ಕರ್ನಾಟಕ

karnataka

ETV Bharat / state

ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ.. ತನಿಖೆಗೆ ಸಮಿತಿ ರಚಿಸಿದ ಸರ್ಕಾರ! - ಬಿಬಿಎಂಪಿ

ಹುಳಿಮಾವು ಕೆರೆ ಕೋಡಿ ಒಡೆದು ಸಾಕಷ್ಟು ಹಾನಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ತನಿಖೆ ನಡೆಸಲು ಸರ್ಕಾರ ಸಮಿತಿಯೊಂದನ್ನ ರಚನೆ ಮಾಡಿದೆ.

ddswdd
ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ,ತನಿಖೆಗೆ ಸಮಿತಿ ರಚಿಸಿದ ಸರ್ಕಾರ!

By

Published : Dec 4, 2019, 12:34 PM IST

ಬೆಂಗಳೂರು:ದೊಡ್ಡ ಬಿದರಕಲ್ಲು, ಹೊಸಕೆರೆಹಳ್ಳಿ ಹಾಗೂ ಹುಳಿಮಾವು ಮೂರು ಕೆರೆಗಳ ಕೋಡಿ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಸರ್ಕಾರ ತಾಂತ್ರಿಕ ಸಮಿತಿ ರಚನೆ ಮಾಡಿದೆ.

ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ.. ತನಿಖೆಗೆ ಸಮಿತಿ ರಚಿಸಿದ ಸರ್ಕಾರ!


ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಬಿ ಆರ್ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದು, 10 ದಿನದ ಒಳಗಾಗಿ ವರದಿ ನೀಡುವಂತೆ ಹಾಗೂ ಮುಂದೆ ಇಂತಹ ಅನಾಹುತಗಳು ಸಂಭವಿಸದ ರೀತಿ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಬಗ್ಗೆಯೂ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್‌ಕುಮಾರ್ ಹೇಳಿದ್ದಾರೆ. ಈ ಮೂರು ನಿರ್ವಹಣೆಗೆ ಬಿಡಿಎ,ಬಿಬಿಎಂಪಿ ಕಾಳಜಿ ವಹಿಸುತ್ತಿಲ್ಲ. ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆದಿಲ್ಲ ಎಂಬ ಆರೋಪವಿತ್ತು. ವರದಿ ನೀಡುವಂತೆ ವಿವಿಧ ಸಮಿತಿಗಳು ಹಾಗೂ ಹೈಕೋರ್ಟ್ ಸಹ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ಹಿನ್ನೆಲೆ ಪೊಲೀಸ್ ತನಿಖೆ ಮಧ್ಯೆ ಸರ್ಕಾರ ಸಮಿತಿ ರಚಿಸಿದ್ದು, ಐಐಎಸ್​ಸಿ ನಿವೃತ್ತ ಪ್ರಾಧ್ಯಾಪಕ ಬಿ ಆರ್ ಶ್ರೀನಿವಾಸ್‌ಮೂರ್ತಿ ನೇತೃತ್ವದ ಸಮಿತಿಯಲ್ಲಿ ನಿವೃತ್ತ ಅಭಿಯಂತರ ಎಂ.ಎಲ್ ಮಾದಯ್ಯ ಹಾಗೂ ಶಾಂತರಾಜಣ್ಣ ಹೆಚ್‌ ಆರ್ ನೇತೃತ್ವದ ಸಮಿತಿ ರಚನೆ ಮಾಡಿದೆ. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಹುಳಿಮಾವು ಕೆರೆಯ ಏರಿ ಒಡೆದು ಅನಾಹುತಕ್ಕೆ ಕಾರಣರಾದ ಬಿಬಿಎಂಪಿಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವ ಬಗ್ಗೆ ಆಯುಕ್ತರೊಂದಿಗೆ ಚರ್ಚೆ ಮಾಡಿದ್ದೇನೆ. ಉಪ ಚುನಾವಣೆ ಮುಗಿದ ನಂತರ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ABOUT THE AUTHOR

...view details