ಕರ್ನಾಟಕ

karnataka

ETV Bharat / state

ಕೇಂದ್ರದ ಪರಿಶೀಲನೆಗೊಳಪಟ್ಟ ಬಳಿಕ ವಿದೇಶಿ ನೆರವು ಬಿಡುಗಡೆ : ಹೈಕೋರ್ಟ್ - ವಿದೇಶಿ ಕೊಡುಗೆಗಳ ನಿಯಂತ್ರಣಾ ಕಾಯಿದೆ 2010

ಭಾರತೀಯ ಸಂಸ್ಥೆಗಳು ವಿದೇಶಗಳಿಂದ ಪಡೆಯುವ ಕೊಡುಗೆಗಳು(ನಿಧಿ) ಕೇಂದ್ರ ಗೃಹ ಇಲಾಖೆಯ ಪರಿಶೀಲನೆಗೊಳಪಡಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.

foreign-aid-released-after-verification-by-centre-says-high-court
ಕೇಂದ್ರದ ಪರಿಶೀಲನೆಗೊಳಪಟ್ಟ ಬಳಿಕ ವಿದೇಶಿ ನೆರವು ಬಿಡುಗಡೆ : ಹೈಕೋರ್ಟ್

By ETV Bharat Karnataka Team

Published : Aug 26, 2023, 10:53 PM IST

ಬೆಂಗಳೂರು: ವಿದೇಶಿ ಕೊಡುಗೆಗಳ ನಿಯಂತ್ರಣಾ ಕಾಯಿದೆ 2010ರ (ಎಫ್‌ಸಿಆರ್‌ಎ) ಅಡಿಯಲ್ಲಿ ಭಾರತೀಯ ಸಂಸ್ಥೆಗಳು ವಿದೇಶಗಳಿಂದ ಪಡೆಯುವ ಕೊಡುಗೆಗಳು(ನಿಧಿ) ಕೇಂದ್ರ ಗೃಹ ಇಲಾಖೆಯ ಪರಿಶೀಲನೆಗೊಳಪಡಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಬೆಂಗಳೂರು ಮೂಲದ ಮಾನಸ ಸೆಂಟರ್ ಫಾರ್ ಡೆವಲಪ್​​ಮೆಂಟ್ ಅಂಡ್ ಸೋಷಿಯಲ್ ಆರ್ಗನೈಸೇಷನ್ಸ್(ಎನ್‌ಜಿಒ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಸ್ ಹೇಮಲೇಖ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಜತೆಗೆ, ಬಡವರ ಉದ್ಧಾರಕ್ಕಾಗಿ ನೆರವು (ಡಾನ್ ಚರ್ಚ್ ಏಡ್) ಎಂಬ ಕಾರಣ ನೀಡಿ ವಿದೇಶಗಳಿಂದ ಹರಿದು ಬರುವ ಹಣಕಾಸಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಎಲ್ಲ ಬ್ಯಾಂಕ್‌ಗಳಿಗೆ ಕೇಂದ್ರ ಗೃಹ ಇಲಾಖೆ 2013ರಲ್ಲಿಯೇ ನಿರ್ದೇಶನ ನೀಡಿದೆ. ಹೀಗಾಗಿ ಈ ಮೊತ್ತ ಬಿಡುಗಡೆಗೂ ಮುನ್ನ ಗೃಹ ಇಲಾಖೆಯ ಪರಿಶೀಲನೆಗೊಳಪಡಬೇಕು.

