ಕರ್ನಾಟಕ

karnataka

ETV Bharat / state

ಇಂತಹದ್ದೆಲ್ಲಾ ನೋಡಲಿಕ್ಕೆ ನನ್ನ ಸರ್ಕಾರ ಬೀಳಿಸಬೇಕಿತ್ತಾ?: ಎಚ್​ಡಿಕೆ ಟಾಂಗ್ - ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ

ನಮ್ಮ ತಂದೆಯವರು ರಾಜಕಾರಣಕ್ಕೆ ಬಂದಾಗಿನಿಂದಲೂ ಈ ಸಿಡಿ ಪ್ರಕರಣಗಳಂತಹವನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Former CM H. D. Kumaraswamy reaction on the CD case
ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್

By

Published : Mar 9, 2021, 2:19 PM IST

ಬೆಂಗಳೂರು: ಇಂತದ್ದೆಲ್ಲಾ ನೋಡಲಿಕ್ಕೆ ನನ್ನ ಸರ್ಕಾರ ಬೀಳಿಸಬೇಕಿತ್ತಾ?. ಅವರು ಇಲ್ಲೇ ಇದ್ದು ಸರ್ಕಾರ ಬೀಳಿಸಬಹುದಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರು ಜನ ಮಂತ್ರಿಗಳು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರಂತೆ. ಆ ತರಹ ಐಡಿಯಾ ಯಾರು ಕೊಟ್ಟರೋ?. ಜನ ಇವರ ಬಗ್ಗೆ ಏನಂದುಕೊಳ್ಳಬೇಕೋ?. ಇಂತಹಾ ವಿಚಾರಗಳನ್ನು ಬಳಸಿಕೊಂಡು ನನ್ನನ್ನು ಕೂಡಾ ತೇಜೋವಧೆ ಮಾಡಲು ಪ್ರಯತ್ನ ಮಾಡ್ತಿರುವುದು ಗೊತ್ತಿದೆ. ನಾನು ಸದನದಲ್ಲೇ ಒಪ್ಪಿಕೊಂಡಿದ್ದೇನೆ. ತಪ್ಪು ಮಾಡುವುದು ಸಹಜ, ಆದರೆ ಮನುಷ್ಯ ಆದವನು ತಿದ್ದಿಕೊಳ್ಳಬೇಕು. ಇಂತದ್ದೆಲ್ಲಾ ನೋಡಲಿಕ್ಕೆ ನನ್ನ ಸರ್ಕಾರ ಬೀಳಿಸಬೇಕಿತ್ತಾ. ಅವರು ಇಲ್ಲೇ ಇದ್ದು ಸರ್ಕಾರ ಬೀಳಿಸಬಹುದಿತ್ತು. ನಾನೇನೂ ಹೋಗಿ ಅವರನ್ನು ಹೈಜಾಕ್ ಮಾಡಲು ಹೋಗ್ತಿರಲಿಲ್ಲ ಎಂದರು.

ನಮ್ಮ ತಂದೆಯವರು ರಾಜಕಾರಣಕ್ಕೆ ಬಂದಾಗಿನಿಂದಲೂ ಈ ಸಿಡಿ ಪ್ರಕರಣಗಳಂತಹವನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್

ಓದಿ : 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO

ಇಂತಹ ಪ್ರಕರಣಗಳನ್ನು ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಹಾಗಾಗಿ ಜಾರಕಿಹೊಳಿ ಪರ ಹೇಳಿಕೆ ಕೊಟ್ಟಿದ್ದೆ. ಮಾಧ್ಯಮಗಳಲ್ಲಿ ಆ ಹೆಣ್ಣು ಮಗಳನ್ನು ಸಂತ್ರಸ್ತೆ ಅಂತಾ ಬಿಂಬಿಸಲಾಗುತ್ತಿದೆ. ಆಕೆ ಇಲ್ಲಿತನಕ ಹೊರಗೆ ಬಂದಿಲ್ಲ. ಆಕೆಯ ತಂದೆ ತಾಯಿಗಳು ಸಂತ್ರಸ್ತರು ಅನ್ನಬೇಕೋ, ಅಥವಾ ನಕಲಿ ಸಿಡಿ ಆಗಿದ್ದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಂತ್ರಸ್ತರು ಎನ್ನಬೇಕೋ ಎಂದು ಪ್ರಶ್ನಿಸಿದರು.

