ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆಗಳ ಪುಂಡಪೋಕರಿಗಳ ಕಾಟ ಇನ್ನೂ ನಿಂತಿಲ್ಲ. ರೋಡ್ ರೋಮಿಯೋಗಳಿಂದಾಗಿ ವಾಹನಸವಾರರು ನಿತ್ಯ ತೊಂದರೆ ಅನುಭವಿಸ್ತಾನೆ ಇರ್ತಾರೆ. ನಿನ್ನೆ ರಾತ್ರಿ ಕೂಡ ರಸ್ತೆ ಮಧ್ಯೆ ಯುವಕರು ಗುಂಪು ಗುಂಪಾಗಿ ನಿಂತ್ಕೊಂಡಿದ್ದರು. ವ್ಹೀಲಿಂಗ್ ನಡೆಸೋದಕ್ಕೆ ಮುಂದಾಗಿದ್ದನ್ನ ಕಂಡ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಯುವಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ರಸ್ತೆ ಮಧ್ಯೆ ವ್ಹೀಲಿಂಗ್ ರೋಡ್ ರೋಮಿಯೋಗಳಿಗೆ ಡಿಸಿಪಿ ಶಶಿಕುಮಾರ್ ಖಡಕ್ ವಾರ್ನಿಂಗ್! - undefined
ವ್ಹೀಲಿಂಗ್ ಮಾಡೋಕೆಂದು ರಸ್ತೆ ಮಧ್ಯೆದಲ್ಲಿ ಗುಂಪು ಗುಂಪಾಗಿ ನಿಂತ್ಕೊಂಡಿದ್ದ ರೋಡ್ ರೋಮಿಯೋಗಳಿಗೆ ಡಿಸಿಪಿ ಶಶಿಕುಮಾರ್ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಶಾಂತಿ ಕದಡುವ ಮತ್ತು ಸಂಚಾರಕ್ಕೆ ತೊಂದರೆ ಮಾಡಿದ್ರೇ ತಕ್ಕ ಶಾಸ್ತಿ ಮಾಡ್ತೀವಿ ಅಂತಾ ಖಡಕ್ ವಾರ್ನ್ ಮಾಡಿದ್ದಾರೆ.
![ರಸ್ತೆ ಮಧ್ಯೆ ವ್ಹೀಲಿಂಗ್ ರೋಡ್ ರೋಮಿಯೋಗಳಿಗೆ ಡಿಸಿಪಿ ಶಶಿಕುಮಾರ್ ಖಡಕ್ ವಾರ್ನಿಂಗ್!](https://etvbharatimages.akamaized.net/etvbharat/prod-images/768-512-3193331-thumbnail-3x2-bng.jpg)
ಡಿಸಿಪಿ ಶಶಿಕುಮಾರ್ ವಾರ್ನಿಂಗ್
ಡಿಸಿಪಿ ಶಶಿಕುಮಾರ್ ವಾರ್ನಿಂಗ್
ಸುಮಾರು ಇನ್ನೂರು ಯುವಕರನ್ನು ಕೆಂಪೇಗೌಡ ಸಮುದಾಯ ಭವನಕ್ಕೆ ಕರೆಯಿಸಿದ ಡಿಸಿಪಿ ಶಶಿಕುಮಾರ್ ಯಾವುದೇ ಕಾರಣಕ್ಕೂ ರಸ್ತೆ ಮಧ್ಯೆ ನಿಂತ್ಕೊಂಡು ವ್ಹೀಲಿಂಗ್ ಮಾಡೋದು, ವಾಹನ ಸವಾರರಿಗೆ ತೊಂದರೆ ಮಾಡೋದು ಮತ್ತೊಮ್ಮೆ ಕಂಡು ಬಂದ್ರೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಅಂತಾ ಖಡಕ್ ಎಚ್ಚರಿಗೆ ನೀಡಿದ್ದಾರೆ.
ನಿನ್ನೆ ರಾತ್ರಿ ವೇಳೆ ಯುವಕರು ಗುಂಪು ಕಟ್ಟಿಕೊಂಡು ನಿಂತಿಕೊಂಡಿದ್ದರು. ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನ ಕರೆದು ಶಶಿಕುಮಾರ್ ಮುಂದೆ ಈ ರೀತಿ ರಸ್ತೆ ಮಧ್ಯೆ ವ್ಹೀಲಿಂಗ್ ನಡೆಸದಂತೆ ವಾರ್ನ್ ಮಾಡಿದ್ದಾರೆ.
Last Updated : May 5, 2019, 11:10 AM IST