ಬೆಂಗಳೂರು :ಬೆಳ್ಳಂಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳು ಡಾಲರ್ಸ್ ಕಾಲೋನಿಯ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಸಿದರು. ಸಿಎಂ ನಿವಾಸದ ಆಸುಪಾಸಿನಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಏಕಾಏಕಿ ತೆರವುಗೊಳಿಸಿದ್ದಕ್ಕೆ ಸ್ಥಳೀಯರಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು.
ಆರ್.ಎಂ.ವಿ ಎರಡನೇ ಹಂತದಲ್ಲಿರುವ ಡಾಲರ್ಸ್ ಕಾಲೋನಿಗೆ ಬೆಳಗ್ಗೆಯೇ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು, ಫುಟ್ ಪಾತ್ ಅನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಿದ್ದ ಅಂಗಡಿಯ ಮೆಟ್ಟಿಲು ಮತ್ತು ಕಬ್ಬಿಣದ ಗ್ರಿಲ್ ಗಳನ್ನು ತೆರವು ಮಾಡಿದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತುನ ಚಕಮಕಿ ನಡೆಯಿತು.