ಕರ್ನಾಟಕ

karnataka

ETV Bharat / state

ರಾತ್ರಿ ಊಟವಿಲ್ಲದೇ ಉಪವಾಸ ಮಲಗುತ್ತಿರುವ ನಿರಾಶ್ರಿತರು!

ಸಿಲಿಂಡರ್ ಖಾಲಿ ನೆಪದಲ್ಲಿ ಕಳೆದ ಒಂದು ವಾರದಿಂದ ರಾತ್ರಿ ಹೊತ್ತು ನಿರಾಶ್ರಿತರಿಗೆ ಊಟ‌ ನೀಡದಿರುವ ಘಟನೆ ಬೆಂಗಳೂರಿನ ನಿರಾಶ್ರಿತರ ಕೇಂದ್ರ‌ವೊಂದರಲ್ಲಿ ಕಂಡು ಬಂದಿದೆ.

Food problem to Refugees, Food problem to Refugees in Bangalore, Food problem to Refugees news, Bangalore Refugee center, Bangalore Refugee center news, ನಿರಾಶ್ರಿತರಿಗೆ ಊಟದ ಸಮಸ್ಯೆ, ಬೆಂಗಳೂರಿನಲ್ಲಿ ನಿರಾಶ್ರಿತರಿಗೆ ಊಟದ ಸಮಸ್ಯೆ, ನಿರಾಶ್ರಿತರಿಗೆ ಊಟದ ಸಮಸ್ಯೆ ಸುದ್ದಿ, ಬೆಂಗಳೂರು ನಿರಾಶ್ರಿತರ ಕೇಂದ್ರ, ಬೆಂಗಳೂರು ನಿರಾಶ್ರಿತರ ಕೇಂದ್ರ ಸುದ್ದಿ,
ರಾತ್ರಿ ಊಟವಿಲ್ಲದೆ ಉಪವಾಸ ಮಲಗುತ್ತಿರುವ ನಿರಾಶ್ರಿತರು

By

Published : Jul 25, 2020, 6:46 AM IST

ದೊಡ್ಡಬಳ್ಳಾಪುರ: ಕಳೆದ ಮಾರ್ಚ್​ನಲ್ಲಿ ಆರಂಭಗೊಂಡ ಲಾಕ್​​ಡೌನ್​​ ಸಂದರ್ಭದಲ್ಲಿ ಹಲವು ನಿರ್ಗತಿಕರು ಹಾಗೂ ನಿರಾಶ್ರಿತರನ್ನ ಗುರುತಿಸಿ ನಗರಸಭೆ ವಸತಿ, ಊಟದ ವ್ಯವಸ್ಥೆ ಮಾಡಿತ್ತು. ಆದರೀಗ ಸಮರ್ಪಕ ನಿರ್ವಹಣೆ ಇಲ್ಲದೇ ಅವ್ಯವಸ್ಥೆಗಳ ಆಗರವಾಗಿದೆ ನಗರದ ನಿರಾಶ್ರಿತರ ಕೇಂದ್ರ.

ಲಾಕ್​​ಡೌನ್​​ ಹಾಗೂ ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿರುವ ಹಲವು ಒಂಟಿ ಮಹಿಳೆಯರು, ವಿವಿಧ ರೀತಿಯ ವಿಕಲಚೇತನರು, ನಿರ್ಗತಿಕರು, ವಯೋವೃದ್ಧರು ನಗರಸಭೆಯಿಂದ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಸರ್ಕಾರದಿಂದಲೇ ಉಚಿತ ವಸತಿ, ಊಟದ ವ್ಯವಸ್ಥೆ ಮಾಡಿದೆ. ಇದರ ನಿರ್ವಹಣೆಯನ್ನು ಸುರಭಿ ಮ್ಯಾನ್ ಪವರ್ ಕನ್ಸಲ್ಟನ್ಸಿ ಎಂಬ ಖಾಸಗಿ ಎನ್​ಜಿಒ ನೀಡಲಾಗಿತ್ತು.

ಆರಂಭದಲ್ಲಿ ಚೆನ್ನಾಗಿದ್ದ ಇಲ್ಲಿನ ವ್ಯವಸ್ಥೆ ಈಗ ಸಂಪೂರ್ಣ ಹದಗೆಟ್ಟಿದೆ. ಕಳೆದ ವಾರ ಸಿಲಿಂಡರ್ ಖಾಲಿ ನೆಪದಲ್ಲಿ 8 ದಿನಗಳಿಗೂ ಹೆಚ್ಚು ಕಾಲ ಅಡುಗೆಯನ್ನೇ ಮಾಡಿಲ್ಲ. ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಅಡುಗೆ ಮಾಡಲು ಸಮಯದ ಮೀತಿಯೇ ಇಲ್ಲದಂತಾಗಿದೆ. ಬೆಳಗ್ಗೆಯ ತಿಂಡಿ 11 ಗಂಟೆಗೆ ಸಿದ್ದಗೊಂಡರೇ ಮಧ್ಯಾಹ್ನದ ಊಟ ಸಂಜೆ 4 ಗಂಟೆಗೆ ಸಿದ್ದಗೊಳ್ಳುತ್ತದೆ. ಇನ್ನು ರಾತ್ರಿ ಊಟ ಮಾಡಿದರೆ ಮಾಡುತ್ತಾರೆ ಇಲ್ಲವೆಂದರೆ ಇಲ್ಲ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ.

