ಕರ್ನಾಟಕ

karnataka

ETV Bharat / state

ಕೋವಿಡ್ ಕೇರ್ ಸೆಂಟರ್​ನ ಫುಡ್ ಮೆನು ಹೇಗಿರಲಿದೆ ಗೊತ್ತಾ? - ಕೊರೊನಾ ಸುದ್ದಿ

ಹೆಚ್ಚಿನ ಆರೋಗ್ಯ ಸಾಧಾರಣೆಗೆ ಕೋವಿಡ್ ಕೇರ್ ಸೆಂಟರ್( CCC) ಸ್ಥಾಪನೆ ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ ಕಮ್ಯುನಿಟಿ ಹಾಲ್, ಹಾಸ್ಟೆಲ್, ಶಾಲೆ ಕಾಲೇಜು ಆವರಣ, ಮಾಲ್, ಸ್ಟೇಡಿಯಂ, ಮ್ಯಾರೇಜ್/ಪಾರ್ಟಿ ಹಾಲ್, ಎಕ್ಸಿಬಿಷನ್ ಗ್ರೌಂಡ್​ಗಳನ್ನು ಕೋವಿಡ್​ ಕೇರ್​ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ.

food-menu-in-covid-care-centre
ಕೋವಿಡ್ ಕೇರ್ ಸೆಂಟರ್ ಫುಡ್ ಮೆನು

By

Published : Jun 24, 2020, 12:23 AM IST

ಬೆಂಗಳೂರು: ರಾಜ್ಯದಲ್ಲಿ ಸೋಂಕು ಲಕ್ಷಣ ರಹಿತ (Asymptomatic)ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ರೋಗಿಗಳ ಆರೋಗ್ಯ ಸಾಧಾರಣೆಗೆ ಕೋವಿಡ್ ಕೇರ್ ಸೆಂಟರ್( CCC) ಸ್ಥಾಪನೆ ಮಾಡಲಾಗಿದೆ.

ಇದಕ್ಕಾಗಿ ಈಗಾಗಲೇ ಕಮ್ಯುನಿಟಿ ಹಾಲ್, ಹಾಸ್ಟೆಲ್, ಶಾಲೆ ಕಾಲೇಜು ಆವರಣ, ಮಾಲ್, ಸ್ಟೇಡಿಯಂ, ಮ್ಯಾರೇಜ್/ಪಾರ್ಟಿ ಹಾಲ್, ಎಕ್ಸಿಬಿಷನ್ ಗ್ರೌಂಡ್​ಗಳನ್ನು ಕೋವಿಡ್​ ಕೇರ್​ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ.

24/7 ವೈದ್ಯರು ಹಾಗೂ ಸಿಬ್ಬಂದಿ ವರ್ಗಗಳು ಇರಲಿದ್ದು, 50 ವರ್ಷಕ್ಕಿಂತ ಕೆಳಗಿನ ಸೋಂಕು ಲಕ್ಷಣ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ. ಇನ್ನು 100 ರೋಗಿಗಳಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್ ನಿಯೋಜನೆ ಮಾಡಲಾಗುತ್ತಿದೆ. ಈ ಕೋವಿಡ್ ಕೇರ್ ಸೆಂಟರ್​ಗೆ ಸಾರ್ವಜನಿಕ ನಿರ್ಬಂಧ ಇರಲಿದ್ದು, ಒಂದು ಮೀಟರ್ ಅಂತರದಲ್ಲಿ ಹಾಸಿಗೆ ವ್ಯವಸ್ಥೆ, 24 ಗಂಟೆ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹತ್ತು ಜನರಿಗೆ ಒಂದು ಟಾಯ್ಲೆಟ್ ವ್ಯವಸ್ಥೆ ಇರಲಿದೆ. ಆಂಬ್ಯುಲೆನ್ಸ್ ಸರ್ವಿಸ್ ಇರಲಿದ್ದು, ಪ್ರತಿ ದಿನ ಎರಡು ಸಲ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಇದನ್ನೆಲ್ಲ ಮೆಡಿಕಲ್ ಆಫೀಸರ್​ನಿಂದ ಮಾನಿಟರಿಂಗ್ ಮಾಡಲಾಗುತ್ತದೆ.

