ಕರ್ನಾಟಕ

karnataka

ETV Bharat / state

ದಕ್ಷಿಣ ವಿಭಾಗ ಪೊಲೀಸರ ಟಾಸ್ಕ್ ಫೋರ್ಸ್ ತಂಡ ರಚನೆ - corona effect

ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ ‌ಕೋವಿಡ್-19 ಸೊಂಕಿಗೆ ಒಳಗಾದ ವ್ಯಕ್ತಿಗಳಿಗೆ, ಬಡವರಿಗೆ, ವೃದ್ಧರಿಗೆ ತರಕಾರಿ, ಮೆಡಿಸಿನ್, ಅಗತ್ಯ ಸಾಮಾನುಗಳನ್ನ ತರೋದಕ್ಕೆ ಟಾಸ್ಕ್ ಫೋರ್ಸ್ ತಂಡ ರಚಿಸಲಾಗಿದೆ.

Formation of the South Division Police Task Force
ದಕ್ಷಿಣ ವಿಭಾಗ ಪೊಲೀಸರ ಟಾಸ್ಕ್ ಫೋರ್ಸ್ ತಂಡ ರಚನೆ

By

Published : Mar 31, 2020, 9:51 PM IST

ಬೆಂಗಳೂರು: ಐಪಿಎಸ್ ಅಧಿಕಾರಿ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ತಮ್ಮ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ತಂಡ ರೆಡಿ ಮಾಡಿದ್ದಾರೆ.

ಸರ್ಕಾರ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರದ ಅಧಿಕಾರಿಗಳನ್ನ ಸೇರಿಸಿಕೊಂಡು ಟಾಸ್ಕ್ ಫೋರ್ಸ್ ತಂಡ ರೆಡಿ ಮಾಡಿದೆ. ಅದೇ ರೀತಿ ದಕ್ಷಿಣ ವಿಭಾಗದ ಡಿಸಿಪಿ ತನ್ನ ವ್ಯಾಪ್ತಿಯ ಜನರಿಗೆ ಯಾವುದೇ ತೊಂದರೆಯಾಗಬಾರದು ಅನ್ನೋ ದೃಷ್ಠಿಯಲ್ಲಿ ಪೊಲೀಸರದ್ದೇ ಟಾಸ್ಕ್ ಫೋರ್ಸ್ ತಂಡವನ್ನ ರೆಡಿ ಮಾಡಿದ್ದಾರೆ.

ತಮ್ಮ ವ್ಯಾಪ್ತಿಗೆ ಬರುವ ಠಾಣೆ ಗಳಲ್ಲಿ ಸುಮಾರು‌ 70 ವಾಟ್ಸ್​​​ಆ್ಯಪ್​​​ ಮಾಡಿ ಅದರಲ್ಲಿ ಟಾಸ್ಕ್ ಫೋರ್ಸ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಹಿಣಿ ಕಟೋಚ್ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಒಬ್ಬ ಇನ್ಸ್​​ಪೆಕ್ಟರ್, ಇಬ್ಬರು ಸಬ್​ ಇನ್ಸ್​​​ಪೆಕ್ಟರ್​​​ಗಳು ಹಾಗೆಯೇ ಸ್ಥಳೀಯ ಉದ್ಯಮಿಗಳು, ಪ್ರತಿಷ್ಠಿತ ಸಾಫ್ಟ್​​​ವೇರ್ ಟೆಕ್ಕಿಗಳನ್ನ ಬಳಸಿಕೊಂಡು ತಂಡ ರಚಿಸಲಾಗಿದೆ.

ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ ‌ಕೋವಿಡ್ ಸೋಂಕಿಗೆ ಒಳಗಾದ ವ್ಯಕ್ತಿಗಳಿಗೆ, ಬಡವರಿಗೆ, ವೃದ್ಧರಿಗೆ ತರಕಾರಿ, ಮೆಡಿಸಿನ್, ಅಗತ್ಯ ಸಾಮಾನುಗಳನ್ನ ತರೋದಕ್ಕೆ ಈ ತಂಡ ಸಹಾಯ ಮಾಡಲಿದೆ. ಇನ್ನು ಈ ವಾಟ್ಸ್​​ಆ್ಯಪ್​​​ ಗ್ರೂಪ್​​​ನಲ್ಲಿರುವ ಸದಸ್ಯರು ಪ್ರತಿಯೊಬ್ಬರ ಸಮಸ್ಯೆಯನ್ನ ಆಲಿಸಲೆಂದೇ ಈ ಪ್ಲಾನ್​ ಮಾಡಲಾಗಿದೆ.

ಇನ್ನು ಡಿಸಿಪಿ ರೋಹಿಣಿ ಕಟೋಚ್ ಅವರ ಕಾರ್ಯಕ್ಕೆ ಸಂಸದ ತೇಜಸ್ವಿ ಸೂರ್ಯ ಕೈಜೋಡಿಸಿದ್ದು, ತಮ್ಮ ಕೈಲಾದ ಸಹಾಯ ಮಾಡುತಿದ್ದಾರೆ.

ABOUT THE AUTHOR

...view details