ಬೆಂಗಳೂರು:ಜಾನಪದ ಲೋಕ ಬೆಳ್ಳಿ ಹಬ್ಬ ಮಹೋತ್ಸವ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ನೆರವೇರಿತು.
ಜಾನಪದ ಲೋಕ ಬೆಳ್ಳಿ ಹಬ್ಬ ಮಹೋತ್ಸವ: 27 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಜಾನಪದ ಲೋಕ ಬೆಳ್ಳಿ ಹಬ್ಬ ಮಹೋತ್ಸವ ಸಮಾರಂಭದಲ್ಲಿ ಜಾನಪದ ಜಗತ್ತು ಎಂಬ ಬೆಳ್ಳಿ ಹಬ್ಬ ಸಂಚಿಕೆ ಮತ್ತು ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ, ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಬಿಡುಗಡೆ ಮಾಡಿದರು. ನಂತರ ಮಾತಾನಾಡಿದ ಸಚಿವ ಸಿ ಟಿ ರವಿ, ಜಾನಪದ ಅನ್ನೋದು ತಾಯಿ ಬೇರು ಇದ್ದಂತೆ. ಹೀಗಾಗಿ ಸಂರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಸರ್ಕಾರ ಪ್ರೋತ್ಸಾಹ ಕೊಟ್ಟರು ಕೊಡದೇ ಇದ್ದರೂ, ಬೆಳೆದುಕೊಂಡು ಹೋಗುತ್ತಲೇ ಇರುತ್ತದೆ ಎಂದರು.
ಜಾನಪದ ಲೋಕ ಬೆಳ್ಳಿ ಹಬ್ಬ ಮಹೋತ್ಸವ ಜಾನಪದ ಲೋಕದಲ್ಲಿ ಜಾನಪದ ಜಗತ್ತಯ ರಾಜಸ್ತಾನಿ ಮಾದರಿಯ ಚೌಕಿದಾನಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಾಗ, ಮುಖ್ಯಮಂತ್ರಿಯೊಂದಿಗೆ ಮಾತಾಡಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗುವುದು ಎಂದರು. ಅರ್ಹ ಕಲಾವಿದರಿಗೆ ಮಾಸಶನ ದೊರೆಯದೇ ಇರುವ ಬಗ್ಗೆ ಅಧ್ಯಕ್ಷರು ಮನವಿ ಮಾಡಿದಾಗ, ಗೌರವ ಧನ ಸಂಬಂಧ ಪಟ್ಟಂತೆಯು ಮೇ ತಿಂಗಳೊಳಗೆ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಾನಪದ ಲೋಕ ಬೆಳ್ಳಿ ಹಬ್ಬ ಮಹೋತ್ಸವ ಸಮಾರಂಭದಲ್ಲಿ 15 ಜಾನಪದ ಕಲಾವಿದರಿಗೆ, 12 ಜನ ವಿದ್ವಾಂಸರಿಗೆ, ಜಾನಪದ ಕ್ಷೇತ್ರದಲ್ಲಿ ದುಡಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು. ಇದೇ ವೇಳೆ ಆದಿಚುಂಚನಗಿರಿಯ ಪೀಠಾಧ್ಯಕ್ಷ, ಡಾ ನಿರ್ಮಲಾನಂದನಾಥ್ ಸ್ವಾಮೀಜಿ, ಹಿರಿಯ ಸಾಹಿತಿ ಸಿದ್ದಲಿಂಗಯ್ಯ , ಜಾನಪದ ವಿದ್ವಾಂಸರು ಗೊ.ರು ಚನ್ನಬಸಪ್ಪ ಸೇರಿದಂತೆ ಇತರರು ಭಾಗಿಯಾಗಿದರು. ಕೊನೆ ಕ್ಷಣದಲ್ಲಿ ಗೈರಾದ ಸಿಎಂ:ಜಾನಪದ ಲೋಕ ಬೆಳ್ಳಿ ಹಬ್ಬದ ಮಹೋತ್ಸವಕ್ಕೆ ಸಿಎಂ ಯಡಿಯೂರಪ್ಪ ಬರಬೇಕಿತ್ತು. ಆದರೆ ವಾರಣಾಸಿಯಿಂದ ಬರುವುದು ತಡವಾದ ಕಾರಣ, ಕೊನೆ ಕ್ಷಣದಲ್ಲಿ ಸಮಾರಂಭದಲ್ಲಿ ಗೈರಾದರು..