ಬೆಂಗಳೂರು:ಉಸಿರಾಡು ಕರ್ನಾಟಕ ಎನ್ನುವ ಘೋಷಣೆಯೊಂದಿಗೆ ಹೊರನಾಡ ಕನ್ನಡಿಗರು ಸಹಾಯಕ್ಕೆ ಮುಂದಾಗಿದ್ದಾರೆ. ಕರ್ನಾಟಕದ ಜನರ ಕಷ್ಟಕ್ಕೆ ಕೆನಾಡದಲ್ಲಿರುವ ಕನ್ನಡಿಗರು ಸ್ಪಂದಿಸಿದ್ದಾರೆ.
ಕೊರೊನಾ ಸಂತ್ರಸ್ತರಿಗಾಗಿ 30 ಸಾವಿರ ಡಾಲರ್ಗಳ ಸಂಗ್ರಹಿಸಿದ ವಿದೇಶಿ ಕನ್ನಡಿಗರು ಸದ್ಯದ ಕರ್ನಾಟಕದ ಪರಿಸ್ಥಿತಿ ನೋಡಿ ಒಂದಾದ ವಿದೇಶಿ ಕನ್ನಡಿಗರು ಕಳೆದೆರಡು ದಿನಗಳಲ್ಲಿ 30 ಸಾವಿರ ಡಾಲರ್ಗಳನ್ನು ಕಲೆಹಾಕಿದ್ದಾರೆ. 30 ಸಾವಿರ ಡಾಲರ್ಗಳಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಖರೀದಿಸಿ ಕರ್ನಾಟಕ್ಕೆ ಕಳುಹಿಸಲಾಗುತ್ತಿದೆ.
ಓದಿ:ಇಂದಿನಿಂದ 14 ದಿನ ಕರ್ನಾಟಕ ಕಂಪ್ಲೀಟ್ ಲಾಕ್.. ಜಿಲ್ಲಾ ಗಡಿಗಳು ಬಂದ್.. ಹೀಗಿತ್ತು ಮೊದಲ ದಿನದ ಸ್ಥಿತಿಗತಿ
ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮೂಲಕ ಅವಶ್ಯಕತೆ ಇರುವವರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ತಲುಪಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಕೆನಾಡದಲ್ಲಿ ನೆಲೆಸಿರುವ ಕನ್ನಡಿಗ ನಂದಕುಮಾರ್ ಮತ್ತು ವಿನಯ್ ಬರತೂರ್ ನಮ್ಮವರಿಗೆ ಆಸರೆಯಾಗುವ ಕೆಲಸ ಎಂದು ಸಮಾಜಮುಖಿ ಕಾರ್ಯದ ಬಗ್ಗೆ ವಿವರಿಸಿದ್ದಾರೆ.