ಬೆಂಗಳೂರು:ಇಂದಿರಾ ಕ್ಯಾಂಟೀನ್ ನಲ್ಲಿ ಯಾವುದೇ ರೀತಿ ನೂಕು ನುಗ್ಗಲಾಗದಂತೆ, ಜನದಟ್ಟಣೆ ಆಗದಂತೆ ಉಚಿತವಾಗಿ ಆಹಾರ ವಿತರಣೆ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ಈ ಹಿನ್ನಲೆ ಚೆಫ್ ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಗಳು 11 ಸಾವಿರ ಜನರಿಗೆ ಊಟ ಉಪಹಾರ ನೀಡಲು ವ್ಯವಸ್ಥೆ ಮಾಡಿದೆ.
ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪಾರ್ಸೆಲ್... ಒಂದು ಮೀಟರ್ ಅಂತರ ಕಾಯ್ದುಕೊಂಡ ಗ್ರಾಹಕರು... - ಒಂದು ಮೀಟರ್ ಅಂತರ ಕಾಯ್ದುಕೊಂಡ ಗ್ರಾಹಕರು
ಇಂದಿರಾ ಕ್ಯಾಂಟೀನ್ ನಲ್ಲಿ ಯಾವುದೇ ರೀತಿ ನೂಕು ನುಗ್ಗಲಾಗದಂತೆ, ಜನದಟ್ಟಣೆ ಆಗದಂತೆ ಉಚಿತವಾಗಿ ಆಹಾರ ವಿತರಣೆ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ.ಈ ಹಿನ್ನಲೆ ಕ್ಯಾಂಟೀನ್ ಒಳಗಡೆ ಯಾರನ್ನೂ ಬಿಡದೆ, ಹೊರಗಡೆಯಿಂದಲೇ ಆಹಾರದ ಪ್ಯಾಕೆಟ್ ಮಾಡಿ ಪಾರ್ಸೆಲ್ ನೀಡಲಾಗ್ತಿದೆ.
![ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪಾರ್ಸೆಲ್... ಒಂದು ಮೀಟರ್ ಅಂತರ ಕಾಯ್ದುಕೊಂಡ ಗ್ರಾಹಕರು... Food parcel at Indira Canteen](https://etvbharatimages.akamaized.net/etvbharat/prod-images/768-512-6546582-903-6546582-1585200906775.jpg)
ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪಾರ್ಸೆಲ್
ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪಾರ್ಸೆಲ್
ಆದ್ರೆ ಕ್ಯಾಂಟೀನ್ ಒಳಗಡೆ ಯಾರನ್ನೂ ಬಿಡದೆ, ಹೊರಗಡೆಯಿಂದಲೇ ಆಹಾರದ ಪ್ಯಾಕೆಟ್ ಮಾಡಿ ಪಾರ್ಸೆಲ್ ನೀಡಲಾಗ್ತಿದೆ.
ಎಲ್ಲಾ ಕಡೆಯ ಇಂದಿರಾ ಕ್ಯಾಂಟೀನ್ಗಳಲ್ಲಿ ನೀಡದಿದ್ದರೂ, ಅತಿಹೆಚ್ಚು ಜನರು ಬಳಸುವ, ಸಾರ್ವಜನಿಕರು, ಸ್ಲಂ, ಬಡವರು ಹೆಚ್ಚು ಇರುವ ಕಡೆ ಆಹಾರ ಪೂರೈಕೆ ಮಾಡಲಾಗ್ತಿದೆ.
ಮಧ್ಯಾಹ್ನದ ಊಟ ರಾತ್ರಿ ಊಟವೂ ವಿತರಣೆ ಮಾಡಲಿದ್ದಾರೆ. ನಗರದ ಕೆ.ಆರ್. ಮಾರುಕಟ್ಟೆ ಹಾಗೂ ಕೊರಂಮಂಗಲದಲ್ಲೂ ಹೆಚ್ಚು ಗ್ರಾಹಕರು ಬಂದು ಇಂದಿರಾ ಕ್ಯಾಂಟೀನ್ ಊಟ ಸದುಪಯೋಗಪಡಿಸಿಕೊಂಡಿದ್ದಾರೆ.