ಕರ್ನಾಟಕ

karnataka

ETV Bharat / state

ಜನಮನ ಮೆಚ್ಚುವಂತೆ.. ಸರ್ವಧರ್ಮೀಯರಿಗೆ ಫುಡ್​ ಕಿಟ್ ಜತೆ ನಗದು ನೆರವು ನೀಡಿದ ಶಾಸಕ ಜಮೀರ್ ಅಹಮದ್.. - MLA Jameer Ahmed Khan Distributes food kit

ಸರ್ವಧರ್ಮದ ಮುಖಂಡರು ದಯವಿಟ್ಟು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಮ್ಮ ಧರ್ಮದವರಿಗೆ ಮನವರಿಕೆ ಮಾಡಿ ಕೊಡಿ, ಕೋವಿಡ್ ನಿಯಂತ್ರಣಕ್ಕೆ ಇದಕ್ಕಿಂತ ಸುಲಭ ಉಪಾಯ ಬೇರೆ ಇಲ್ಲ. ಮಹಾಮಾರಿಯನ್ನು ದೇಶದಿಂದ ಸಂಪೂರ್ಣ ಹೊಡೆದೋಡಿಸಬೇಕಾಗಿದೆ..

mla-jameer-ahmed-khan
ಶಾಸಕ ಜಮೀರ್ ಅಹಮದ್ ಖಾನ್​

By

Published : Jun 9, 2021, 7:54 PM IST

ಬೆಂಗಳೂರು :ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಇಂದು ಸರ್ವಧರ್ಮ ಸಮನ್ವಯ ಮೆರೆಯುವ ಕಾರ್ಯ ಮಾಡಿದರು. ನಗರದ ಚಾಮರಾಜಪೇಟೆಯ ತಮ್ಮ ಕಚೇರಿ ಮುಂಭಾಗ ವಿಶೇಷವಾಗಿ ವೇದಿಕೆ ಸಿದ್ಧಪಡಿಸಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್​, ಜೈನ್ ಸೇರಿದಂತೆ ವಿವಿಧ ಧರ್ಮದ ಧಾರ್ಮಿಕ ಮುಖಂಡರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಿದರು.

ಶಾಸಕ ಜಮೀರ್ ಅಹಮದ್ ಖಾನ್​ ಮಾತನಾಡಿದರು

ಸರ್ವಧರ್ಮ ಗುರುಗಳಿಗೆ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ. ನಗದು ಹಾಗೂ 2 ತಿಂಗಳಿಗೆ ಬೇಕಾಗುವಷ್ಟು ದಿನಸಿ ಕಿಟ್, 1 ಸ್ಟೀಮರ್ ನೀಡಲಾಯಿತು. ಈ ವೇಳೆ ಸರ್ವಧರ್ಮದ ಮುಖಂಡರು ವೇದಿಕೆ ಮೇಲೆ ದೇಶವನ್ನು ಕಾಡುತ್ತಿರುವ ಕೋವಿಡ್ ಮಹಾಮಾರಿ ಆದಷ್ಟು ಬೇಗ ತೊಲಗಲಿ ಎಂದು ಪ್ರಾರ್ಥನೆ ಮಾಡಿದರು.

ಶಾಸಕ ಜಮೀರ್ ಅಹಮದ್ ವೇದಿಕೆ ಮೇಲೆ ಮನವಿ ಮಾಡಿಕೊಂಡು, ಸರ್ವಧರ್ಮದ ಮುಖಂಡರು ದಯವಿಟ್ಟು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಮ್ಮ ಧರ್ಮದವರಿಗೆ ಮನವರಿಕೆ ಮಾಡಿ ಕೊಡಿ, ಕೋವಿಡ್ ನಿಯಂತ್ರಣಕ್ಕೆ ಇದಕ್ಕಿಂತ ಸುಲಭ ಉಪಾಯ ಬೇರೆ ಇಲ್ಲ. ಮಹಾಮಾರಿಯನ್ನು ದೇಶದಿಂದ ಸಂಪೂರ್ಣ ಹೊಡೆದೋಡಿಸಬೇಕಾಗಿದೆ ಎಂದು ಕರೆ ಕೊಟ್ಟರು.

