ಆನೇಕಲ್: ಇತ್ತೀಚೆಗೆ ಆನೆ ದಂಡಿನಿಂದ ತಪ್ಪಿಸಿಕೊಂಡಿದ್ದ ಮರಿ ಆನೆಯನ್ನು ತಾಯಿ ಆನೆ ಮಡಿಲಿಗೆ ಸೇರಿಸಲು ಖುದ್ದು ಅರಣ್ಯ ಸಚಿವರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ಮರಿ ಆನೆಯನ್ನು ತಾಯಿ ಆನೆ ಹಿಂಡಿಗೆ ಸೇರಿಸಲು ಹಲವು ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಸದ್ಯ ಮರಿ ಆನೆಗೆ ಜೈವಿಕ ಉದ್ಯಾನ ಮೃಗಾಲಯದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚೇತರಿಕೆ ಕಾಣುತ್ತಿದ್ದು, ಏಳೆಂಟು ದಿನದ ಹೆಣ್ಣು ಆನೆಮರಿ ಇದಾಗಿದೆ. ಅರಣ್ಯ ಸಚಿವರು ಆನೆ ಮರಿಯನ್ನು ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳೊಂದಿಗೆ ಮೊಕ್ಕಾಂ ಹೂಡಿದ್ದಾರೆ.