ಕರ್ನಾಟಕ

karnataka

ETV Bharat / state

ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣದಲ್ಲಿ ಆಸ್ತಿ ಕಳೆದುಕೊಂಡವರಿಗೆ ಕಟ್ಟಿಕೊಡುವ ಕೆಲಸ ಮಾಡಲಿ: ಬಸವರಾಜ ಬೊಮ್ಮಾಯಿ

ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಪ್ರಕರಣದ ವರದಿಯನ್ನು ಆಡಳಿತಾರೂಢ ಕಾಂಗ್ರೆಸ್​ ಸರ್ಕಾರ ಒಪ್ಪಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Sep 30, 2023, 9:44 PM IST

ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಸಂದರ್ಭದಲ್ಲಿ ಹಿಂದಿನ ಸರ್ಕಾರ ನೇಮಿಸಿದ್ದ ಮ್ಯಾಜಿಸ್ಟ್ರೇಟ್ ಪೊಲೀಸರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ನೀಡಿದ್ದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಒಪ್ಪಿಕೊಂಡಿದೆ. ಇದು ಸರಿಯಾದ ಕ್ರಮವಾಗಿದ್ದು, ತಮ್ಮ ಸರ್ಕಾರದ ತೀರ್ಮಾನ ಸರಿಯಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ ಗಲಭೆ ವಿಚಾರದಲ್ಲಿ ನೇಮಿಸಿದ್ದ ಅಧಿಕಾರಿಯ ರಿಪೋರ್ಟ್ ಬಂದಿದೆ. ರಾಜ್ ಸರ್ಕಾರ ಯತಾವತ್ತಾಗಿ ಒಪ್ಪಿಕೊಂಡಿದ್ದಾರೆ. ಇದು ಸರಿಯಾದ ಕ್ರಮ. ಹಿಂಸೆ, ಪೊಲೀಸರ ಮೇಲೆ ದಾಳಿ, ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಂಡ ಕ್ರಮವಾಗಿದೆ. ಅಂದಿನ ಘಟನೆ ಎಲ್ಲವೂ ಕೂಡ ಮಾಧ್ಯಮದಲ್ಲಿ ಸ್ಪಷ್ಟವಾಗಿ ಬಂದಿತ್ತು. ಕಾಂಗ್ರೆಸ್ ಪಕ್ಷದ ಶಾಸಕರ ಮನೆ ಮೇಲೆ ದಾಳಿಯಾದರೂ ಕೂಡ, ಅವರ ರಕ್ಷಣೆಗೆ ಬರಲಿಲ್ಲ‌. ಗೋಲೀಬಾರ್ ಪ್ರಶ್ನಿಸುವ ಕೆಲಸ ಮಾಡಿದರು. ಈಗ ಸತ್ಯ ಹೊರ ಬಂದಿದೆ. ಸರ್ಕಾರ ಅದನ್ನ ಒಪ್ಪಿಕೊಂಡಿದೆ ಎಂದರು.

ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ. ಆದ್ದರಿಂದ ಈ ರೀತಿಯ ಘಟನೆ ಮರುಕಳಿಸಬಾರದು. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿರುವುದಕ್ಕೆ ಪರಿಹಾರಕ್ಕೆ ಕಮಿಷನ್ ನೇಮಕ ಮಾಡಿದ್ದೆವು. ಅದರ ಶಿಫಾರಸು ಕೂಡ ಸರ್ಕಾರ ಮಾಡಿ. ಸಾರ್ವಜನಿಕ ಆಸ್ತಿ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದ್ದರು ಎಂದು ಕಾಂಗ್ರೆಸ್​ನವರು ಮಾಡಿರುವ ಆರೋಪದ‌ ಕುರಿತು ಕೇಳಿದ ಪ್ರಶ್ನೆಗೆ ಎಲ್ಲಾ ವಿಚಾರಗಳು ಮಾಧ್ಯಮದಲ್ಲಿ ಲೈವ್ ಆಗಿ ನೋಡಿದ್ದಾರೆ. ಯಾವುದೇ ಸಮುದಾಯ ಟಾರ್ಗೆಟ್ ಮಾಡುವ ಕೆಲಸ ಮಾಡಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ರೆಕಾರ್ಡ್ಸ್ ಸುಟ್ಟು ಹಾಕುವ ಕೆಲಸ ಮಾಡಿದ್ದರು. ಅವರದ್ದೇ ಪಕ್ಷದ ಶಾಸಕನ ರಕ್ಷಣೆಗೆ ಬರಲಿಲ್ಲ ಎಂದರು.