ಅಲ್ಲದೆ, ಎಫ್‌ಸಿಆರ್ ಕಾಯಿದೆಯ ಸೆಕ್ಷನ್ 46 ಅಡಿಯಲ್ಲಿ ಯಾವುದೇ ಬ್ಯಾಂಕುಗಳಿಗೆ ವಿದೇಶಗಳಿಂದ ಹರಿದು ಬರುವ ಮೊತ್ತ ಕೇಂದ್ರ ಸರ್ಕಾರದ ಪರಿಶೀಲನೆಗೊಳಪಡಬೇಕು. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿರ್ದೇಶನವನ್ನೂ ನೀಡಿದೆ. ಅದರಂತೆ ಕೇಂದ್ರ ಗೃಹ ಇಲಾಖೆ ಭದ್ರತಾ ಎಜೆನ್ಸಿಗಳ ಮೂಲಕ ಕೊಡುಗೆ ನೀಡಿರುವವರ ಕುರಿತಂತೆ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಅಲ್ಲದೆ, ದೇಶದಲ್ಲಿನ ಯಾವುದೇ ಬ್ಯಾಂಕ್‌ಗೆ ಯಾವುದೇ ಸಂಸ್ಥೆಯಿಂದ, ವ್ಯಕ್ತಿಯಿಂದ ಹಾಗೂ ಎಜೆನ್ಸಿಯಿಂದ ಹಣಕಾಸು ಬಂದಿದ್ದಲ್ಲಿ ಕೇಂದ್ರ ಗೃಹ ಇಲಾಖೆ ಆ ಸಂಬಂಧ ಖಚಿತ ಮಾಹಿತಿ ಪಡೆದುಕೊಂಡ ಬಳಿಕ ಎನ್‌ಜಿಒಗಳ ಖಾತೆಗೆ ಜಮಾ ಮಾಡಲು ಅವಕಾಶ ನೀಡಲಿದೆ. ಆದ್ದರಿಂದ ಕೇಂದ್ರ ಗೃಹ ಇಲಾಖೆಯಿಂದ ಅನುಮತಿ ಪಡೆಯದೆ ಅರ್ಜಿದಾರರ ಖಾತೆಗೆ ಹಣ ವರ್ಗಾವಣೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿತ್ತು.

ಪ್ರಕರಣದ ಹಿನ್ನೆಲೆ :ಅರ್ಜಿದಾರ ಎನ್‌ಜಿಒ 2013ರಲ್ಲಿ ಡಾನ್ ಚರ್ಚ್ ಏಡ್​ನಿಂದ 3.23 ಲಕ್ಷ ಮತ್ತು 23.89 ಲಕ್ಷದಂತೆ ಎರಡು ಬಾರಿ ಮೊತ್ತವನ್ನು ಡೆವಲಪ್​ಮೆಂಟ್ ಕ್ರೆಡಿಟ್ ಬ್ಯಾಂಕ್ ಲಿಮಿಟೆಡ್‌ನಲ್ಲಿರುವ ಎನ್‌ಜಿಒ ಖಾತೆಗೆ ಜಮೆ ಆಗಿತ್ತು. ಈ ಕುರಿತಂತೆ ಪ್ರತ್ರಿಕ್ರಿಯೆ ನೀಡಿದ್ದ ಬ್ಯಾಂಕ್, ಈ ಮೊತ್ತವನ್ನು ಪಡೆದುಕೊಳ್ಳಲು ಕೇಂದ್ರ ಗೃಹ ಇಲಾಖೆಯಿಂದ ಅನುಮತಿ ನೀಡದೆ ಬಿಡುಗಡೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿತ್ತು. ಕಾನೂನು ಪ್ರಕಾರ ಎನ್‌ಜಿಒ ನೋಂದಣಿಯಾಗಿದ್ದರೂ, ವಿದೇಶಗಳಿಂದ ಪಡೆದಿದ್ದ ಮೊತ್ತವನ್ನು ಬಿಡುಗಡೆಗೆ ಬ್ಯಾಂಕ್ ಅವಕಾಶ ನೀಡಿರಲಿಲ್ಲ. ಇದು ಕಾನೂನು ಬಾಹಿರ. ಇದರಿಂದ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ನಿರ್ದೇಶನ ನೀಡಬೇಕು ಎಂದು ಎನ್‌ಜಿಒ ತನ್ನ ಅರ್ಜಿಯಲ್ಲಿ ಕೋರಿತ್ತು.

ಇದನ್ನೂ ಓದಿ :ಬೆಂಗಳೂರಲ್ಲಿ ಅಕ್ರಮವಾಗಿ 9736 ಎ ಖಾತೆ ನೀಡಿದ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ABOUT THE AUTHOR

...view details