ಕರ್ನಾಟಕ

karnataka

ETV Bharat / state

ವೀಸಾ ನಿಯಮ ಉಲ್ಲಂಘಿಸಿದ ವಿದೇಶಿ ತಬ್ಲಿಘಿಗಳಿಗೆ 10 ವರ್ಷ ನಿರ್ಬಂಧ ಹೇರಿ ಹೈಕೋರ್ಟ್ ಆದೇಶ - ಹೈಕೋರ್ಟ್ ಸುದ್ದಿ

ವೀಸಾ ನಿಯಮ ಉಲ್ಲಂಘಿಸಿ ಧಾರ್ಮಿಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ 9 ವಿದೇಶಿಯರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. 10 ವರ್ಷ ದೇಶಕ್ಕೆ ಭೇಟಿ ನೀಡದಂತೆ ಅವರ ಮೇಲೆ ನಿರ್ಬಂಧ ಹೇರಿದೆ..

High court
High court

By

Published : Aug 8, 2020, 3:53 PM IST

ಬೆಂಗಳೂರು :ವೀಸಾ ನಿಯಮಗಳನ್ನು ಉಲ್ಲಂಘಿಸಿ ರಾಜ್ಯದಲ್ಲಿ ಧಾರ್ಮಿಕ ಪ್ರಚಾರಕ್ಕೆ ಮುಂದಾಗಿದ್ದ 9 ಮಂದಿ ವಿದೇಶಿಯರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೇ, ಮುಂದಿನ 10 ವರ್ಷ ಮತ್ತೆ ದೇಶಕ್ಕೆ ಭೇಟಿ ನೀಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ ನಂತರವೇ ಬಂಧನ ಕೇಂದ್ರದಿಂದ ಅವರನ್ನು ಸ್ವದೇಶಕ್ಕೆ ಹಿಂತಿರುಗಿ ಹೋಗಲು ಅನುಮತಿಸುವಂತೆ ಡಿಟೆನ್ಷನ್ ಸೆಂಟರ್ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ತಬ್ಲಿಘಿ ಜಮಾತ್ ಸಮಾವೇಶಕ್ಕೆ ಆಗಮಿಸಿದ್ದ ಈ 9 ಮಂದಿ ವಿದೇಶಿಯರ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಠಾಣೆ ಪೊಲೀಸರು ಮತ್ತು ಬೆಂಗಳೂರಿನ ಜಗಜೀವನ್ ರಾಮ್ ನಗರ ಠಾಣೆ ಪೊಲೀಸರು ವಿದೇಶಿಯರ ಕಾಯ್ದೆ 1946 ಮತ್ತು ಪ್ರವಾಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು.

ಹಾಗೆಯೇ ನಗರದ ಎಸಿಎಂಎಂ ಕೋರ್ಟ್ ನಲ್ಲಿ ಇವರ ವಿರುದ್ಧ ವಿಚಾರಣೆ ಆರಂಭವಾಗಿತ್ತು. ಆರೋಪಿತರು ತಪ್ಪೊಪ್ಪಿಕೊಂಡ ಹಿನ್ನೆಲೆ ಹೈಕೋರ್ಟ್ ಏಕ ಸದಸ್ಯ ಪೀಠ ಪೊಲೀಸರ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸಿ ಪ್ರಕರಣದಿಂದ ಬಿಡುಗಡೆ ಮಾಡಿ ಆದೇಶಿಸಿದೆ. ಹಾಗೆಯೇ ಆರೋಪಿತರು ಮತ್ತೆ 10 ವರ್ಷಗಳ ಕಾಲ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸುವಂತೆಯೂ ನಿರ್ದೇಶಿಸಿದೆ.

ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ವಿದೇಶಿ ಪ್ರಜೆಗಳೂ ಸೇರಿ ಒಟ್ಟು 16 ಮಂದಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ವಿದೇಶಿ ಪ್ರಜೆಗಳನ್ನು ಬಿಡುಗಡೆ ಮಾಡಿದೆಯಾದರೂ, ಸ್ಥಳೀಯರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿಲ್ಲ. ಬದಲಿಗೆ ಇವರ ವಿರುದ್ಧದ ತನಿಖೆಯನ್ನು 6 ತಿಂಗಳೊಳಗೆ ಮುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

ABOUT THE AUTHOR

...view details