ಬೆಂಗಳೂರು :ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ ಮುಂದುವರೆದಿದ್ದು, ಇದೀಗ ಬಿಜೆಪಿ ಶಾಸಕ ಲಿಂಗಣ್ಣ ಅವರ ಸಹಿ ಫೋರ್ಜರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ.... ಚುರುಕು ಪಡೆದ ಪೊಲೀಸ್ ತನಿಖೆ - ಇತ್ತೀಚಿನ ಬೆಂಗಳೂರು ಸುದ್ದಿ
ವಿಧಾನಸೌಧದಲ್ಲಿ ಶಾಸಕರು, ಸಚಿವರ ಸಹಿ ಫೋರ್ಜರಿ ಮುಂದುವರೆದಿದ್ದು, ಇದೀಗ ಬಿಜೆಪಿ ಶಾಸಕ ಲಿಂಗಣ್ಣ ಅವರ ಸಹಿ ಫೋರ್ಜರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಸಹಿಯನ್ನ ಫೋರ್ಜರಿ ಮಾಡಿ ದುರ್ಬಳಕೆ ಮಾಡಿದ್ದರು. ಇದೀಗ ಮಾಯಕೊಂಡ ಬಿಜೆಪಿ ಶಾಸಕ ಲಿಂಗಣ್ಣ ಅವರ ಲೆಟರ್ ಹೆಡ್ ದುರ್ಬಳಕೆ ಮಾಡಿ, 10 ಲಕ್ಷ ಸಾಲ ಸೌಲಭ್ಯ ಮಂಜೂರಾತಿಗೆ ಡಿಸಿಎಂ ಗೋವಿಂದ ಕಾರಜೋಳಗೆ ನಕಲಿ ಶಿಫಾರಸು ಪತ್ರ ಬರೆದಿದ್ದಾರೆ.
ಮೊದಲು ಶಾಸಕ ಲಿಂಗಣ್ಣ ಶಿಫಾರಸಿಗೆ ಒಪ್ಪಿದ್ದರು, ಆದರೆ, ಶಾಸಕ ಲಿಂಗಣ್ಣ ಸಹಿ ಫೋರ್ಜರಿಯಾಗಿರುವ ವಿಚಾರ ತಿಳಿದು ಅನುಮಾನ ಬಂದು ಡಿಸಿಎಂ ಗೋವಿಂದ ಕಾರಜೋಳಗೆ ದೂರು ನೀಡಿದ್ದಾರೆ. ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದಾರೆ. ಸದ್ಯ ಎಸ್. ಆರ್ ವಿಶ್ವನಾಥ್ ಸಹಿಯ ಫೋರ್ಜರಿ ತನಿಖೆ ಜೊತೆ ಈ ತನಿಖೆ ಕೂಡ ನಡೆಯುತ್ತಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