ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ರಸ್ತೆ ಬದಿ ಡ್ರಗ್ಸ್ ಮಾರುತ್ತಿದ್ದ ತಾಂಜೇನಿಯಾದ ಮಹಿಳೆ ಬಂಧನ - Foreign woman arrested in drugs sell case in Bengaluru

ಸಾರ್ವಜನಿಕ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

foreign-woman-arrested-in-drugs-sell-case-in-bengaluru
ಬೆಂಗಳೂರಲ್ಲಿ ರಸ್ತೆ ಬದಿ ಡ್ರಗ್ಸ್ ಮಾರುತ್ತಿದ್ದ ಮಹಿಳೆ ಬಂಧನ

By

Published : Jun 16, 2022, 8:31 PM IST

ಬೆಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿತಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ 13 ಗ್ರಾಂ ಎಂ.ಡಿ ಕ್ರಿಸ್ಟಲ್ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ತಾಂಜೇನಿಯಾದ ಫಾತಿಮಾ ಓಮರಿ ವೋ ಕೆಲ್ವಿನ್ ಜೇಮ್ಸ್ (30) ಬಂಧಿತ ಆರೋಪಿ. ಬೆಂಗಳೂರಿನ ಕಮ್ಮನಹಳ್ಳಿ ರಸ್ತೆಯ ಜಲವಾಯು ವಿಹಾರದ ಎದುರಿರುವ ಕಾಫಿ ಡೇ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತಳಿಂದ 13 ಗ್ರಾಂ ಎಂ.ಡಿ ಕ್ರಿಸ್ಟಲ್ ಮಾದಕ ವಸ್ತು ಮತ್ತು ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ತಾಂಜೇನಿಯಾದ ಆರೋಪಿಯು ಟೂರಿಸ್ಟ್ ವೀಸಾದಲ್ಲಿ 2018ರಲ್ಲಿ ಭಾರತಕ್ಕೆ ಬಂದ್ದಿದ್ದಾಳೆ. ಅ ನಂತರ ಇಲ್ಲಿಯೇ ಆಕ್ರಮವಾಗಿ ನೆಲೆಸಿ ಡಿಸ್ಕ್ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಳು. ಈಕೆಯ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಫೋನ್ ಪೇ ಮೂಲಕ ಲಂಚ ಪಡೆದ ಚಿಕ್ಕಬಳ್ಳಾಪುರ ನಗರಸಭೆ ನೌಕರ ಅಮಾನತು

ABOUT THE AUTHOR

...view details