ಕರ್ನಾಟಕ

karnataka

ETV Bharat / state

ದಾನ ಮಾಡಲು ಹಣವಂತರೇ ಆಗಬೇಕಿಲ್ಲ, ಒಳ್ಳೆಯ ಮನಸ್ಸಿದ್ರೆ ಸಾಕು... ಈ ದಂಪತಿ ಸೇವೆ ಆದರ್ಶನೀಯ - bangalore latest news

ಲಾಕ್​ಡೌನ್​ನಿಂದಾಗಿ ಹಸಿವಿನಿಂದ ಬಳಲುತ್ತಿರುವುದನ್ನು ಕಂಡು ಜಾನ್​ ಮತ್ತು ಮಲ್ಲಿಕಾ ದಂಪತಿ ಹಸಿದವರಿಗೆ ಊಟ ನೀಡಬೇಕೆಂದು ನಿರ್ಧರಿಸಿದ್ದು, ಅವರ ಸ್ನೇಹಿತರು ಕೂಡಾ ಸಹಾಯ ಹಸ್ತ ಚಾಚಿದರು. ಈ ಬಡ ಕುಟುಂಬ ಜನರಿಂದ ಪಡೆದ ದವಸ ಧಾನ್ಯದಿಂದ ಆಹಾರ ತಯಾರಿಸಿ ಬಡವರಿಗೆ ಹಂಚುತ್ತಿದ್ದಾರೆ.

Food distribution by poor family
ದಾನ ಮಾಡಲು ಮನಸ್ಸಿದ್ದರೆ ಸಾಕು...ಇದೇ ಪ್ರತ್ಯಕ್ಷ ಉದಾಹರಣೆ!

By

Published : Apr 19, 2020, 1:57 PM IST

ಬೆಂಗಳೂರು: ನಗರದ ಶೇಷಾದ್ರಿಪುರದ ಪೌರಕಾರ್ಮಿಕನ ಕುಟುಂಬವೊಂದು ಜನರಿಂದ ಪಡೆದ ದವಸ ಧಾನ್ಯದಿಂದ ಆಹಾರ ತಯಾರಿಸಿ ಬಡವರಿಗೆ ಹಂಚುತ್ತಿದ್ದಾರೆ.

ಕಸ ವಿಲೇವಾರಿ ಮಾಡುವ ಬಡ ಜನರೇ ಈಗ ಮೆಜೆಸ್ಟಿಕ್ ಸುತ್ತ-ಮುತ್ತ ಹಸಿದ ನೂರಾರು ಜನರಿಗೆ ಊಟದ ಪ್ಯಾಕ್​ಗಳನ್ನು ವಿತರಿಸುತ್ತಿದ್ದಾರೆ. ಬಿಬಿಎಂಪಿ ಜೊತೆ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ಜಾನ್ ಹಾಗೂ ಆತನ ಕುಟುಂಬಸ್ಥರು ಈ ಅನ್ನ ನೀಡುವ ಕಾಯಕ ಮಾಡುತ್ತಿದ್ದಾರೆ‌. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರು ವಸಂತ ನಗರ ಹಾಗೂ ಡಾಲರ್ಸ್ ಕಾಲೋನಿಗೆ ಪ್ರತಿದಿನ ಹೋಗಿ ಕಸ ಸಂಗ್ರಹಿಸುತ್ತಾರೆ‌. ಮನೆ ಮಾಲೀಕರು ನೀಡುವ ಹಣವೇ ಇವರ ತಿಂಗಳ ಸಂಬಳವಾಗಿದೆ.

ದಾನ ಮಾಡಲು ಮನಸ್ಸಿದ್ದರೆ ಸಾಕು...ಇದೇ ಪ್ರತ್ಯಕ್ಷ ಉದಾಹರಣೆ!

ಜಾನ್ ಜೊತೆ ಪತ್ನಿ ಮಲ್ಲಿಕಾ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಇವರು ಲಾಕ್​ಡೌನ್​ನಿಂದಾಗಿ ಹಸಿವಿನಿಂದ ಬಳಲುತ್ತಿರುವುದನ್ನು ಕಂಡು ದಂಪತಿ ಹಸಿದವರಿಗೆ ಊಟ ನೀಡಬೇಕೆಂದು ನಿರ್ಧರಿಸಿದರು. ಈ ದಂಪತಿ ಆರಂಭದಲ್ಲಿ 50 ಜನರಿಗೆ ಮನೆಯಲ್ಲೇ ಅಡುಗೆ ಮಾಡಿ ಪಾರ್ಸೆಲ್ ಕಟ್ಟಿಕೊಂಡು ಸ್ಥಳಕ್ಕೆ ತೆರಳಿ ವಿತರಿಸುತ್ತಿದ್ದು, ಸಧ್ಯ ಈ ಕೆಲಸಕ್ಕೆ ಜಾನ್ ಸ್ನೇಹಿತರು ಕೂಡಾ ಸಾಥ್ ನೀಡಿದ್ದಾರೆ. ಇದರಂತೆ ದಿನಬಿಟ್ಡು ದಿನ 30 ಕೆ.ಜಿ.ರೈಸ್ ಬಾತ್ ಮಾಡಿ ವಿತರಿಸುತ್ತಿದ್ದಾರೆ. ನಮಗೆ ಕೊಟ್ಟಿರುವುದರಲ್ಲಿ ನಮ್ಮ ಕೈಲಾದಷ್ಟು ನಾವು ಸಹಾಯ ಮಾಡುತ್ತಿದ್ದೇವೆ. ಮೇ 3ರವರೆಗೂ ಆಹಾರ ವಿತರಿಸುವುದಾಗಿ ಈಟಿವಿ ಭಾರತ್​ಗೆ ಜಾನ್ ತಿಳಿಸಿದ್ದಾರೆ.

ABOUT THE AUTHOR

...view details