2+3+4 ಫಾರ್ಮುಲಾ ಬಗ್ಗೆ ನನಗೇನು ಗೊತ್ತಿಲ್ಲ: 2+3+4 ಫಾರ್ಮುಲಾ ಬಗ್ಗೆ ನನಗೇನೂ ಗೊತ್ತಿಲ್ಲ. ಕೋರ್ಟ್​​ಗೆ ಹೋಗಿ ಇಂಜಕ್ಷನ್ ತಂದವರಿಗೆ ಗೊತ್ತಿರಬಹುದು ಎಂದು ಟೀಕಿಸಿದರು. ಆಗ ಅವರ ಬುದ್ದಿ ಅವರ ಕೈಯಲ್ಲಿ ಇದ್ದಿದ್ರೆ ಇವಾಗಾ ಕೋರ್ಟ್​​​​ಗೆ ಹೋಗಿ ಇಂಜಂಕ್ಷನ್ ತಂದುಕೊಳ್ಳುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು.

ಓದಿ : ಜಾರಕಿಹೊಳಿ‌ ಸಹೋದರರು ಹೇಳಿದ 2+3+4 ಸೂತ್ರ ಏನು ಗೊತ್ತಾ?

ಬಜೆಟ್ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ: ಬಜೆಟ್ ಬಗ್ಗೆ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆಗಳಿಲ್ಲ. ಹಿಂದಿನ ಬಾರಿಯದ್ದನ್ನೇ ಸೇರಿಸಿ ಕೊಟ್ಟಿದ್ದಾರೆ. ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಆದ್ಯತೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಅರವತ್ತು ಸಾವಿರ ಮಹಿಳೆಯರಿಗೆ ಉದ್ಯೋಗದ ಅವಕಾಶ ಕೊಟ್ಟಿದ್ದೇನೆ ಅಂತಾರೆ. ನನಗಂತೂ ಅದು ಕಾಣುತ್ತಿಲ್ಲ. ವೀರಶೈವ ಮತ್ತು ಒಕ್ಕಲಿಗ ಸಮುದಾಯಕ್ಕೆ ಐನೂರು ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ ಅಂತಾರೆ. ಎಷ್ಟು ವರ್ಷದಲ್ಲಿ ಕೊಡ್ತಾರೆ.?. ನಾನು ಹಲವು ಯೋಜನೆಗಳಿಗೆ ಮೀಸಲಿಟ್ಟಿದ್ದ ಎಲ್ಲ ಅನುದಾನ ಡೈವರ್ಟ್ ಮಾಡಿದ್ದಾರೆ. ಕೊರೊನಾ ಹೆಸರಲ್ಲಿ ಎಲ್ಲ ಕಾರ್ಯಕ್ರಮ ಗಳಿಗೂ ಬ್ರೇಕ್ ಹಾಕಿದ್ದಾರೆ. ಸರ್ವರಿಗೂ ಸಮಪಾಲು ಅಂತಾ ಪುಸ್ತಕ ದಲ್ಲಿ ಹೇಳಿಕೊಂಡಿದ್ದಾರೆ. ಯಾರಿಗೆ ಸಮಪಾಲು ಎಂದು ಟೀಕಿಸಿದರು.

ಬಿಜೆಪಿಯವರೇ ನಮ್ಮ ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ಲ ಅಂತಾ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈ ಬಜೆಟ್ ಅನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಮಾಡಿದ್ದಾರೋ, ಅಥವಾ ಬೇರೆ ಯಾರಾ ದರೂ ಮಾಡಿದ್ದಾರೋ? ಚರ್ಚೆ ಮಾಡಲು ಯೋಗ್ಯವಾದ ಬಜೆಟ್ ಇದಲ್ಲ. ಸದನದಲ್ಲಿ ಒಪ್ಪಿಗೆ ತೆಗೆದುಕೊಂಡ ತೀರ್ಮಾನಗಳನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಸದನಕ್ಕಿಂತ ಇವರಿಗೆ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ತೀರ್ಮಾನಗಳೇ ಹೆಚ್ಚಾಗಿವೆ. ಯಾವ ಪುರುಷಾರ್ಥಕ್ಕೆ ಈ ಬಜೆಟ್ ಎಂದು ಕಿಡಿ ಕಾರಿದರು.

ABOUT THE AUTHOR

...view details