ಕರ್ನಾಟಕ

karnataka

ETV Bharat / state

CEPMIZ ಕ್ರಿಯಾ ಯೋಜನೆ ಸಂಬಂಧ ಸಂಪುಟ ಉಪಸಮಿತಿ ರಚನೆ - CEPMIZ ಕ್ರಿಯಾ ಯೋಜನೆ ಸಂಬಂಧ ಸಂಪುಟ ಉಪಸಮಿತಿ ರಚನೆ

4 ಸದಸ್ಯರ ಸಂಪುಟ ಉಪ ಸಮಿತಿಗೆ ಕಾನೂನು ಸಚಿವ ಮಾಧುಸ್ವಾಮಿ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಸಚಿವ ಶ್ರೀರಾಮುಲು, ಸಿ ಸಿ ಪಾಟೀಲ್ ಹಾಗೂ ಆನಂದ್ ಸಿಂಗ್‌ರನ್ನು ನೇಮಿಸಲಾಗಿದೆ. ಸಂಪುಟ ಉಪ ಸಮಿತಿ ಕಾನೂನಾತ್ಮಕ ಪ್ರಕ್ರಿಯೆಗಳ ಮೇಲ್ವಿಚಾರಣೆ ಹಾಗೂ ಇತರೆ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಿದೆ..

Formation of the CEPMIZ Action Plan Relationship Volume Sub-Committee
CEPMIZ ಕ್ರಿಯಾ ಯೋಜನೆ ಸಂಬಂಧ ಸಂಪುಟ ಉಪಸಮಿತಿ ರಚನೆ

By

Published : Dec 5, 2020, 7:05 AM IST

ಬೆಂಗಳೂರು :ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸಂರಕ್ಷಣಾ ನಿಗಮ (ಕೆಎಂಇಆರ್‌ಸಿ)ದ CEPMIZನ ಕ್ರಿಯಾ ಯೋಜನೆ ‌ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸುವುದನ್ನು ಮೇಲ್ವಿಚಾರಣೆ ‌ಮಾಡಲು, ನಿರ್ಣಯಗಳನ್ನು ತೆಗೆದುಕೊಳ್ಳಲು ಸಂಪುಟ ಉಪ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಪ್ರತಿ

4 ಸದಸ್ಯರ ಸಂಪುಟ ಉಪ ಸಮಿತಿಗೆ ಕಾನೂನು ಸಚಿವ ಮಾಧುಸ್ವಾಮಿ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಸಚಿವ ಶ್ರೀರಾಮುಲು, ಸಿ ಸಿ ಪಾಟೀಲ್ ಹಾಗೂ ಆನಂದ್ ಸಿಂಗ್‌ರನ್ನು ನೇಮಿಸಲಾಗಿದೆ. ಸಂಪುಟ ಉಪ ಸಮಿತಿ ಕಾನೂನಾತ್ಮಕ ಪ್ರಕ್ರಿಯೆಗಳ ಮೇಲ್ವಿಚಾರಣೆ ಹಾಗೂ ಇತರೆ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಿದೆ.

ಓದಿ: ಸೋಮವಾರ ಸಚಿವ ಸಂಪುಟ ಸಭೆ : ಮಹತ್ವದ ವಿಷಯಗಳ ಚರ್ಚೆ

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಉಂಟಾಗಿರುವ ಪರಿಸರ ಹಾನಿಗೆ ಸುಧಾರಣಾ ಕ್ರಮವಾಗಿ ಗಣಿಗಾರಿಕೆ ಪ್ರಭಾವ ವಲಯಗಾಗಿನ ಸಮಗ್ರ ಪರಿಸರ ಯೋಜನೆ (CEPMIZ) ರೂಪಿಸಲಾಗಿದೆ. 2012ರಲ್ಲಿ ಈ ಮೂರು ಜಿಲ್ಲೆಗಳಲ್ಲಿ ಸುಪ್ರೀಂಕೋರ್ಟ್ CEPMIZ ಜಾರಿಗೆ ಆದೇಶ ಹೊರಡಿಸಿತ್ತು.

For All Latest Updates

TAGGED:

ABOUT THE AUTHOR

...view details