ನಾನು ನೀಡುತ್ತಿರುವುದು ದೊಡ್ಡ ಕಾಣಿಕೆಯಲ್ಲ:ಕಳೆದ ಒಂದೂವರೆ ತಿಂಗಳಿಂದ ಎಲ್ಲಾ ಧಾರ್ಮಿಕ ಕೇಂದ್ರ ಬಂದ್ ಆಗಿವೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಕಷ್ಟದಲ್ಲಿದ್ದಾರೆ. ನಮ್ಮ ಎಲ್ಲಾ ಸಮುದಾಯದ ಧಾರ್ಮಿಕ ನಾಯಕರು ಒಂದಾಗಿದ್ದಾರೆ ಎನ್ನುವುದನ್ನು ತೋರಿಸಲು ಒಂದೆಡೆ ಸೇರಿಸಿದ್ದೇನೆ. ನಾನು ನೀಡುತ್ತಿರುವುದು ದೊಡ್ಡ ಕಾಣಿಕೆಯಲ್ಲ. ಸರ್ಕಾರ ಈ ರೀತಿ ಎಲ್ಲಾ ಧರ್ಮದವರಿಗೂ ಸಹಕಾರ ನೀಡಲು ಮುಂದಾಗಬೇಕು. ದೇವರಿಗೆ ಸಮೀಪದಲ್ಲಿರುವವರು ಆರೋಗ್ಯವಾಗಿರಲಿ ಎಂದು ಈ ಕೊಡುಗೆ ನೀಡುತ್ತಿದ್ದೇನೆ. ಸರ್ಕಾರ 250 ಹಾಗೂ 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 10 ಸಾವಿರ ರೂ. ಹಣ ಹಾಕಿದರೆ ಎಲ್ಲಾ ಬಡವರಿಗೂ ಹಣ ಕೊಟ್ಟಂತೆ ಆಗಲಿದೆ ಎಂದರು.

ಕ್ಷೇತ್ರದ ಶಾಸಕರು ಸಹ ಅನುಕರಿಸಲಿ :ಧಾರ್ಮಿಕ ಮುಖಂಡರಿಗೆ ಆಹಾರದ ಕಿಟ್ ನೀಡುವ ಸಮಾರಂಭದಲ್ಲಿ 130 ಚಿಕ್ಕ ಆದಾಯರಹಿತ ದೇವಸ್ಥಾನಗಳ ಅರ್ಚಕರು, 55 ಮಸೀದಿಗಳ ಇಮಾಮ್ ಮತ್ತು ಮೌಸಾನ್, 45 ಚರ್ಚ್‌ಗಳ ಫಾದರ್, 4 ಸಿಖ್ ಸಂಘಟನೆ ಮಂದಿರಗಳ ಮುಖ್ಯಸ್ಥರು ಸೇರಿದಂತೆ ಒಟ್ಟು 380 ಮಂದಿಗೆ ಇದೇ ಸಂದರ್ಭ ಕಿಟ್ ನೀಡಿ ಗೌರವಿಸಲಾಯಿತು. ತಮ್ಮ ಈ ಕಾರ್ಯದಿಂದಾಗಿ ಇತರೆ ಕ್ಷೇತ್ರದ ಶಾಸಕರು ಸಹ ಅನುಕರಿಸಲಿ ಎಂದು ಜಮೀರ್ ಕರೆಕೊಟ್ಟರು.

ವಿಪರೀತ ಜನ ದಟ್ಟಣೆ :ಕಾರ್ಯಕ್ರಮ ನಡೆಯುತ್ತಿರುವ ವಿಚಾರ ತಿಳಿದ ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಸಮಾರಂಭ ಆಯೋಜಿಸಿದ್ದ ಸ್ಥಳಕ್ಕೆ ಬಂದು ತಮಗೂ ಆಹಾರದ ಕಿಟ್, ಹಣ ನೀಡುವಂತೆ ಮನವಿ ಮಾಡಿದರು. ಇವರನ್ನು ಮನವರಿಕೆ ಮಾಡುವುದು, ಗುಂಪಾಗಿ ನಿಲ್ಲದಂತೆ ಮನವರಿಕೆ ಮಾಡುವುದು, ಗುಂಪಾಗಿ ನಿಲ್ಲದಂತೆ ತಡೆಯುವುದು, ಮಾಸ್ಕ್ ಧರಿಸುವಂತೆ ಒತ್ತಾಯಿಸುವಷ್ಟರಲ್ಲಿ ಪೊಲೀಸರು ಹೈರಾಣಾದರು. ಕೊನೆಗೂ ತಮಗೆ ಆಹಾರದ ಕಿಟ್ ಸಿಗುವುದಿಲ್ಲ ಎನ್ನುವುದನ್ನು ಆಯೋಜಕರೇ ತಿಳಿಸಿದ ಮೇಲೆ ನಿಧಾನವಾಗಿ ಕೆಲವರು ತೆರಳಿದರು. ಉಳಿದವರನ್ನು ಪೊಲೀಸರು ಬಲವಂತವಾಗಿ ಕಳುಹಿಸಬೇಕಾಗಿ ಬಂತು.

ಓದಿ:ಇದು ಮೋದಿಯವರು ಕೊಡ್ತಾ ಇರುವ ಲಸಿಕೆ, ಅದರ ಕ್ರೆಡಿಟ್ ಅವರಿಗೆ ಸಲ್ಲುತ್ತದೆ : ಸಚಿವ ಆರ್ ಅಶೋಕ್

ABOUT THE AUTHOR

...view details