ಕರ್ನಾಟಕ

karnataka

ETV Bharat / state

ಅಹೋರಾತ್ರಿ ಧರಣಿ ನಿರತ ಕೈ ನಾಯಕರಿಗೆ ಭರ್ಜರಿ ಭೋಜನ ವ್ಯವಸ್ಥೆ - ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು, ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ

ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯದಿಂದ ಧರಣಿ ನಿರತ ಕೈ ಶಾಸಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

Food and bed supply for congress leader who protest in vidhan sabha
Food and bed supply for congress leader who protest in vidhan sabha

By

Published : Feb 17, 2022, 9:49 PM IST

ಬೆಂಗಳೂರು: ಅಹೋರಾತ್ರಿ ಧರಣಿ ನಿರತ ಕಾಂಗ್ರೆಸ್ ನಾಯಕರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯದಿಂದ ಧರಣಿ ನಿರತ ಕೈ ಶಾಸಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚಿ ಹೋಟೆಲ್​​​​​ನಿಂದ ಸಸ್ಯಹಾರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಊಟಕ್ಕೆ ಚಪಾತಿ, ಮುದ್ದೆ, ಫ್ರೂಟ್ಸ್ ಸಲಾಡ್, ಅನ್ನ, ರಸಂ, ಸಾಂಬಾರ್, ತರಕಾರಿ ಸಲಾಡ್, ಪಲ್ಯ,ರೈಸ್ ಬಾತ್, ಮೊಸರು, ಡ್ರೈ ಜಾಮ್ ಸೇರಿದಂತೆ ಒಟ್ಟು 15 ತರಹದ ಪದಾರ್ಥಗಳು ಇವೆ. ಒಟ್ಟು 120 ಜನಕ್ಕೆ ಊಟ ಪೂರೈಕೆ ಮಾಡಲಾಗಿದೆ.

ಇದನ್ನೂ ಓದಿ:ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ

ಬೆಡ್ ವ್ಯವಸ್ಥೆ:ಅಹೋರಾತ್ರಿ ಧರಣಿ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ವಿಧಾನಸಭೆ ಸಚಿವಾಲಯದಿಂದ ಬೆಡ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಒಟ್ಟು ಎಂಬತ್ತು ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಹೊಸ ಬೆಡ್,ದಿಂಬು, ಹೊದಿಕೆಗಳನ್ನು ಪೂರೈಸಲಾಗಿದೆ.

For All Latest Updates

TAGGED:

ABOUT THE AUTHOR

...view details