ಫುಡ್ ಮೆನು ಹೀಗಿರಲಿದೆ:

ಬೆಳಗ್ಗೆ ತಿಂಡಿಗೆ

ರವೆ ಇಡ್ಲಿ,ಪೊಂಗಲ್​, ಇಡ್ಲಿ,ಬಿಸಿ ಬೆಳೆಬಾತ್​, ಚೌಚೌ ಬಾತ್​ ,ಸೆಟ್ ದೋಸೆ.

ತಿಂಡಿ ನಂತರ ಬೆಳಗ್ಗೆ 10ಕ್ಕೆ:

ಕಲ್ಲಂಗಡಿಹಣ್ಣು, ಮಸ್ಕ್ ಮೆಲನ್ , ಪಪ್ಪಾಯ ಜೊತೆಗೆ ರಾಗಿ ಗಂಜಿ, ಪಾಲಕ್ ಸೂಪ್, ಟೊಮ್ಯಾಟೊ ಸೂಪ್, ರವಾ ಗಂಜಿ ಕ್ಯಾರೆಟ್ ಸೂಪ್.

ಮಧ್ಯಾಹ್ನ - ರಾತ್ರಿ ಊಟದ ಮೆನು:

2 ಚಪಾತಿ,ಪಲ್ಯ,ಅನ್ನ,ಮೊಸರು. ಊಟದ ನಂತರ ಫ್ಲೇವರ್ಡ್ ಮಿಲ್ಕ್.

ಕೊರೊನಾ ರೋಗಿಗಳ ಆಸ್ಪತ್ರೆ ವಾಸ ಇನ್ಮುಂದೆ 10 ದಿನಗಳು:

ಕೊರೊನಾ ರೋಗಿಗಳ ಆಸ್ಪತ್ರೆ ವಾಸ ಇನ್ಮುಂದೆ 10 ದಿನಗಳು ಮಾತ್ರ ಇರಲಿದೆ. ನೂತನ ಡಿಸ್ಚಾರ್ಜ್ ನಿಯಮಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ/ಪಡೆಯುತ್ತಿರುವ ಎಲ್ಲಾ ರೋಗಿಗಳಿಗೆ ಇದು ಅನ್ವಯವಾಗಲಿದೆ. ರೋಗ ಲಕ್ಷಣ ಇದ್ದ ಸಂದರ್ಭದಲ್ಲಿ ಸಂಪೂರ್ಣವಾಗಿ ಗುಣಮುಖರಾಗಿ, ಡಿಸ್ಚಾರ್ಜ್ ಆಗುವ ಮೂರು ದಿನಗಳಿಗೆ ಮುಂಚೆ ಯಾವುದೇ ರೋಗಲಕ್ಷಣ ಇಲ್ಲದೇ ಆರೋಗ್ಯ ಸ್ಥಿರವಾಗಿದ್ದರೆ ಮಾತ್ರ ಡಿಸ್ಚಾರ್ಜ್ ಮಾಡಲಾಗುತ್ತೆ.

ರೋಗಲಕ್ಷಣ ಇರದ ಸೋಂಕಿತರಿಗೆ ಡಿಸ್ಚಾರ್ಜ್ ವೇಳೆಯಲ್ಲಿ ಮತ್ತೊಮ್ಮೆ ರಕ್ತಪರೀಕ್ಷೆ ಇರೋದಿಲ್ಲ. ರೋಗಲಕ್ಷಣ ಇಲ್ಲದವರು ಆಸ್ಪತ್ರೆಯಲ್ಲಿರುವ 10 ದಿನಗಳಲ್ಲೂ ಆರೋಗ್ಯವಾಗಿದ್ದರೆ 11ನೇ ದಿನ ಮನೆಗೆ ತೆರಳಬಹುದು. ನಂತರ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಆಗಿರಬೇಕಾಗುತ್ತದೆ. ಲಘು ಅಥವಾ ತೀವ್ರ ರೋಗಲಕ್ಷಣ ಇರುವವರಿಗೆ ಸಂಪೂರ್ಣ ಗುಣಮುಖರಾದ ನಂತರ ರಕ್ತಪರೀಕ್ಷೆ ಮಾಡಲಾಗುತ್ತದೆ.

ABOUT THE AUTHOR

...view details