ಬೆಂಗಳೂರು:ಬಡ ಹಾಗೂ ಮಧ್ಯಮ ವರ್ಗದ ಜನರು ಬೀದಿ ಬದಿಯ ತಿಂಡಿ, ಊಟಕ್ಕೆ ಅವಲಂಬಿತರಾಗಿದ್ರು. ಆದ್ರೆ ಕಾಲರಾ ಹರಡಿರುವ ಹಿನ್ನೆ ಹಾಗೂ ಬಿಬಿಎಂಪಿ ಬೀದಿಬದಿಯ ಆಹಾರವನ್ನು ಪಾಲಿಕೆ ನಿಷೇಧ ಮಾಡಿರುವ ಹಿನ್ನಲೆ, ಗ್ರಾಹಕರು ಇಂದಿರಾ ಕ್ಯಾಂಟೀನ್ಗಳತ್ತ ಮುಖ ಮಾಡಿದ್ದಾರೆ.
ಶೇಕಡಾ 25ರಷ್ಟು ಗ್ರಾಹಕರ ಸಂಖ್ಯೆ ಹೆಚ್ಚಳವಾದ್ರೂ ಬಿಬಿಎಂಪಿ ಹೆಚ್ಚು ಆಹಾರ ನೀಡುವ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಗುತ್ತಿಗೆದಾರ ಗೋವಿಂದ ಪೂಜಾರಿ ತಿಳಿಸಿದ್ದಾರೆ.
ಒಂದು ತಿಂಗಳು ಉಚಿತ ಊಟಕ್ಕೆ ಪ್ರಸ್ತಾವನೆ ...
ಪಾಲಿಕೆಯ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಅವರು ಬಡ ಕೂಲಿ ಕಾರ್ಮಿಕರಿಗಾಗಿ ಒಂದು ತಿಂಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ, ತಿಂಡಿ ನೀಡುವಂತೆ ಮನವಿ ಮಾಡಿದ್ದಾರೆ.
ಒಂದು ತಿಂಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ, ತಿಂಡಿ ನೀಡುವಂತೆ ಮನವಿ ಈ ಬಗ್ಗೆ ಮಾತನಾಡಿರುವ ಮೇಯರ್ ಗೌತಮ್ ಕುಮಾರ್, ಹೆಚ್ಚು ಜನ ಇಂದಿರಾ ಕ್ಯಾಂಟೀನ್ ಗೆ ಬರುತ್ತಿದ್ದರೆ ಅವರಿಗೆ ಆಹಾರ ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳು, ಗುತ್ತಿಗೆದಾರರ ಜೊತೆಯೂ ಚರ್ಚಿಸಲಾಗುವುದು. ಬಡಜನರ ಆರೋಗ್ಯದ ಕಾಳಜಿಯಿಂದಲೇ ರಸ್ತೆಬದಿಯ ಫಾಸ್ಟ್ ಫುಡ್, ಚೈನೀಸ್ ಆಹಾರಗಳನ್ನು ನಿಷೇಧಿಸಲಾಗಿದೆ. ಉಚಿತವಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ನೀಡುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.