ಹೆಸರಿಗಷ್ಟೇ ಕೇರ್ ಟೇಕರ್, ಅಡುಗೆ ಸಿಬ್ಬಂದಿ

ಸರ್ಕಾರ ನಿರಾಶ್ರಿತರ ಕೇಂದ್ರದಲ್ಲಿ ಯಾವುದೇ ಸಮಸ್ಯೆ ತಲೆದೂರದಂತೆ ಕೇರ್ ಟೇಕರ್, ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಿದೆ. ಆದರೆ, ಇಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಕೇವಲ ರಿಜಿಸ್ಟರ್ ಬುಕ್​ನಲ್ಲಷ್ಟೇ ಕೇರ್ ಟೇಕರ್, ಅಡುಗೆ ಸಿಬ್ಬಂದಿ ಇದ್ದಾರೆ.

ಇನ್ನು ಅಡುಗೆ ಸಿಬ್ಬಂದಿ ಇಲ್ಲದಿದ್ದರಿಂದ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರೇ ಅಡುಗೆ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಆರಂಭದಲ್ಲಿ ಒಂದಿಷ್ಟು ದಿನ ಅಡುಗೆ ಸಿಬ್ಬಂದಿ ಇದ್ದರು. ತದ ನಂತರ ಅಡುಗೆ ಸಿಬ್ಬಂದಿ ಮುಖವೇ ನೋಡಿಲ್ಲ. ಯಾರೂ ಅಡುಗೆ ಮಾಡುವವರು ಇಲ್ಲದ ಕಾರಣ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೇವೆ ಎಂದು ಇಲ್ಲಿನ ನಿರಾಶ್ರಿತರು ತಮ್ಮ ಅಳಲು ತೋಡಿಕೊಂಡರು.

ನಿರಾಶ್ರಿತ ಕೇಂದ್ರದಲ್ಲಿನ ಕೆಲಸ ಮಾಡುತ್ತಿರುವ ಪ್ರೋಗ್ರಾಂ ಮ್ಯಾನೇಜರ್ ನವೀನ್ ಕುಮಾರ್ ಎಂಬಾತ ಸಾರ್ವಜನಿಕರು, ನಗರಸಭೆ ಅಧಿಕಾರಿಗಳು ಯಾರೇ ಬಂದರೂ ಡೋಂಟ್ ಕೇರ್ ಮಾಸ್ಟರ್​ನಂತೆ ವರ್ತಿಸುತ್ತಿದ್ದಾನೆ. ಹೀಗಾಗಿ ಕೂಡಲೇ ದರ್ಪದ ಪ್ರೋಗ್ರಾಂ ಮ್ಯಾನೇಜರ್​ನನ್ನ ಬದಲಾವಣೆ ಮಾಡಬೇಕು ಎಂದು ಕರವೇ (ಕನ್ನಡಿಗರ ಬಣ) ರಾಜ್ಯಾಧ್ಯಕ್ಷ ಚಂದ್ರಶೇಖರ್ ಆಗ್ರಹಿಸಿದರು.

ನಿರಾಶ್ರಿತರ ಕೇಂದ್ರ‌ಕ್ಕೆ ಭೇಟಿ ನೀಡಿದ ದೊಡ್ಡ‌ಬಳ್ಳಾಪುರ ನಗರಸಭೆಯ ಸಮುದಾಯ ಸಂಘಟನೆ ಅಧಿಕಾರಿ ಮೀನಾ, ನಾನು ಖುದ್ದು ಪರಿಶೀಲನೆ ಮಾಡಿದ್ದೇನೆ. ಸಿಲಿಂಡರ್ ಖಾಲಿ ನೆಪದಲ್ಲಿ ಸಿಬ್ಬಂದಿ ಅಡುಗೆಯೇ ಮಾಡಿಲ್ಲ. ಸರಿಯಾದ ಸಮಯಕ್ಕೆ ಊಟ ನಿರಾಶ್ರಿತರಿಗೆ ಸಿಗುತ್ತಿಲ್ಲ. ಹೆಸರಿಗಷ್ಟೇ ಅಡುಗೆ ಸಿಬ್ಬಂದಿ, ಕೇರ್ ಟೇಕರ್ ಇದ್ದಾರೆ. ವಾಸ್ತವವಾಗಿ ಯಾರೂ ಇಲ್ಲ. ಇಲ್ಲಿನ ಪ್ರೋಗ್ರಾಂ ಮ್ಯಾನೇಜರ್​ನನ್ನು ಈ ಕ್ಷಣದಿಂದಲೇ ಕೆಲಸದಿಂದ ತೆಗೆಯಲು ಸೂಚಿಸಿದ್ದೇನೆ ಎಂದರು.

ABOUT THE AUTHOR

...view details