ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಫೋರ್ಜರಿ ಮಾಡುತ್ತಿದ್ದ ಇಬ್ಬರು ಕಾನ್ಸ್ಟೇಬಲ್ಗಳ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸರ್ಟಿಫಿಕೇಟ್ ಪೋರ್ಜರಿ ಮಾಡುತ್ತಿದ್ದ ಇಬ್ಬರು ಕಾನ್ಸ್ಟೇಬಲ್ಗಳ ವಿರುದ್ಧ ಎಫ್ಐಆರ್ - ಎಫ್ಐಆರ್
ಪೊಲೀಸ್ ಇಲಾಖೆಯಲ್ಲಿ ಫೋರ್ಜರಿ ಸಹಿ ಮಾಡುತ್ತಿದ್ದ ಇಬ್ಬರು ಕಾನ್ಸ್ಟೇಬಲ್ಗಳ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ವಿಶೇಷ ಶಾಖೆಯ ಆಡಳಿತ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಪೇದೆ ಪಿ. ನಾರಾಯಣಸ್ವಾಮಿ ಮತ್ತು ಎ.ವಿ ನಾರಾಯಣಸ್ವಾಮಿ ಮೇಲೆ ಪ್ರಕರಣ ದಾಖಲಾಗಿದೆ.
ಮೇಲಾಧಿಕಾರಿಗಳ ಹೆಸರಿನಲ್ಲಿ ನಕಲಿ ಪಿ.ವಿ.ಸಿ ಸರ್ಟಿಫಿಕೇಟ್ ತಯಾರಿಸುತ್ತಿದ್ದ ಪೇದೆಗಳು ಸದರಿ ಸರ್ಟಿಫಿಕೇಟ್ಗಳು ನೈಜವೆಂದು ತಿಳಿಸಿ ಮೇಲಾಧಿಕಾರಿಗಳ ಸಹಿ ಮಾಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇಲಾಖೆಯ ಗೌರವಕ್ಕೆ ಚ್ಯುತಿ ಬರುವ ಹಾಗೆ ಹಾಗೂ ಇಲಾಖೆಗೆ ಮೋಸ ಮಾಡಿರುವ ಪೇದೆಗಳು ಸರ್ಕಾರದ ಬೊಕ್ಕಸಕ್ಕೆ 73,350 ಹಣವನ್ನ ನಷ್ಟ ಉಂಟು ಮಾಡುವುದಲ್ಲದೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಹೇಳಲಾಗಿದೆ.