ಕರ್ನಾಟಕ

karnataka

By

Published : Jan 29, 2021, 11:38 AM IST

Updated : Jan 29, 2021, 1:29 PM IST

ETV Bharat / state

ವಿದೇಶಿ ಲೇಡಿ ಎಟಿಎಂ ಕೇಸ್ ಪ್ರಕರಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ವಿದೇಶಿ ಲೇಡಿ ಎಟಿಎಂ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದ್ದು, ಈ ಹೈಟೆಕ್ ದಂಧೆಯ ಮಾಸ್ಟರ್ ಮೈಂಡ್ ವಿದೇಶದಲ್ಲಿದ್ದೇ ಮಾನಿಟರ್ ಮಾಡುತ್ತಿದ್ದಾನೆ. ಸ್ಟುಡೆಂಟ್ ವಿಸಾದ ಮೂಲಕ‌ ಬೆಂಗಳೂರಿಗೆ ಬಂದು, ಕ್ರೈಂನಲ್ಲಿ ಸ್ಟಿಫಾನಿಯಾ ಭಾಗಿಯಾಗುತ್ತಿದ್ದಳು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

ವಿದೇಶಿ ಲೇಡಿ ಎಟಿಎಂ ಕೇಸ್ ಪ್ರಕರಣ
ವಿದೇಶಿ ಲೇಡಿ ಎಟಿಎಂ ಕೇಸ್ ಪ್ರಕರಣ

ಬೆಂಗಳೂರು:ಎಟಿಎಂನಲ್ಲಿದ್ದ ಹಣಕ್ಕೆ ಕನ್ನ ಹಾಕುತ್ತಿದ್ದ ವಿದೇಶಿ ಲೇಡಿ ಪ್ರಕರಣದ ತನಿಖೆಯನ್ನು ಸಂಪಿಗೆಹಳ್ಳಿ ಪೊಲೀಸರು ನಡೆಸುತ್ತಿರುವ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ವಿದೇಶಿ ಲೇಡಿ ಸ್ಟಿಫಾನಿಯಾ ಅಲಿಯಾಸ್ ಖೇಟ್ ಹಲವು ವಿಚಾರ ಬಾಯಿ ಬಿಟ್ಟಿದ್ದು, ಆಕೆಯ ಹಿಂದೆ ಅತೀ ದೊಡ್ಡ ವಿದೇಶಿ ಜಾಲ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ.

ಈ ಹೈಟೆಕ್ ದಂಧೆಯ ಮಾಸ್ಟರ್ ಮೈಂಡ್ ವಿದೇಶದಲ್ಲಿದ್ದೇ ಮಾನಿಟರ್ ಮಾಡುತ್ತಿದ್ದಾನೆ. ಪೊಲೀಸರಿಗೆ ಸೆರೆ ಸಿಕ್ಕ ಸ್ಟಿಫಾನಿಯಾ ಅಲಿಯಾಸ್ ಖೇಟ್ ಎರಡು - ಮೂರನೇ‌ ಹಂತದ ಫೀಲ್ಡ್ ವರ್ಕರ್ ಆಗಿದ್ದು, ಮಾಸ್ಟರ್ ಮೈಂಡ್ ಪ್ಲಾನ್​​ನಂತೆ ಸ್ಟಿಫಾನಿಯಾ ತಂಡ ಬೆಂಗಳೂರಿನಲ್ಲಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿತ್ತು. ಸ್ಟುಡೆಂಟ್ ವಿಸಾದ ಮೂಲಕ‌ ಬೆಂಗಳೂರಿಗೆ ಬಂದು, ಕ್ರೈಂನಲ್ಲಿ ಸ್ಟಿಫಾನಿಯಾ ಭಾಗಿಯಾಗುತ್ತಿದ್ದಳು ಎಂದು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ವಿದೇಶಿ ಲೇಡಿ ಎಟಿಎಂ ಕೇಸ್ ಪ್ರಕರಣ

ಎಟಿಎಂಗಳ ಹಿಂದೆ ಹೈಟೆಕ್ ಪ್ರೊಗ್ರಾಮ್ಡ್ ಡಿವೈಸ್ ಕ್ರಾಸ್ ಕನೆಕ್ಟ್ ಮಾಡಿದ ಬಳಿಕ ಆ ಡಿವೈಸ್ ನೀಡೋ ಓಟಿಪಿಯಿಂದ ಹಣ ಪಡೆಯುತ್ತಿದ್ದಳು. ಎಟಿಎಂಗಳಿಂದ ಕನ್ನ ಹಾಕೋ ಹಣದ ಆಧಾರದಲ್ಲಿ ಮಾಸ್ಟರ್ ಮೈಂಡ್​ನಿಂದ ಈಕೆಗೆ ಕಮಿಷನ್ ಕೈ ಸೇರುತಿತ್ತು. ಒಂದು ಪೇಮೆಂಟ್​ಗೆ ಶೇ.20ರಷ್ಟು ಕಮಿಷನ್ ಇವಳ ತಂಡ ಪಡೆಯುತ್ತಿತ್ತು ಎಂಬುದು ತಿಳಿದುಬಂದಿದೆ.

ಓದಿ:ಬೆಂಗಳೂರಲ್ಲಿ ಎಟಿಎಂನಿಂದ ಹಣ ಎಗರಿಸುತ್ತಿದ್ದ ವಿದೇಶಿ ಮಹಿಳೆಯ ಬಂಧನ

ಈ ಹೈಟೆಕ್ ಪ್ರೊಗ್ರಾಮ್ಡ್ ಡಿವೈಸ್, ಎಟಿಎಂ ಮಷಿನ್​ನ ಇನ್ ಬಿಲ್ಡ್ ಪ್ರೊಗ್ರಾಮ್ ಅನ್ನೇ ಸ್ಟಾಪ್ ಮಾಡಿ ಓವರ್ ಟೇಕ್ ಮಾಡುತಿತ್ತು. 1000 ರೂ. ಹಣ ಡ್ರಾ ಮಾಡೋಕೆ ಬಟನ್ ಪ್ರೆಸ್ ಮಾಡಿದ್ರೆ, ಎಟಿಎಂ ಮಷಿನ್ ನಮೂದಿಸಿರುವ ಮೌಲ್ಯದ ಹಣ ಡ್ರಾ ಮಾಡುತ್ತೆ. ಆದರೆ, ಈ ಹೈಟೆಕ್ ಪ್ರೊಗ್ರಾಮ್ಡ್ ಡಿವೈಸ್ ಎಂಟರ್ ಮಾಡಿರೋ ಹಣದಲ್ಲಿ ಒಂದು‌ ಸೊನ್ನೆಯನ್ನು ಸರಿಸಿಕೊಳ್ಳುತ್ತಿತ್ತು. ಅಂದರೆ 1000 ರೂ. ಬದಲಿಗೆ 10000 ಹಣ ಡ್ರಾ ಆಗುತಿತ್ತು. ಈ ರೀತಿ ಕೆಲಸ ಮಾಡುವ ಹೈಟೆಕ್ ಪ್ರೊಗ್ರಾಮ್ಡ್ ಡಿವೈಸ್ ಫಿಕ್ಸ್ ಮಾಡಿ, ಎಟಿಎಂ ಓಟಿಪಿಯನ್ನು ಮಾಸ್ಟರ್ ಮೈಡ್​ಗೆ ಈ ಗ್ಯಾಂಗ್​ಗೆ ಕಳುಹಿಸುತ್ತಿತ್ತು. ಬಳಿಕ ಆ ಓಟಿಪಿ ಬಳಸಿ ಎಟಿಎಂಗಳಲ್ಲಿ‌ ಹಣ ಬಾಚಿಕೊಳ್ಳುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

Last Updated : Jan 29, 2021, 1:29 PM IST

ABOUT THE AUTHOR

...view details