ಕರ್ನಾಟಕ

karnataka

ಕೊರೊನಾ ರೂಲ್ಸ್ ಬ್ರೇಕ್: ಫುಡ್​ ಡೆಲಿವರಿ ಬಾಯ್ಸ್​ಗೆ ತರಾಟೆ ತೆಗೆದುಕೊಂಡ ಯಲಹಂಕ‌ ಪೊಲೀಸರು

By

Published : May 12, 2021, 4:18 AM IST

ಫೇಸ್ ಮಾಸ್ಕ್ ಹಾಕದ ಸುಖಾ-ಸುಮ್ಮನೆ ಓಡಾಡುತ್ತಿದ್ದ ಫುಡ್ ಡೆಲಿವರಿ ಬಾಯ್ಸ್​ಗೆ ಯಲಹಂಕ ಟ್ರಾಫಿಕ್ ಇನ್ಸ್​ಪೆಕ್ಟರ್ ಮಂಜೇಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ‌.

yehalanka
yehalanka

ಬೆಂಗಳೂರು: ಲಾಕ್​ಡೌನ್ ನಿಯಮ ಉಲ್ಲಂಘನೆ ಮುಂದುವರೆದಿದ್ದು ಬೈಕ್ ಸವಾರರಿಗೆ ಸಂಚಾರ ಪೊಲೀಸರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಫೇಸ್ ಮಾಸ್ಕ್ ಹಾಕದ ಸುಖಾಸುಮ್ಮನೆ ಓಡಾಡುತ್ತಿದ್ದ ಫುಡ್ ಡೆಲಿವರಿ ಬಾಯ್ಸ್​ಗೆ ಯಲಹಂಕ ಟ್ರಾಫಿಕ್ ಇನ್ಸ್​ಪೆಕ್ಟರ್ ಮಂಜೇಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ‌.

ಯಲಹಂಕ ಸುತ್ತಾಮುತ್ತಾ ಸರಿಯಾಗಿ ಫೇಸ್ ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಈ ವೇಳೆ ಗಮನಿಸಿದ ಸಂಚಾರ ಪೊಲೀಸರು ಬೈಕ್​ಗಳನ್ನು ಅಡ್ಡಗಟ್ಟಿ ಎಲ್ಲರನ್ನೂ ನಿಲ್ಲಿಸಿದ್ದಾರೆ. ಡೆಲಿವರಿ ಬಾಯ್ಸ್ ಫೇಸ್ ಮಾಸ್ಕ್ ಸರಿಯಾಗಿ ಧರಿಸಿರಬೇಕು. ಫುಡ್ ಡೆಲಿವರಿ ಆರ್ಡರ್ ಇರದೆ ಅಥವಾ ಫುಡ್ ಕಿಟ್ ಬ್ಯಾಗ್ ಇಲ್ಲದಿರುವ ಬೈಕ್​ನಲ್ಲಿ ಬಂದರೆ ಬೈಕ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.

ಫುಡ್​ ಡೆಲಿವರಿ ಬಾಯ್ಸ್​ಗೆ ತರಾಟೆ ತೆಗೆದುಕೊಂಡ ಯಲಹಂಕ‌ ಪೊಲೀಸರು

ಸುಮ್ಮನೆ ಡೆಲಿವರಿ ಬಾಯ್ಸ್ ಎಂದು ಟೀ ಶರ್ಟ್ ಹಾಕಿಕೊಂಡು ಅಡ್ಡಾಡಿರುತ್ತಿರುವುದು ಗಮನಕ್ಕೆ ಬಂದಿದೆ. ಡೆಲಿವರಿ ಕೊಡುವ ವೇಳೆ ಮಾಸ್ಕ್ ಫೇಸ್ ಶೀಲ್ಡ್, ಸ್ಯಾನಿಟೈಸರ್ ನಿಮ್ಮ ಬಳಿ ಇರಲೇಬೇಕು. ಮಾಸ್ಕ್, ಫೇಸ್ ಶೀಲ್ಡ್ ಇಲ್ಲದಿದ್ದರೇ ಪಿಪಿಇ ಕಿಟ್ ಹಾಕಿ ಕಳಿಸಲಾಗುವುದು. ನಿಮ್ಮ ಕಂಪನಿಗೆ ಸರಿಯಾಗಿ ಕೊರೊನಾ ನಿಯಮ ಪಾಲನೆ ಮುಂದಾಗುವಂತೆ ಹೇಳಬೇಕು ಎಂದರು.

ನಿಯಮ ಪಾಲನೆ ಮಾಡುವುದಾದರೆ ಸರಿಯಾಗಿ ಮಾಡಿ. ಒಬ್ಬರು ದಿನಕ್ಕೆ ನೂರು ಮನೆಗೆ ಫುಡ್ ಡೆಲಿವರಿ ಮಾಡುತ್ತಿರಾ. ಅಜಾಗರೂಕತೆಯಿಂದ ಒಬ್ಬ ಸೋಂಕಿತ ನಿಮ್ಮ ಸಂಪರ್ಕಕ್ಕೆ ಬಂದರೆ ಉಳಿದ 99 ಮನೆಯವರಿಗೆ ತೊಂದರೆಯಾಗಲಿದೆ. ಇದು ಕಡೆಯ‌ ಎಚ್ಚರಿಕೆ. ನಿಯಮ ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದರು.

ABOUT THE AUTHOR

...view details