ಕರ್ನಾಟಕ

karnataka

ETV Bharat / state

ಯಾರೋ ಮಾಡಿದ ಅಚಾತುರ್ಯವನ್ನು ನಾನೇ ಒಪ್ಪಿಕೊಂಡೆ: ಹೆಚ್‌.ಡಿ.ಕುಮಾರಸ್ವಾಮಿ

ವಿದ್ಯುತ್ ಕಳ್ಳತನ ಆರೋಪ ಸಂಬಂಧ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Former CM Kumaraswamy press conference  Kumaraswamy press conference at party office  party office JP Bhavan in Bengaluru  ವಿದ್ಯುತ್ ಕಳ್ಳತನ ಆರೋಪ  ಪಕ್ಷದ ಕಚೇರಿ ಜೆಪಿ ಭವನ  ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ  ಮನೆಗೆ ವಿದ್ಯುತ್ ಕಳ್ಳತನ ಆರೋಪ  ಕಚೇರಿಯ ಮುಂದೆ ಪೋಸ್ಟರ್​ ಕಾಂಗ್ರೆಸ್​ಗೆ ಇದೊಂದು ಚಾಳಿ ಶುರು
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ

By ETV Bharat Karnataka Team

Published : Nov 16, 2023, 2:12 PM IST

Updated : Nov 16, 2023, 5:37 PM IST

ಬೆಂಗಳೂರು:ಯಾರೋ ಮಾಡಿದ ಅಚಾತುರ್ಯವನ್ನು ನಾನೇ ಒಪ್ಪಿಕೊಂಡಿದ್ದೇನೆ. ಯಾರೋ ಮಾಡಿದ ಅಚಾತುರ್ಯಕ್ಕೆ ನಾನು ತಲೆ ಮೇಲೆ ಹೊತ್ತುಕೊಂಡೆ ಎಂದು ಕೂಡ ಹೇಳಿದ್ದೇನೆ. ಇದಕ್ಕಾಗಿ ಪಕ್ಷದ ಕಚೇರಿ ಜೆಪಿ ಭವನದ ಮುಂದೆ ಪೋಸ್ಟರ್​ಗಳನ್ನು ಅಂಟಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಚಾಳಿ ಶುರುವಾಗಿದೆ ಎಂದು ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್‌ ಪಡೆಯಲಾಗಿದೆ ಎಂಬ ಆರೋಪ ಸಂಬಂಧ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ, ಅವರ ಪುತ್ರ, ಅವರ ಕಚೇರಿ, ಇಡೀ ಅವರ ಪಟಾಲಂ ವರ್ಗಾವಣೆ ದಂಧೆಯಲ್ಲಿ ಆರಂಭದಿಂದಲೂ ಎಡೆಬಿಡದೆ ತೊಡಗಿದೆ ಎಂದು ನಾನು ಅನೇಕ ಸಲ ಆರೋಪ ಮಾಡಿದ್ದೆ. ಈಗ ಆ ಆರೋಪ ಸತ್ಯವಾಗಿದೆ. ಹಿಂದೆ ಇದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಅವರು ಸೂಪರ್ ಸಿಎಂ ಎಂದು ಆರೋಪ ಮಾಡಿದ್ದರು. VST TAX ಎಂದು ದೂರಿದ್ದರು ಎಂದ ಹೆಚ್​ಡಿಕೆ, ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯ ವಿಡಿಯೋ ತುಣುಕನ್ನು ಟಿವಿಯಲ್ಲಿ ಹಾಕಿ ಮಾಧ್ಯಮ ವರದಿಗಾರರಿಗೆ ತೋರಿಸಿದರು. ಅಲ್ಲದೆ, ಈಗ ಸಿದ್ದರಾಮಯ್ಯ ನಡೆಸುತ್ತಿರುವ YST ದಂಧೆಯ ಕತೆ ಏನು? ಆಗೊಂದು ಮಾತು, ಹೀಗೊಂದು ಮಾತೇ? ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ಹೇಳಿ ಅಪ್ಪ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ? ನಾಲ್ಕೈದು ಲಿಸ್ಟ್ ಯಾವುದು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇದ್ಯಾವ ಚೀಫ್ ಮಿನಿಸ್ಟರ್, ಸೂಪರ್ ಚೀಫ್ ಮಿನಿಸ್ಟರ್ ಎಂದು ಕುಟುಕಿದರು. ಯತೀಂದ್ರ ಅವರು, ನಾನು ಹೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಪ್ಪ ಮಗನ ನಡುವೆ ನಡೆದ ಫೋನ್ ಚರ್ಚೆ ವ್ಯವಹಾರ ಜನರಿಗೆ ಗೊತ್ತಾಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಶಾಲೆಗಳ ಉದ್ಧಾರಕ್ಕಾಗಿ ಸಿಎಸ್ ಆರ್ ಫಂಡ್ ಬಗ್ಗೆ ಅಪ್ಪ ಸಿಎಂ, ಮಗ ಮಾಜಿ ಶಾಸಕ ಫೋನ್​ನಲ್ಲಿ ಮಾತನಾಡುತ್ತಿದ್ದರು ಎಂದು ವಿಡಿಯೋಗೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ತೇಪೆ ಹಾಕುವ ಮೊದಲೇ ಇವರ ಮನ ಹಾದಿಬೀದಿಯಲ್ಲಿ ಹರಾಜಾಗಿದೆ. ಒಂದು ವೇಳೆ ಶಾಲೆಗಳ ಪಟ್ಟಿ, ಸಿಎಸ್​ಆರ್ ದೇಣಿಗೆ ವಿಷಯ ಇದ್ದರೆ ಸಂಬಂಧಪಟ್ಟ ಡಿಡಿಪಿಐ ಬಳಿ ಮಾತನಾಡಬೇಕಿತ್ತು. ಯಾಕೆ ಆ ಡಿಡಿಪಿಐ ಶಾಲೆಗಳ ಪಟ್ಟಿ ಕಳಿಸಿರಬೇಕಲ್ಲವೇ ಎಂದ ಕುಮಾರಸ್ವಾಮಿ, ಯಾವ ಯಾವ ಸ್ಕೂಲ್​ಗೆ ಹಣ ಕಳಿಸಬೇಕು ಅಂತ ಮಗನ ಬಳಿ ಕೇಳಿದ್ದಾರೆ ಅನಿಸುತ್ತದೆ. ಜನರು ದಡ್ಡರಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ, ಕೋಮವಾದಿ ಜನತಾದಳದಿಂದ ಬಿಟ್ಟು ಬಂದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಸಚಿವ ರಾಜಣ್ಣ ಅವರು, "ನಮ್ಮದು ಮಹಾ ಸಮುದ್ರ. ಚರಂಡಿ ನೀರು ಕೂಡ ಬರುತ್ತಿದೆ, ತುಂಬಿಸಿಕೊಳ್ತೀವಿ" ಎಂದಿದ್ದಾರೆ. ಕಾಂಗ್ರೆಸ್ ಯಾವತ್ತೂ ಒಳ್ಳೆಯ ನೀರು ತುಂಬಿಸಿಕೊಳ್ಳಲ್ಲ, ಚರಂಡಿ ನೀರೇ ತುಂಬಿಸಿಕೊಳ್ಳೋದು ಎಂದು ಕುಮಾರಸ್ವಾಮಿ ಟೀಕಿಸಿದರು‌.