ಯಾಮಾರಿಸುವ ಕೆಲಸ : ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ಮೀಸಲಿಡುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲನೆಯದಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡಿದ ಹಣದಲ್ಲಿ 11 ಸಾವಿರ ಕೋಟಿ ಗ್ಯಾರಂಟಿಗೆ ಕೊಟ್ಟಿದ್ದಾರೆ. ಇದರಿದ ಎಸ್ಸಿ, ಎಸ್ಟಿ ಸಮುದಾಯಕ್ಕೆ ವಂಚನೆಯಾಗಿದೆ. ದಲಿತರ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ದಲಿತ ವಿರೋಧಿ ನಿರ್ಣಯ ಕೈಗೊಂಡಿದ್ದಾರೆ. ಮೈನಾರಿಟಿ, ಹಿಂದುಳಿದ ವರ್ಗಗಳಿಗೆ ನೀಡಿದ ಹಣವನ್ನ ಅವರು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡುವುದಿಲ್ಲ. ನಮ್ಮ ಕಾಲದಲ್ಲಿ ಕೊಟ್ಟ ಹಣವನ್ನೂ ವಾಪಸ್ ಪಡೆದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೇಳಿಕೆ ಕೊಟ್ಟಿದ್ದಾರೆ.

ಬಜೆಟ್‌ನಲ್ಲಿ ಕೊಟ್ಟಿರುವುದನ್ನು ಬಿಡುಗಡೆ ಮಾಡಲು. ದಲಿತರಿಗೆ ಮೀಸಲಿಟ್ಟ ಹಣ ವಾಪಸ್ ಕೊಡಲಿ. ಇವರ ನಿರ್ಣಯದಿಂದ ರಾಜ್ಯದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಈಗಾಗಲೇ 7th ಪೇ ಕಮೀಷನ್ ವರದಿ ತಡವಾಗಲಿ ಅಂತ ಬಯಸುತ್ತಿದ್ದಾರೆ. ಇದರಿಂದ ಸರ್ಕಾರಿ ನೌಕರರ ವೇತನ ಹೆಚ್ಚಾದರೆ ಕೊಡಲು ಸಾಧ್ಯವಿಲ್ಲ ಅಂತ ಈ ರೀತಿ ಮಾಡಿದ್ದಾರೆ. ಹತ್ತು ಸಾವಿರ ಕೋಟಿ, ಇಪ್ಪತ್ತು ಸಾವಿರ ಕೋಟಿ ಕೊಡುತ್ತೇನೆ ಅನ್ನುವುದು ಕೇವಲ ರಾಜಕೀಯ ಹೇಳಿಕೆ. ಮತ್ತು ಓಲೈಕೆ ರಾಜಕಾರಣ. ಮತ್ತೊಮ್ಮೆ ಅಲ್ಪ ಸಂಖ್ಯಾತರನ್ನು ಯಾಮಾರಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಶಾಮನೂರು ಅವರಿಗೆ ಉತ್ತರಿಸಲಿ:ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು, ಅವರಿಗೆ ಉತ್ತರ ನೀಡಲಿ ಎಂದು ಹೇಳಿದರು.

ಇದನ್ನೂ ಓದಿ:43 ವರ್ಷಗಳ ಹಿಂದಿನ ಗಲಭೆ ವರದಿ ಮಂಡಿಸಿದ ಯೋಗಿ ಸರ್ಕಾರ: 15 ಸಿಎಂ ಬದಲಾದರೂ ನನೆಗುದಿಗೆ ಬಿದ್ದಿದ್ದ ವರದಿ!

ABOUT THE AUTHOR

...view details