ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಯೂರಿದ್ದ 38 ವಿದೇಶಿಯರು ಪೊಲೀಸರ ವಶ - ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಯೂರಿದ್ದ ವಿದೇಶಿಗರ ಬಂಧನ

ಶೈಕ್ಷಣಿಕ, ವ್ಯವಹಾರದ ಸಲುವಾಗಿ ವೀಸಾ ಪಡೆದುಕೊಂಡು ಬೆಂಗಳೂರಿಗೆ ಬರುವ ವಿದೇಶಿಗರು ಗಡುವು ಮೀರಿದರೂ ತಮ್ಮ ದೇಶಗಳಿಗೆ ತೆರಳದೆ ಬೆಂಗಳೂರು ನಗರದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.

ಬೆಂಗಳೂರು
ಬೆಂಗಳೂರು

By

Published : May 31, 2022, 9:43 PM IST

ಬೆಂಗಳೂರು:ಸೂಕ್ತ ದಾಖಲಾತಿ ಇಲ್ಲದೆ ನಗರದಲ್ಲಿ ಅಕ್ರಮವಾಗಿ ನೆಲೆಯೂರಿರುವ ವಿದೇಶಿ‌‌ ಪ್ರಜೆಗಳ ಮೇಲೆ ವಿಶೇಷ ಕಾರ್ಯಾಚರಣೆ ಕೈಗೊಂಡು 32 ಮಂದಿ‌ಯನ್ನು ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದರು. ಇಂದು ಮತ್ತೆ ಆರು ಮಂದಿಯನ್ನು ವಶಕ್ಕೆ‌ ಪಡೆದಿದ್ದಾರೆ.

ಶೈಕ್ಷಣಿಕ, ವ್ಯವಹಾರದ ಸಲುವಾಗಿ ವೀಸಾ ಪಡೆದುಕೊಂಡು ಬೆಂಗಳೂರಿಗೆ ಬರುವ ವಿದೇಶಿಗರು ಗಡುವು ಮೀರಿದರೂ ತಮ್ಮ ದೇಶಗಳಿಗೆ ತೆರಳದೆ ನಗರದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಜೊತೆಗೆ ಡ್ರಗ್ಸ್, ವೇಶ್ಯಾವಾಟಿಕೆ ದಂಧೆ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹಲವು ಬಾರಿ ಬಂಧಿಸಿದರೂ ಹೊರಬಂದು ಮತ್ತೆ ತಮ್ಮ‌‌ ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.‌‌ ಇವರಿಗೆ ಕಡಿವಾಣ ಹಾಕಲು ವಿಶೇಷ ಅಭಿಯಾನ ಕೈಗೊಂಡಿದ್ದ ಪೊಲೀಸರು ಎರಡು ದಿನಗಳಲ್ಲಿ 38 ಮಂದಿ ವಿದೇಶಿಯರನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ.

ವಿದೇಶಿಯರಿಗೆ ಮನೆ ನೀಡುವ ಮುನ್ನ ಎಚ್ಚರ..ವಶಕ್ಕೆ‌ ಪಡೆದುಕೊಂಡ 38 ಮಂದಿ ಆರೋಪಿಗಳ ಬಹುತೇಕರು ನಿಖರವಾದ ಹೆಸರು, ಮನೆ ವಿಳಾಸ ತಿಳಿದುಬಂದಿಲ್ಲ. ದಕ್ಷಿಣ ಆಫ್ರಿಕ, ನೈಜೀರಿಯಾ ಮೂಲದವರಾಗಿದ್ದಾರೆ‌.‌ ತನಿಖೆಯಲ್ಲಿ‌ ಬಾಡಿಗೆದಾರರ ಪೂರ್ವಾಪರ ತಿಳಿದುಕೊಳ್ಳದೆ ಹಣದಾಸೆಗಾಗಿ ಮನೆ ಮಾಲೀಕರು ಮನೆ ನೀಡುತ್ತಿದ್ದಾರೆ. ಹೀಗಾಗಿ ದಾಖಲಾತಿ ಇಲ್ಲದ ವಿದೇಶಿಯರಿಗೆ ಮನೆ ಬಾಡಿಗೆ ನೀಡಿದರೆ ಮಾಲೀಕರನ್ನು ಬಂಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಓದಿ:ಟಿಕಾಯತ್​ಗೆ ಮಸಿ ಬಳಿದ ಪ್ರಕರಣ: ಈ ಹುಚ್ಚುತನ‌ ಸಹಿಸಲಾಗದು ಎಂದ ಗೃಹ ಸಚಿವರು

For All Latest Updates

TAGGED:

ABOUT THE AUTHOR

...view details