ಆಗ ಪೇಸಿಎಂ ಅಂತಾ ದೊಡ್ಡಮಟ್ಟಿಗೆ ಪ್ರಚಾರ ಮಾಡಿದರು. ಸರ್ಕಾರ ರಚನೆಯಾದಾಗಿನಿಂದ ಹಲವು ವಿಚಾರ ಪ್ರಸ್ತಾಪ ಮಾಡಿದ್ದೇನೆ. ವರ್ಗಾವಣೆ ಬಗ್ಗೆ ಮಾತನಾಡಿದ್ದೇನೆ. ಸಿದ್ದರಾಮಯ್ಯ ಅವತ್ತಿನ ಸರ್ಕಾರದ ಬಗ್ಗೆ ಮರೆತು ಹೋಗಿದ್ದರೆ ಇನ್ನೊಂದು ಬಾರಿ ನೆನಪು ಮಾಡ್ತೀನಿ ಎಂದು ದೃಶ್ಯ ಮಾಧ್ಯಮದ ತುಣುಕು ಪ್ಲೇ ಮಾಡಿ ತೋರಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ನಾನು ಹೋರಾಟ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನನ್ನ ಆಸ್ತಿಯ ಬಗ್ಗೆ ಬುಕ್ ಮಾಡಿ ಬಿಡುಗಡೆ ಮಾಡಿದರು. ಆಗ ಫ್ರೀಡಂ ಪಾರ್ಕ್​ನಲ್ಲಿ ನನ್ನ ಪಕ್ಕಾ ಆ ಕಡೆ ಒಬ್ರು ಈ ಕಡೆ ಒಬ್ರು ಕೂತಿದ್ರಿ. ಈಗ ನನ್ನ ಅಸ್ತಿ ಬಗ್ಗೆ ತನಿಖೆ ಮಾಡಿಸಿ ಅಂತಿದೀರಾ?. 1962ರಲ್ಲಿ ದೇವೇಗೌಡರು ರಾಜಕಾರಣಕ್ಕೆ ಬಂದಿದ್ದರು. ನಿನ್ನೆ ಮೊನ್ನೆ ಬಂದ ಕಾರ್ಪೋರೇಟರ್ ಹೇಳ್ತಿದ್ದಾರೆ ಕೆರೆ ಜಾಗ ನುಂಗಿದ್ರು ಅಂತ. ಕೆರೆ ಜಾಗ ನುಂಗಿದ್ದು ಯಾರು?, 3 ಎಕರೆ 30 ಗುಂಟೆ ನುಂಗಿದ್ದು ಯಾರು?. ಇದನ್ನೆಲ್ಲಾ ಯಾರು ಹೇಳಿದ್ದಾರೋ ಅವರನ್ನೇ ಕೇಳಿ ಎಂದು ವಾಗ್ದಾಳಿ ನಡೆಸಿದರು.

ನಾನೇನಾದ್ರೂ ಅವರ ಜಮೀನು ಒತ್ತುವರಿ ಮಾಡಿದ್ರೆ ತನಿಖೆ ಮಾಡಿಸಲಿ ಎಂದು ಪರೋಕ್ಷವಾಗಿ ಚೆಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು. ಒಂದು ಕಾಗದ ತಗೊಂಡು ಹೋದರೆ 30 ಲಕ್ಷ ಹಣ ಕೇಳ್ತಾರೆ ಅಂತಾ ಹೇಳಿದ್ರು, ಇದರ ಬಗ್ಗೆ ಕೂಡ ನಾನೂ ಮಾತಾಡಿದ್ದೆ. ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಇದ್ದಾಗ ಏನು ಹೇಳಿದ್ರು ಕೇಳಿ? ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರ: ರಾಜ್ಯ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ ಎಂದ ಹೆಚ್‌ಡಿಕೆ

Last Updated : Nov 16, 2023, 5:37 PM IST

ABOUT THE AUTHOR

...view details