದರೂ ತೋರಿಸಿಕೊಳ್ಳಬಹುದು. ಯಾವುದೇ ರಾಜ್ಯದ ಮಾಡಲ್ ಅಂತ ಹೋಗಿ ನಮ್ಮ ರಾಜ್ಯದ ಗೌರವ ಹಾಳು ಮಾಡಬೇಡಿ. ನಮ್ಮ ರಾಜ್ಯದಲ್ಲೇ ಉತ್ತಮ ಕಾರ್ಯಕ್ರಮ ಕೊಡುವವರು ಬೇಕಾದಷ್ಟು ಜನ ಇದ್ದಾರೆ. ಅವರನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿ ಎಂದು ಸರ್ಕಾರ ಮತ್ತು ಸಚಿವ ಜಗದೀಶ್ ಶೆಟ್ಟರ್​ಗೆ ಹೆಚ್​ಡಿಕೆ ಸಲಹೆ ನೀಡಿದರು.

ABOUT THE AUTHOR

...view details